ಕೊನೆಗೂ ಈರುಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ : ಎಷ್ಟಿದೆ ಗೊತ್ತಾ ಇಂದಿನ ದರ ?

ನವದೆಹಲಿ : ಅತಿವೃಷ್ಟಿಯಿಂದಾಗಿ ಈರುಳ್ಳಿಯ ಬೆಳೆ ನೆಲಕಚ್ಚುತ್ತಿದ್ದಂತೆಯೇ ನೂರರ ಗಡಿದಾಟಿದ್ದ ಈರುಳ್ಳಿಯ ಬೆಲೆಯಲ್ಲಿ ಇಳಿಕೆಯನ್ನು ಕಂಡಿದೆ. ಇದರಿಂದಾಗಿ ಗ್ರಾಹಕರು ಕೊಂಚಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಮಹಾರಾಷ್ಟ್ರ, ಉತ್ತರ ಕರ್ನಾಟಕ, ಆಂಧ್ರ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಸಾಧ್ಯವಾಗಿರಲಿಲ್ಲ. ಇನ್ನೊಂದೆಡೆ ಪ್ರವಾಹದಿಂದಾಗಿ ಈರುಳ್ಳಿ ಬೆಲೆ ನೆಲಕಚ್ಚಿದ್ದು, ನೂರರ ಗಡಿ ದಾಟಿದ್ದ ಈರುಳ್ಳಿಯ ಬೆಲೆ 150 ರೂಪಾಯಿಗೆ ಏರಿಕೆಯಾಗುತ್ತೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದ್ರೀಗ ಈರುಳ್ಳಿಯ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯನ್ನು ಕಂಡಿದೆ.

ಏಷ್ಯಾದ ಅತಿ ದೊಡ್ಡ ಹೋಲ್​ಸೇಲ್ ಈರುಳ್ಳಿ ಮಾರುಕಟ್ಟೆ ಲಸಲ್​ಗಾಂವ್​ನಲ್ಲಿ ಕೆಜಿ ಈರುಳ್ಳಿಗೆ 5 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಈ ಮಾರುಕ್ಟೆಯಲ್ಲಿ ಈರುಳ್ಳಿ ಬೆಲೆ 51 ರೂಪಾಯಿಗೆ ಇಳಿಕೆಯಾಗಿದೆ.

ಬೆಂಗಳೂರು, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿಯೂ ಈರುಳ್ಳಿಯ ಬೆಲೆಯಲ್ಲಿ ಇಳಿಕೆ ಯಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಈರುಳ್ಳಿಯ ಬೆಲೆಯಲ್ಲಿ 5 ರಿಂದ 6 ರೂಪಾಯಿ ಇಳಿಕೆ ಯನ್ನು ಕಂಡು 64 ರೂಪಾಯಿಗೆ ತಲುಪಿದೆ. ಈರುಳ್ಳಿಯ ಪೂರೈಕೆ ಮಾರುಕಟ್ಟೆಗೆ ಆದ್ರೆ ಬೆಲೆ ಇನ್ನೂ ಇಳಿಕೆಯಾಗುವ ಸಾಧ್ಯತೆಯಿದೆ.

ಆದರೆ ಪ್ರವಾಹದಿಂದಾಗಿ ಈಗಾಗಲೇ ಈರುಳ್ಳಿ ಬೆಳೆ ನೆಲಕಚ್ಚಿದೆ. ಹೀಗಾಗಿ ಇಳುವರಿ ಕುಂಠಿತ ವಾಗುವ ಸಾಧ್ಯೆತೆಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈರುಳ್ಳಿಯ ಬೆಲೆ ಗಗನಕ್ಕೇರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

Comments are closed.