ಈಗಾಗಲೇ ಒಮ್ಮೆ ವೇಶ್ಯಾವಾಟಿಕೆ ಆರೋಪದಡಿಯಲ್ಲಿ ಬಂಧನಕ್ಕೊಳಗಾದ ನಟಿಮಣಿಯೊಬ್ಬರು ಮತ್ತೊಮ್ಮೆ ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಅದು ಮತ್ಯಾರು ಅಲ್ಲ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಶ್ವೇತಾಬಸುಪ್ರಸಾದ್.

2008 ರಲ್ಲಿ ಕೊತ್ತ ಬಂಗಾರ ಲೋಕಂ ಎಂಬ ತೆಲುಗು ರೋಮ್ಯಾಂಟಿಕ್ ಚಿತ್ರದ ಮೂಲಕ ಸೌತ್ ಸಿನಿಇಂಡಸ್ಟ್ರಿ ಪ್ರವೇಶಿಸಿದ ಶ್ವೇತಾ ಬಸುಪ್ರಸಾದ್ ಸಿನಿಮಾ ಬದುಕಿಗಿಂತ ವೈಯಕ್ತಿಕ ಬದುಕೇ ಸಾಕಷ್ಟು ಸುದ್ದಿ ಮಾಡಿತ್ತು. 2014 ರಲ್ಲಿ ವೇಶ್ಯಾವಾಟಿಕೆ ಆರೋಪದ ಅಡಿಯಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಶ್ವೇತಾ ಬಳಿಕ ಅಲ್ಲಿಂದ ಹೊರಬಂದು ಹೊಸ ಬದುಕು ಕಟ್ಟಿಕೊಂಡಿದ್ದರು.

ಬಾಲ್ಯದಿಂದಲೂ ಹಿಂದಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದ ಶ್ವೇತಾ ಬಸುಪ್ರಸಾದ್, ಬಾಲನಟಿಯಾಗಿಯೇ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದರು. 2018 ರಲ್ಲಿ ವಿವಾಹವಾಗಿ ಒಂದೇ ವರ್ಷದಲ್ಲಿ ವಿಚ್ಛೇಧನ ಪಡೆದ ಶ್ವೇತಾ ಸಧ್ಯ ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಕಾಣಿಸಿಕೊಂಡಿರೋದು ದೊಡ್ಡ ಸುದ್ದಿಯಾಗಿದೆ.

ಆದರೆ ಈ ಭಾರಿ ಶ್ವೇತಾ ರೆಡ್ ಲೈಟ್ ಏರಿಯಾದಲ್ಲಿ ಕಾಣಿಸಿಕೊಂಡಿರೋದು ಮುಂಬೈನ ಸೆಕ್ಸ್ ವರ್ಕರ್ಸ್ ಗಳ ಸಂಕಷ್ಟ ಅರಿಯಲು. ಕೊರೋನಾದಿಂದ ಎಲ್ಲ ಉದ್ಯಮಗಳು ನೆಲಕಚ್ಚಿವೆ. ಇದಕ್ಕೆ ಸೆಕ್ಸ್ ದಂಧೆಯೂ ಹೊರತಲ್ಲ. ಈ ಕರಾಳಲೋಕದಲ್ಲೂ ಕರೋನಾ ಅನ್ನಕ್ಕೆ ತತ್ವಾರದ ದಿನಗಳನ್ನು ತಂದಿಟ್ಟಿದೆ.

ರೆಡ್ ಲೈಟ್ ಏರಿಯಾದ ಸಂಕಷ್ಟ ಆಧರಿಸಿ ನಿರ್ದೇಶಕ ಮಧುಭಂಡಾರ್ಕರ್ ಇಂಡಿಯಾ ಲಾಕ್ ಡೌನ್ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸುತ್ತಿರುವ ಶ್ವೇತಾ ರೆಡ್ ಲೈಟ್ ಏರಿಯಾದ ಭಾಷೆ-ಬದುಕನ್ನು ಅರಿಯುವ ಸಲುವಾಗಿ ನಿರ್ದೇಶಕರ ಜೊತೆ ಅಲ್ಲಿಗೆ ಭೇಟಿ ನೀಡಿದ್ದಾರೆ. ‘

ಈ ಬಗ್ಗೆ ವಿವರಣೆ ನೀಡಿರುವ ಶ್ವೇತಾ, ಈ ಚಿತ್ರದಲ್ಲಿ ನಾನು ಮೆಹ್ರುನಿಸ್ಸಾ ಎಂಬ ಲೈಂಗಿಕ ಕಾರ್ಯಕರ್ತೆಯ ಪಾತ್ರಕ್ಕೆ ಬಣ್ಣಹಚ್ಚುತ್ತಿದ್ದೇನೆ. ಅವರ ಬದುಕನ್ನು ಹತ್ತಿರದಿಂದ ಗಮನಿಸದೇ ಇದ್ದರೇ ನಾನು ಪ್ರೇಕ್ಷಕರೊಂದಿಗೆ ಕನೆಕ್ಟ್ ಆಗಲು ಸಾಧ್ಯವಿಲ್ಲ. ಹೀಗಾಗಿ ಅಲ್ಲಿನ ಹೃದಯ ವಿದ್ರಾವಕ ಕತೆ ಅರಿಯಲು ಹೋಗಿದ್ದೆ ಎಂದಿದ್ದಾರೆ.