ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ….! ತೆರೆಗೆ ಬರಲು ಸಿದ್ಧವಾಗಿದೆ ಕೋಟಿಗೊಬ್ಬ-3…!

ಮೊನ್ನೆ-ಮೊನ್ನೆಯಷ್ಟೇ ಬುರ್ಜ್ ಖಲೀಫಾದಲ್ಲಿ ತಮ್ಮ ಹೊಸ ಸಿನಿಮಾದ ಲೋಗೋಲಾಂಚ್ ಪೊರೈಸಿ ಕನ್ನಡಿಗರ ಹೆಮ್ಮೆಯ ಆರಡಿ ಕಟೌಟ್ ಪ್ರತಿಷ್ಠಾಪಿಸಿ ಹೊಸ ದಾಖಲೆ ಬರೆದ ಅಭಿನಯ ಚಕ್ರವರ್ತಿ ಕಿಚ್ಚಸುದೀಪ್ ಈಗ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ.

ವಿಕ್ರಾಂತ್ ರೋಣಗೂ ಮೊದಲು ಸುದೀಪ್ ಸದ್ದು ಮಾಡಿದ್ದ ಸಿನಿಮಾ ಕೋಟಿಗೊಬ್ಬ ಕೂಡ ಸಧ್ಯದಲ್ಲೇ ರಿಲೀಸ್ ಆಗಲಿದ್ದು, ಸುದೀಪ್ ಅಭಿಮಾನಿಗಳಿಗೆ ಒಂದರ ಮೇಲೊಂದು ಭೂರಿಭೋಜನ ಸಿಗಲಿದೆ. ಸಧ್ಯ ಶೂಟಿಂಗ್,ಪ್ರೊಡಕ್ಷನ್ ವರ್ಕ್ ಎಲ್ಲ ಮುಗಿಸಿರುವ ಕೋಟಿಗೊಬ್ಬ-3 ಯುಗಾದಿ ಬಳಿಕ ತೆರೆಗೆ ಬರಲಿದೆ.

ಈ ಖುಷಿ ಸುದ್ದಿಯನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಬೇಕಿದೆ. ಈಗಾಗಲೇ ಸುದೀಪ್ ಕೋಟಿಗೊಬ್ಬ ಪ್ರಮೋಶನ್ ಕಾರ್ಯದಲ್ಲಿ ತೊಡಗಿಕೊಳ್ಳಲು ಸಿದ್ಧವಾಗಿದ್ದು, ಮೂಲಗಳ ಮಾಹಿತಿ ಪ್ರಕಾರ  ಏಪ್ರಿಲ್ 29 ಶುಕ್ರವಾರ ಕೋಟಿಗೊಬ್ಬ ಸಿಕ್ವೆನ್ಸ್ ನ ಮೂರನೇ ಚಿತ್ರ ಕೋಟಿಗೊಬ್ಬ -3 ತೆರೆಗೆ ಬರಲಿದೆ.

ವಿಕ್ರಾಂತ್ ರೋಣ ಬಳಿಕ ಅದ್ದೂರಿಯಾಗಿ ಕೋಟಿಗೊಬ್ಬ ಪ್ರಮೋಶನ್ ಗೂ ಸುದೀಪ್ ಹಾಗೂ ತಂಡ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ. ಮಾರ್ಚ್ 28 ರಂದು  ಭರ್ಜರಿ ಸಮಾರಂಭದಲ್ಲಿ ಕೋಟಿಗೊಬ್ಬ-3 ಹಾಡುಗಳ ಬಿಡುಗಡೆ ನಡೆಯಲಿದ್ದು, ಈಗಾಗಲೇ ಕಾರ್ಯಕ್ರಮದ ಸಿದ್ಧತೆ ಆರಂಭಿಸಿದೆ ಚಿತ್ರತಂಡ.

ವಿಕ್ರಾಂತ್ ರೋಣ ಅಗಸ್ಟ್ ಅಂತ್ಯ ಅಥವಾ ಸಪ್ಟೆಂಬರ್ ಆರಂಭದಲ್ಲಿ ತೆರೆ ಕಾಣುವ ಸಾಧ್ಯತೆ ಇದೆ. ಹೀಗಾಗಿ ಇದಕ್ಕೂ ಮುನ್ನವೇ ಕೋಟಿಗೊಬ್ಬ-3 ತೆರೆಗೆ ತರಲು ಚಿತ್ರತಂಡ ಮುಹೂರ್ತ ನಿಗದಿಪಡಿಸಿದೆ.  ಸೂರಪ್ಪ ಬಾಬು ಬಂಡವಾಳ ಹೂಡಿರುವ ಈ ಚಿತ್ರ ಸಾಕಷ್ಟು ನೀರಿಕ್ಷೆ ಹುಟ್ಟಿಸಿದೆ.

ಅದ್ದೂರಿ ತಾರಾಗಣವಿರುವ ಈ ಚಿತ್ರದಲ್ಲಿ ಸುದೀಪ್ ಗೆ ಮಲೆಯಾಳಂ ಬೆಡಗಿ ಮಡೋನ್ನಾ ಸೆಬಾಸ್ಟಿಯನ್ ಜೊತೆಯಾಗಿದ್ದು,ಬಾಲಿವುಡ್ ನ ಅಫ್ತಾಬ್ ಶಿವದಾಸನಿ, ಶೃದ್ಧಾದಾಸ್ ಹಾಗೂ ರವಿಶಂಕರ್ ಸೇರಿದಂತೆ ಹಲವು ಪ್ರಮುಖ ನಟರು ನಟಿಸಿದ್ದಾರೆ.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ಶಿವಕಾರ್ತೀಕ್ ಆಕ್ಷ್ಯನ್ ಕಟ್ ಹೇಳಿದ್ದಾರೆ. ಸುದೀಪ್ ಸ್ಯಾಂಡಲ್ ವುಡ್ ನಲ್ಲಿ 25 ವರ್ಷಗಳನ್ನು ಪೊರೈಸಿದ ಸಂಭ್ರಮದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಅಭಿಮಾನಿಗಳು ಕಾತುರರಾಗಿ ಕಾಯ್ತಿದ್ದಾರೆ.

Comments are closed.