ಸೋಮವಾರ, ಏಪ್ರಿಲ್ 28, 2025
HomeBreakingಮಹಾರಾಷ್ಟ್ರ ಸಿಎಂಗೆ ಕೊರೋನಾ ಭೀತಿ…! ಉದ್ಧವ್ ಠಾಕ್ರೆ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾದ ಅಮೀರ್ ಖಾನ್ ಗೆ...

ಮಹಾರಾಷ್ಟ್ರ ಸಿಎಂಗೆ ಕೊರೋನಾ ಭೀತಿ…! ಉದ್ಧವ್ ಠಾಕ್ರೆ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾದ ಅಮೀರ್ ಖಾನ್ ಗೆ ಸೋಂಕು..!!

- Advertisement -

ಕೊರೋನಾ ಎರಡನೇ ಅಲೆಯ ಆತಂಕ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಬಾಲಿವುಡ್ ಮಿಸ್ಟರ್ ಫರ್ಫೆಕ್ಟ್ ಅಮೀರ್ ಖಾನ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಸಧ್ಯ ನಿವಾಸದಲ್ಲೇ ಇರುವ ಅಮೀರ್ ಖಾನ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

56 ವರ್ಷದ ಅಮೀರ್ ಖಾನ್ ಕೆಲದಿನಗಳಿಂದ ಜ್ವರ , ಶೀತದಿಂದ ಬಳಲುತ್ತಿದ್ದು, ಪರೀಕ್ಷೆಗೊಳಪಟ್ಟಾಗ ಕೊರೋನಾ ಸೋಂಕು ತಗುಲಿರೋದು ಧೃಡಪಟ್ಟಿದೆ. ಸಧ್ಯ ಮನೆಯಲ್ಲೇ ಕ್ವಾರಂಟೈನ್ ಆಗಿರೋ ಅಮೀರ್ ಖಾನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ‘

ಅಮೀರ್ ಖಾನ್ ಸೋಷಿಯಲ್ ಮೀಡಿಯಾದಿಂದ ಹೊರಗುಳಿದಿರೋದರಿಂದ ಅಮೀರ್ ಖಾನ್ ಪರ ವಕ್ತಾರರು ಸಂಗತಿಯನ್ನು ಖಚಿತಪಡಿಸಿದ್ದು, ಕೆಲದಿನಗಳಿಂದ ಅಮೀರ್ ಖಾನ್ ಸಂಪರ್ಕಕ್ಕೆ ಬಂದವರೆಲ್ಲ ಕೊರೋನಾ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿದ್ದಾರೆ.

ಕುತೂಹಲಕರ ಸಂಗತಿ ಎಂದರೇ, ಸೋಮವಾರ ಅಮೀರ್ ಖಾನ್, ವಿಶ್ವಜಲದಿನಾಚರಣೆ ಅಂಗವಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆ ಹಂಚಿಕೊಂಡಿದ್ದರು.

ಸಿಎಂ ಜೊತೆ ಕಾಣಿಸಿಕೊಂಡ ಎರಡು ದಿನಗಳಲ್ಲೇ ಅಮೀರ್ ಖಾನ್ ಸೋಂಕಿಗೆ ತುತ್ತಾಗಿರೋದರಿಂದ ಸಿಎಂ ಉದ್ಧವ್ ಠಾಕ್ರೆಗೂ ಕೊರೋನಾ ಭೀತಿ ಎದುರಾಗಿದೆ.

ಸಧ್ಯ ಲಾಲ್ ಸಿಂಗ್ ಚಡ್ಡಾ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ  ಬ್ಯುಸಿಯಾಗಿದ್ದು, ಚಿತ್ರ ಡಿಸೆಂಬರ್ ವೇಳೆಗೆ ರಿಲೀಸ್ ಆಗಲಿದೆ. ಮೊನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಅಮೀರ್ ಖಾನ್ ಯಾವುದೇ ಸೂಕ್ತ ಕಾರಣ ನೀಡದೇ ಸೋಷಿಯಲ್ ಮೀಡಿಯಾದಿಂದ ಹೊರಕ್ಕೆ ಹೋಗುತ್ತಿರುವುದಾಗಿ ಅನೌನ್ಸ್ ಮಾಡಿದ್ದರು.

RELATED ARTICLES

Most Popular