ಭಾರತೀಯ ಚಿತ್ರರಂಗಕ್ಕೆ ನಟಿ ವಿದ್ಯಾಬಾಲನ್ ನೀಡಿದ ಗೌರವ ಪರಿಗಣಿಸಿ ಭಾರತೀಯ ಸೇನೆ, ತನ್ನ ತರಬೇತಿ ಸ್ಥಳಕ್ಕೆ ವಿದ್ಯಾಬಾಲನ್ ಹೆಸರು ಇಡುವ ಮೂಲಕ ಗೌರವಿಸಿದೆ.

ಕಾಶ್ಮೀರದ ಗುಲ್ಮಾರ್ಗ್ನ್ ನಲ್ಲಿರುವ ಮಿಲಿಟರಿ ಫೈರಿಂಗ್ ರೇಂಜ್ ಗೆ ವಿದ್ಯಾಬಾಲನ್ ಹೆಸರು ನಾಮಕರಣ ಮಾಡಲಾಗಿದೆ. ಈ ಹಿಂದೆ ವಿದ್ಯಾಬಾಲನ್ ಕಾಶ್ಮೀರದ ಗುಲ್ಮಾರ್ಗ್ನ್ ನಲ್ಲಿ ನಡೆದ ಗುಲ್ಮಾರ್ಗ್ನ್ ವಿಂಟರ್ ಫೆಸ್ಟಿವಲ್ ನಲ್ಲಿ ಪತಿ ಸಿದ್ಧಾರ್ಥ್ ರಾಯ್ ಕಪೂರ್ ಜೊತೆ ಭಾಗವಹಿಸಿದ್ದರು.

ಮಿಲಿಟರಿ ಫೈರಿಂಗ್ ರೇಂಜ್ ಗೆ ವಿದ್ಯಾಬಾಲನ್ ಹೆಸರು ಇಟ್ಟಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಾಲಿವುಡ್ ನಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಆದರೆ ಈ ವಿಚಾರದ ಕುರಿತು ಇದುವರೆಗೂ ವಿದ್ಯಾಬಾಲನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚಿಗಷ್ಟೇ ವಿದ್ಯಾಬಾಲನ್, ಆಸ್ಕರ್ ಆಡಳಿತ ಮಂಡಳಿಯ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ ಆಂಡ್ ಸೈನ್ಸ್ ನಲ್ಲಿ ಕಾರ್ಯನಿರ್ವಾಹಕ ಸದಸ್ಯರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾಬಾಲನ್ ನಟಿಸಿದ್ದ ಶೇರ್ನಿ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿದ್ಯಾಬಾಲನ್ ಅರಣ್ಯಾಧಿಕಾರಿ ಪಾತ್ರದಲ್ಲಿ ಮಿಂಚಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.

ಅಲ್ಲದೇ ನಿರ್ದೇಶಕ ಸುರೇಶ್ ತ್ರಿವೇಣಿ ಜೊತೆ ತುಮ್ಹಾರಿ ಸುಲು ಚಿತ್ರದಲ್ಲೂ ವಿದ್ಯಾಬಾಲನ್ ಬ್ಯುಸಿಯಾಗಿದ್ದಾರೆ.