ಮುಂಬೈ: ಸಹೋದರನ ಮದುವೆ ಹಾಗೂ ನವರಾತ್ರಿ ಸಂಭ್ರಮದಲ್ಲಿದ್ದ ಬಾಲಿವುಡ್ ನ ಬ್ರೇವ್ ಗರ್ಲ್ ಕಂಗನಾ ರನಾವುತ್ ಗೆ ಅತ್ಯಾಚಾರದ ಬೆದರಿಕೆ ಎದುರಾಗಿದೆ. ಒಡಿಸ್ಸಾ ಮೂಲದ ವಕೀಲರೊಬ್ಬರ ಪೇಸ್ ಬುಕ್ ಅಕೌಂಟ್ ನಿಂದ ಬೆದರಿಕೆ ಬಂದಿದ್ದು, ಕಂಗನಾ ಅಭಿಮಾನಿಗಳು ಆತನ ವಿರುದ್ಧ ಮುಗಿಬಿದ್ದಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಧರ್ಮ ಹಾಗೂ ಕೋಮುಗಳ ನಡುವೆ ಸಾಮರಸ್ಯ ಕದಡುತ್ತಾರೆ ಎಂದು ಆರೋಪಿಸಿ ನಿರ್ದೇಶಕರೊಬ್ಬರ ದೂರಿನ ಮೇರೆಗೆ ನ್ಯಾಯಾಲಯ ಕಂಗನಾ ವಿರುದ್ಧ ಎಫ್ಆಯ್ ಆರ್ ದಾಖಲಿಸಿಕೊಳ್ಳಲು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಮುಂಬೈನ ಪೊಲೀಸ್ ಠಾಣೆಯೊಂದರಲ್ಲಿ ಎಫ್ಆಯ್ ಆರ್ ದಾಖಲಾಗಿದೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದ ಕಂಗನಾ, ಎಲ್ಲರೂ ನವರಾತ್ರಿ ಉಪವಾಸ ಮಾಡುತ್ತಿದ್ದಾರೆ. ನಾನು ನವರಾತ್ರಿ ಉಪವಾಸದಲ್ಲಿದ್ದೆ. ಅಷ್ಟರಲ್ಲಿ ನನ್ನ ವಿರುದ್ಧ ಎಫ್ ಆಯ್ ಆರ್ ಆಗಿರುವ ಸುದ್ದಿ ತಿಳಿಯಿತು. ನಾನು ಶೀಘ್ರದಲ್ಲೇ ಅಲ್ಲಿಗೆ ಬರುತ್ತೇನೆ. ನನ್ನ ಮಿಸ್ ಮಾಡಿಕೊಳ್ಳಬೇಡಿ ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಗೆ ಸಾಕಷ್ಟು ರೀ ಟ್ವೀಟ್ ಹಾಗೂ ಕಮೆಂಟ್ ಗಳು ಬಂದಿವೆ. ಇದೇ ಕಮೆಂಟಿನಲ್ಲಿ ಒಡಿಸ್ಸಾ ಮೂಲದ ವಕೀಲರೊಬ್ಬರ ಅಕೌಂಟ್ ನಿಂದ ಅತ್ಯಾಚಾರದ ಬೆದರಿಕೆ ಬಂದಿದ್ದು, ನಿನ್ನನ್ನು ನಗರ ಮಧ್ಯದಲ್ಲಿ ಅತ್ಯಾಚಾರ ಮಾಡಬೇಕೆಂದು ಬೆದರಿಕೆ ಹಾಕಲಾಗಿದೆ.

ಮೇಹಂದಿ ರೇಜಾ ಎಂಬ ಹೆಸರಿನ ವಕೀಲನ ಟ್ವೀಟ್ ಅಕೌಂಟ್ ನಿಂದ ಈ ಕಮೆಂಟ್ ಬಂದಿದೆ. ಆದರೆ ಈ ಕಮೆಂಟ್ ವೈರಲ್ ಆಗುತ್ತಿದ್ದಂತೆ ಮೆಹಂದಿ ರಹೇಜಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ನನ್ನ ಟ್ವೀಟ್ ಅಕೌಂಟ್ ಹ್ಯಾಕ್ ಆಗಿದೆ. ಹೀಗಾಗಿ ಅದರಲ್ಲಿ ಬಂದಿರೋ ಪೋಸ್ಟ್ ಗೂ ನನಗೂ ಸಂಬಂಧವಿಲ್ಲ. ನಾನು ಯಾವುದೇ ರೀತಿಯಲ್ಲೂ ಮಹಿಳೆಯರ ಗೌರವಕ್ಕೆ ಚ್ಯುತಿ ಬರುವಂತೆ ವರ್ತಿಸಿಲ್ಲ ಎಂದಿದ್ದಾರೆ.

ಅಷ್ಟೇ ಅಲ್ಲ ಅತ್ಯಾಚಾರದ ಬೆದರಿಕೆಯನ್ನು ಡಿಲೀಟ್ ಮಾಡಲಾಗಿದೆ. ಆದರೆ ಈ ಬಗ್ಗೆ ಕಂಗನಾ ರನಾವುತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಧ್ಯ ಮನಾಲಿಯಲ್ಲಿರುವ ಕಂಗನಾ ಸಹೋದರ ಮದುವೆ ಹಾಗೂ ನವರಾತ್ರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.