ಕುಂದಾಪುರ : ಕೊಳವೆಬಾವಿ ಕೊರೆಯುವ ವೇಳೆಯಲ್ಲಿ ಮಣ್ಣು ಕುಸಿದು ಯುವಕನೋರ್ವ ಸುಮಾರು 15 ಆಳದ ಮಣ್ಣಿನಲ್ಲಿ ಸಿಲುಕಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ಮರವಂತೆಯಲ್ಲಿ ನಡೆದಿದೆ.

ಮಣ್ಣಿನಡಿಯಲ್ಲಿ ಸಿಲುಕಿರುವ ಯುವಕನನ್ನು ರೋಹಿತ್ ಖಾರ್ವಿ ಎಂದು ಗುರಿಸಲಾಗಿದೆ. ಬೋರ್ ವೆಲೆ ಕೊರೆಯುವ ವೇಳೆಯಲ್ಲಿ ಕೊಳವೆ ಬಾವಿಯ ಸುತ್ತಲೂ ಮಣ್ಣು ಕುಸಿದಿದೆ.

ಹೀಗಾಗಿ ಯುವಕ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಯುವಕನನ್ನು ಮೇಲಕ್ಕೆತ್ತಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ.

ಇದೀಗ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂಧಿ ಹಾಗೂ ವೈದ್ಯರು ಸ್ಥಳಕ್ಕೆ ಆಗಮಿಸಿದ್ದು, ಯುವಕನ ರಕ್ಷಣೆಯ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.

ಮಣ್ಣಿನಡಿಯಲ್ಲಿ ಸಿಲುಕಿರುವ ರೋಹಿತ್ ಖಾರ್ವಿ ರಕ್ಷಣೆಗಾಗಿ ಜೆಸಿಬಿಯಿಂದ ಕಾರ್ಯಾಚಾರಣೆ ನಡೆಸಲಾಗುತ್ತಿದೆ. ಕೃತಕ ಆಮ್ಲಜನಕವನ್ನು ಪೂರೈಸಲಾಗುತ್ತಿದ್ದು, ಅಗ್ನಿ ಶಾಮಕ ಸಿಬ್ಬಂಧಿ ಹಗ್ಗವನ್ನು ಕಟ್ಟಿಕೊಂಡು ಕೊಳವೆ ಬಾವಿಯ ಹೊಂಡಕ್ಕೆ ಇಳಿದಿದ್ದಾರೆ. ರೋಹಿತ್ ಖಾರ್ವಿ ಅಗ್ನಿಶಾಮಕ ಸಿಬ್ಬಂಧಿಯೊಂದಿಗೆ ಮಾತನಾಡುತ್ತಿದ್ದಾರೆ. ಸ್ಥಳಕ್ಕೆ ತಜ್ಞರನ್ನೂ ಕರೆಯಿಸಿಕೊಳ್ಳಲಾಗಿದ್ದು, ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಕೊಳವೆ ಬಾವಿಯ ಸುತ್ತಲೂ ಮಣ್ಣು ಇನ್ನಷ್ಟು ಕುಸಿಯುವ ಭೀತಿಯಿಂದಾಗಿ ಸಾರ್ವಜನಿಕರನ್ನು ಕೊಳವೆ ಬಾವಿಯಿಂದ ದೂರ ಕಳುಹಿಸಲಾಗುತ್ತಿದೆ.