ಕಾರವಾರ : ಕಾರಿನಲ್ಲಿ ಕೋಟ್ಯಾಂತರ ಮೌಲ್ಯದ ಬರೋಬ್ಬರಿ 2 ಕೆ.ಜಿ.600 ಗ್ರಾಂ ತೂಕದ ಬ್ರೌನ್ ಶುಗರ್ ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ವಶಕ್ಕೆ ಪಡೆದಿದ್ದಾರೆ.

ವೀರಭದ್ರ ಸುಬ್ರಾಯ ಹೆಗಡೆ, ಪ್ರವೀಣ ಮಂಜುನಾಥ ಭಟ್, ಚಂದ್ರಹಾಸ ದಯಾನಂದ ಗುನಗಾ ಹಾಗೂ ನಾರಾಯಣ ರಾಮಕೃಷ್ಣ ಭಾಗ್ವತ್ ಎಂಬವರೇ ಬಂಧಿತ ಆರೋಪಿಗಳು.

ನಾಲ್ವರು ಆರೋಪಿಗಳು ಕಾರಿನಲ್ಲಿ ಹುಬ್ಬಳ್ಳಿಯಿಂದ ಅಂಕೋಲಾ ಕಡೆಗೆ ಬ್ರೌನ್ ಶುಗರ್ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಅಪರಾಧ ಗುಪ್ತದಳ ಅಧಿಕಾರಿಗಳು ದಾಳಿ ನಡೆಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.