ನೆಲಕಚ್ಚಿದ ವಿಮಾನಯಾನ ಸಂಸ್ಥೆಗಳು : ಮೇ ಅಂತ್ಯದೊಳಗೆ ದಿವಾಳಿ ಎಚ್ಚರಿಕೆ

0

ನವದೆಹಲಿ : ಕೊರೋನಾ ವೈರಸ್ ಸೃಷ್ಟಿಸಿರೊ ಆತಂಕಕ್ಕೆ ತತ್ತರಿಸಿರೋ ವಿಮಾನಯಾನ ಸಂಸ್ಥೆಗಳ ಪರಿಸ್ಥಿತಿ ಹೀಗೆ ಮುಂದುವರಿದರೆ ಮೇ ಅಂತ್ಯದೊಳಗೆ ದಿವಾಳಿಯಾಗಲಿದೆ ಎಂದು ಜಾಗತಿಕ ವಿಮಾನಯಾನ ಸಂಸ್ಥೆ ಸಿಎಪಿಎ ಎಚ್ಚರಿಕೆ ನೀಡಿದೆ.

ಜಾಗತಿಕ ಮಟ್ಟದಲ್ಲಿ ಕೊರೊನಾ ಸೋಂಕು ಆತಂಕವನ್ನು ತಂದೊಡ್ಡುತ್ತಿದೆ. ಹೀಗಾಗಿ ಹಲವು ರಾಷ್ಟ್ರಗಳು ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ನಿಷೇಧಿಸಿವೆ. ಹೀಗಾಗಿಯೇ ಬಹುತೇಕ ರಾಷ್ಟ್ರಗಳ ವಿಮಾನಯಾನ ಕಂಪೆನಿಗಳು ಅನಿವಾರ್ಯವಾಗಿ ವಿಮಾನ ಹಾರಾಟವನ್ನೇ ನಿಲ್ಲಿಸಿವೆ.

ಈಗಾಗಲೇ ಶೇ.40ರಷ್ಟು ವಿಮಾನಗಳು ರದ್ದಾಗಿದ್ದು, ಕಾರ್ಯಾಚರಣೆ ನಡೆಸುತ್ತಿರೋ ವಿಮಾನಗಳಲ್ಲಿಯೂ ಪ್ರಯಾಣಿಕರ ಕೊರತೆಯಿದೆ. ಕೊರೊನಾ ಭೀತಿಯಿಂದ ವಿಮಾನ ಸಂಸ್ಥೆಗಳಿಗೆ ಬಾರೀ ಹೊಡೆತ ಬಿದ್ದಿದೆ.

ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮೇ ಅಂತ್ಯದೊಳಗೆ ವಿಮಾನ ಕಂಪೆನಿಗಳು ದಿವಾಳಿಯಾಗೋದು ಪಕ್ಕಾ ಅನ್ನುತ್ತಿದೆ ಸಿಎಪಿಎ.

ಹೀಗಾಗಿ ಕೇಂದ್ರ ಸರಕಾರ ಮಧ್ಯ ಪ್ರವೇಶ ಮಾಡುವುದರ ಮೂಲಕ ವಿಮಾನಯಾನ ಸಂಸ್ಥೆಗಳ ರಕ್ಷಣೆಗೆ ದಾವಿಸಬೇಕು ಎಂದು ಸಿಎಪಿಎ ಮನವಿ ಮಾಡಿಕೊಂಡಿದೆ.

Leave A Reply

Your email address will not be published.