ಕೊರೋನಾ ಸಂಕಷ್ಟದಲ್ಲಿ ನಾಪತ್ತೆಯಾದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ…!ಹುಡುಕಿಕೊಡುವಂತೆ ತಹಶೀಲ್ದಾರ್ ಗೆ ಜನರ ಮನವಿ…!!

ಬೆಳಗಾವಿ: ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕೊರೋನಾ ಮಹಾಮಾರಿ ಜನರ ಜೀವನವನ್ನೇ ಅಲ್ಲೋಲಕಲ್ಲೋಲಗೊಳಿಸಿದೆ. ಎಲ್ಲೆಡೆ ಶಾಸಕರು,ಸಂಸದರು ಜನರ ಕಷ್ಟಕ್ಕೆ ಕಿವಿಯಾಗುತ್ತಿದ್ದರೇ, ಬೆಳಗಾವಿ-ಉತ್ತರಕನ್ನಡಾ ಲೋಕಸಭಾ ಸದಸ್ಯರ ಸುಳಿವೆ ಇಲ್ಲ. ಹೀಗಾಗಿ ನಮ್ಮ ಸಂಸದರನ್ನು ಹುಡುಕಿಕೊಡಿ ಎಂದು ಜನರು ತಹಶೀಲ್ದಾರ ಮೊರೆ ಹೋಗಿದ್ದಾರೆ.

ಕೊರೋನಾ ಸಂಕಷ್ಟಕ್ಕೆ ಸ್ಪಂದಿಸಬೇಕಿದ್ದ ಸಂಸದರು ಕ್ಷೇತ್ರದತ್ತ ಮುಖಮಾಡಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ. ಹೀಗಾಗಿ ಕಾಣೆಯಾಗಿರುವ ನಮ್ಮ ಸಂಸದರನ್ನು ಆದಷ್ಟು ಬೇಗ ಹುಡುಕಿಕೊಡಿ ಎಂದು ಕೆನರಾ ಲೋಕಸಭಾ ಕ್ಷೇತ್ರದ ಕಿತ್ತೂರಿನ ಜನತೆ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ್ದಾರೆ.

https://kannada.newsnext.live/corona-virus-death-family-4lakh-componsation-supreme-court/

ಮನವಿ ಪತ್ರದ ಜೊತೆಗೆ ಕಾಣೆಯಾಗಿದ್ದಾರೆ ಎಂಬ ಕರಪತ್ರ ಸಹ ಹೊರಡಿಸಲಾಗಿದೆ. ಕೊರೋನಾದಿಂದ ಕಿತ್ತೂರು ಕ್ಷೇತ್ರದ ಸಾವು-ನೋವಿನಿಂದ ನರಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಡೆದ ಯಾವುದೇ ತುರ್ತು ಸಭೆಗೂ ಸಂಸದರು ಹಾಜರಾಗಿಲ್ಲ. ಇದನ್ನು ನೋಡಿದ ಕಿತ್ತೂರಿನ ಜನತೆಗೆ ಅವರು ನಾಪತ್ತೆಯಾಗಿರಬೇಕೆಂಬ ಸಂಶಯವಿದೆ. ಹೀಗಾಗಿ ಆದಷ್ಟು ಬೇಗ ಹುಡುಕಿಕೊಡಬೇಕೆಂದು ಮನವಿ ಮಾಡಲಾಗಿದೆ.

https://kannada.newsnext.live/corona-virus-vaccine-for-children-the-covaccine-trial-from-june/

ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಕಾಣೆಯಾಗಿದ್ದಾರೆ ಎಂಬ ಪ್ರಕಟಣೆ ಹೊರಡಿಸಲಾಗಿದ್ದು, ಅದರಲ್ಲಿ ಸಂಸದರನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಸಿಗಲಿದೆ ಎಂದು ಹೇಳಲಾಗಿದೆ.

https://kannada.newsnext.live/ramesh-jarakiholi-cd-case-big-twist/

ಮೂಲಗಳ ಪ್ರಕಾರ ಕೆನರಾ ಸಂಸದ ಅನಂತಕುಮಾರ್ ಹೆಗಡೆ ಕ್ಷೇತ್ರದಲ್ಲಿ ಸಾಕಷ್ಟು ಕೊರೋನಾ ಸೋಂಕಿತರು ಚಿಕಿತ್ಸೆ ಕೊರತೆ ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಕೊರೋನಾ ಎರಡನೇ ಅಲೆ ಆರಂಭವಾದಾಗಿನಿಂದಲೂ ಸಂಸದರು ಕ್ಷೇತ್ರದಿಂದ ದೂರ ಉಳಿದಿದ್ದು, ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ ಎನ್ನಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲೂ ಆಸ್ಪತ್ರೆ ಸೇರಿದಂತೆ ಹಲವು ವೈದ್ಯಕೀಯ ಸೌಲಭ್ಯಗಳ ಕೊರತೆ ಇದ್ದು, ಕ್ಷೇತ್ರ ಭೇಟಿ,ಸಭೆಗಳಿಂದ ದೂರವೇ ಉಳಿದಿರುವ ಸಂಸದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Comments are closed.