Carrot Juice Benefits ಕ್ಯಾರಟ್ ಹಲ್ವಾ ಅಂದರೆ ಬಹುತೇಕ ಎಲ್ಲರೂ ಇಷ್ಟ ಪಡ್ತಾರೆ. ಇದಕ್ಕೆ ಬೇಡ ಎನ್ನುವವರ ಸಂಖ್ಯೆ ತುಂಬಾನೇ ಕಡಿಮೆ. ಈ ಕ್ಯಾರಟ್ನ್ನು ನೀವು ಕೇವಲ ಹಲ್ವಾದ ರೂಪದಲ್ಲಿ ಮಾತ್ರವಲ್ಲ. ಆರೋಗ್ಯಕರವಾಗಿ (Health Tips) ಜ್ಯೂಸ್ ರೂಪದಲ್ಲಿ ಸೇವನೆ ಮಾಡಬಹುದು. ಒಂದು ಲೋಟ ಕ್ಯಾರಟ್ ಜ್ಯೂಸ್ ಸೇವನೆಯಿಂದ ನಿಮ್ಮ ದೇಹಕ್ಕೆ ಅಗಾಧ ಪ್ರಮಾಣದ ಲಾಭ ಸಿಗಲಿದೆ. ಇದು ಬಾಯಿಗೂ ರುಚಿ ಜೊತೆಗೆ ದೇಹದ ಆರೋಗ್ಯಕ್ಕೂ ಅತ್ಯಂತ ಪ್ರಯೋಜನಕಾರಿ.
ನೀವು ದಿನದ ಆರಂಭವನ್ನು ಕ್ಯಾರಟ್ ಜ್ಯೂಸ್ನಿಂದ ಆರಂಭಿಸಿದರೆ ಕಾಯಿಲೆಗಳು ನಿಮ್ಮ ಹತ್ತಿರಕ್ಕೂ ಸುಳಿಯೋದಿಲ್ಲ. ಇದರಿಂದ ದೇಹಕ್ಕೆ ಅಗಾಧ ಪ್ರಮಾಣದಲ್ಲಿ ಪೌಷ್ಠಿಕಾಂಶ ಸಿಗೋದ್ರ ಜೊತೆಯಲ್ಲಿ ದಿನವಿಡೀ ದೇಹದಲ್ಲಿ ಶಕ್ತಿ ಉಳಿದಿರುತ್ತದೆ.
ಕ್ಯಾರೆಟ್ಗಳು ನಿಮಗೆ ಕೆಂಪು ಹಾಗೂ ಕೇಸರಿ ಬಣ್ಣದಲ್ಲಿ ಲಭ್ಯವಿರುತ್ತದೆ. ಕ್ಯಾರೆಟ್ನಲ್ಲಿ ವಿಟಾಮಿನ್ ಎ ಅಂಶ ಅಗಾಧವಾಗಿದೆ. ನೀವು ದಿನಕ್ಕೆ 1 ಲೋಟ ಕ್ಯಾರೆಟ್ ಜ್ಯೂಸ್ ಸೇವಿಸಿದರೆ ನಿಮ್ಮ ದೇಹದಲ್ಲಿ ಅಗಾಧ ಪ್ರಮಾಣದಲ್ಲಿ ವಿಟಾಮಿನ್ ಎ ಶೇಖರಣೆ ಆಗಲಿದೆ. ಕೇವಲ ವಿಟಾಮಿನ್ ಎ ಮಾತ್ರವಲ್ಲದೇ ವಿಟಾಮಿನ್ ಸಿ, ವಿಟಾಮಿನ್ ಕೆ, ವಿಟಾಮಿನ್ ಬಿ 6, ವಿಟಾಮಿನ್ ಇ, ಪೊಟ್ಯಾಷಿಯಂ , ಮೆಗ್ನಿಷಿಯಂ ಕೂಡ ಅಗಾಧ ಪ್ರಮಾಣದಲ್ಲಿದೆ.
ಕ್ಯಾರೆಟ್ ಜ್ಯೂಸ್ನಲ್ಲಿ ಬೀಟಾ ಕ್ಯಾರೋಟಿನ್ ಹಾಗೂ ವಿಟಾಮಿನ್ ಎ ಹೇರಳವಾಗಿದೆ. ಇದರಿಂದ ನಿಮ್ಮ ದೇಹದಲ್ಲಿ ಜೀವಕೋಶಗಳಿಗೆ ಯಾವುದೇ ಹಾನಿ ಉಂಟಾಗದಂತೆ ತಡೆಯುತ್ತದೆ. ಜೀವಕೋಶಗಳ ಹಾನಿಯಿಂದ ಉಂಟಾಗಬಲ್ಲ ಇತರೆ ಕಾಯಿಲೆಗಳ ಅಪಾಯವನ್ನೂ ಇದು ಕಡಿಮೆ ಮಾಡುತ್ತದೆ. ಕ್ಯಾರೆಟ್ ಜ್ಯೂಸ್ ಸೇವನೆಯಿಂದ ಕಣ್ಣಿನ ಆರೋಗ್ಯಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಲಾಭವಿದೆ. ಇದರಲ್ಲಿ ಲ್ಯುಟಿನ್, ಜಿಯಾಕ್ಸಾಂಥಿನ್ ಅಂಶವು ರೆಟಿನಾ ಹಾಗೂ ಕಣ್ಣಿನ ಮಸೂರಗಳಿಗೆ ಅತ್ಯಧಿಕ ಪ್ರಯೋಜನವನ್ನು ನೀಡುತ್ತದೆ. ನೇರಾಳಾತೀತ ಬೆಳಕನಿಂದ ಕಣ್ಣಿನ ಮೇಲೆ ಉಂಟಾಗುವ ಹಾನಿಯನ್ನು ರಕ್ಷಿಸಲು ಇದು ಸಹಕಾರಿಯಾಗಿದೆ.
ಇದನ್ನು ಓದಿ : Home Remedies For Headache :ತಲೆನೋವಿನಿಂದ ಹೈರಾಣಾಗಿದ್ದೀರೇ..? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು
ಇದನ್ನೂ ಓದಿ : Health Tips : ದಿನಕ್ಕೊಂದು ನೆಲ್ಲಿಕಾಯಿ ಸೇವನೆಯಿಂದ ವಾಸಿಯಾಗಲಿದೆ ಈ ಮಾರಕ ಕಾಯಿಲೆ..!
ಇದನ್ನೂ ಓದಿ : Health Tips : ದಿನಕ್ಕೊಂದು ನೆಲ್ಲಿಕಾಯಿ ಸೇವನೆಯಿಂದ ವಾಸಿಯಾಗಲಿದೆ ಈ ಮಾರಕ ಕಾಯಿಲೆ
Carrot Juice Benefits : Health Tips