Google search Engine : ಗೂಗಲ್ ಇಲ್ಲದಿರುವ ದೇಶಗಳೂ ಇವೆ !

ಇಂದು ಗೂಗಲ್ (Google) ಇಲ್ಲದೆ, ಯಾವೊಂದು ಕಾರ್ಯವೂ ನಡೆಯದು. ಗೂಗಲ್ ಇಲ್ಲದೇ ಏನಾದ್ರು ಮಾಡಬೇಕು ಅಂದುಕೊಂಡರೂ, ಅದು ದೂರದ ಮಾತು. ಎಜುಕೇಷನ್, ನ್ಯೂಸ್, ಎಂಟರ್ಟೈನ್ಮೆಂಟ್ ಅದೇನೇ ಇರಲಿ ಗೂಗಲ್ ಬೇಕೇ ಬೇಕು. ವಿಶ್ವದ ಬಹುತೇಕ ದೇಶಗಳಲ್ಲಿ ಗೂಗಲ್ 90% ಸರ್ಚ್ ಎಂಜಿನ್ (google search engine) ಮಾರುಕಟ್ಟೆಯ ಶೇರನ್ನು ತನ್ನದಾಗಿಸಿಕೊಂಡಿದೆ. ಆದರೆ ಕೆಲವು ದೇಶಗಳಲ್ಲಿ ಗೂಗಲ್‌ ಅಸ್ತಿತ್ವದಲ್ಲೇ ಇಲ್ಲ ಎಂಬುದನ್ನು ನೀವು ನಂಬಲೇಬೇಕಿರುವ ಸತ್ಯ. ಕ್ರಿಮಿಯಾ, ಕ್ಯೂಬಾ, ಇರಾನ್, ಉತ್ತರ ಕೋರಿಯಾ (Korean Google) ಮತ್ತು ಸಿರಿಯಾಗಳಲ್ಲಿ ಗೂಗಲ್‌ಗೆ ಅಸ್ತಿತ್ವವೇ ಇಲ್ಲ. ಅಷ್ಟೇ ಅಲ್ಲದೇ ಜಗತ್ತಿನ ಈ ಕೆಳಗಿನ ಪ್ರಬಲ ದೇಶಗಳಲ್ಲೂ ಗೂಗಲ್ ಪಾರುಪತ್ಯ ಸಾಧಿಸಲು ಸಾಧ್ಯವಾಗಿಲ್ಲ. ಚೀನಾ ( Baidu) ) ಸೇರಿದಂತೆ ಒಟ್ಟು ನಾಲ್ಕು ದೇಶಗಳಲ್ಲಿ ಗೂಗಲ್ (Alternative to Google)ಬಳಕೆ ಅತಿ ಕಡಿಮೆ ಅಥವಾ ಅರ್ಧದಷ್ಟೂ ಮಾರ್ಕೆಟ್ ಶೇರ್ ಹೊಂದಿಲ್ಲ. ಹಾಗಿದ್ರೆ ಆ ನಾಲ್ಕು ದೇಶಗಳು ಯಾವುವು? ಇಲ್ಲಿವೆ ನೋಡಿ

  1. ಚೀನಾ
    ಚೀನಾದಲ್ಲಿ ಪಕ್ಕಾ ಸ್ವದೇಶಿ ಸರ್ಚ್ ಎಂಜಿನ್ ಆಗಿರುವ “ಗ್ರೇಟ್ ಫೈರ್‌ವಾಲ್” ಗೂಗಲ್ ಸ್ಥಾನವನ್ನು ಪಡೆದುಕೊಂಡಿದೆ. ಇಷ್ಟೇ ಅಲ್ಲದೆ ಟ್ವಿಟರ್, ವಾಟ್ಸಾಪ್, ಯೂಟ್ಯೂಬ್ ಕೂಡ ಬ್ಲಾಕ್ ಮಾಡಲಾಗಿದೆ. ಇಲ್ಲಿ ಪಕ್ಕಾ ದೇಸಿ ಸರ್ಚ್ ಎಂಜಿನ್‌ಗಳಾದ ಆಲಿಬಾಬಾ, ಟೆನ್ಸೆಂಟ್ ಹಾಗೂ ಬೈಡುವನ್ನು (Baidu) ನೆಟ್ ಸರ್ಫಿಂಗ್‌ಗಾಗಿ ಬಳಸುತ್ತಾರೆ.
  2. ಉತ್ತರ ಕೊರಿಯಾ
    ಚೀನಾದಂತೆ ಇಲ್ಲಿಯೂ ಗೂಗಲ್ ಹಾಗೂ ಸೋಷಿಯಲ್ ಮೀಡಿಯಾ ಆಪ್‌ಗಳನ್ನು ಬ್ಯಾನ್ ಮಾಡಲಾಗಿದೆ. ಅಷ್ಟೇ ಅಲ್ಲದೇ ಸರಕಾರವು ಇಂಟರ್ನೆಟ್ ಅನ್ನು ಕೂಡ ಬ್ಯಾನ್ ಮಾಡಲಾಗಿದೆ. ಹಾಗಾಗಿ ಲೋಕಲ್ ಸರ್ಚ್ ಎಂಜಿನ್ ಕೂಡ ಇಲ್ಲಿ ಡೆವಲಪ್ ಮಾಡಿಲ್ಲ. ಮೂಲಗಳ ಪ್ರಕಾರ ಸರ್ಕಾರಿ ಅಧಿಕಾರಿಗಳು ಗೂಗಲ್‌ನ್ನೇ ಬಳಸುತ್ತಿದ್ದಾರೆ. ಆದರೆ 2018ರ ನಂತರ ರಾಜಕೀಯ ಕಾರಣಕ್ಕಾಗಿ ಗೂಗಲ್ ಬಿಟ್ಟು ಚೀನಾದ ಸರ್ಚ್ ಎಂಜಿನ್ ಬೈಡು ಅನ್ನು (Baidu) ಯೂಸ್ ಮಾಡಲು ಪ್ರಾರಂಭಿಸಿದರು.
  3. ದಕ್ಷಿಣ ಕೊರಿಯಾ
    ಸೌತ್ ಕೊರಿಯಾ ಇಡೀ ವಿಶ್ವದಲ್ಲೇ ಹೈ ಸ್ಪೀಡ್ ಇಂಟರ್ನೆಟ್ ಸಂಪರ್ಕ ಹೊಂದಿದೆ. ಆದ್ರೆ ಈ ಇಂಟರ್ನೆಟ್‌ನ್ನು ಗೂಗಲ್‌ನಲ್ಲಿ ಸರ್ಚ್ ಮಾಡಲು ಬಳಸುದಿಲ್ಲವಂತೆ! ಬದಲಿಗೆ “ನೇವರ್” (NAVER) ಎನ್ನುವ ಸರ್ಚ್ ಎಂಜಿನ್ ಬಳಸುತ್ತಾರೆ. ಇದು “ಕೊರಿಯನ್ ಗೂಗಲ್” (Korean Google) ಎಂದೂ ಪ್ರಸಿದ್ಧಿ ಪಡೆದಿದೆ.
    1999ರಲ್ಲಿ ಇದು ಲಾಂಚ್ ಆದ ನಂತರ, ಸೌತ್ ಕೊರಿಯಾ ಸರ್ಚ್ ಎಂಜಿನ್ ಮಾರ್ಕೆಟ್ ನಲ್ಲಿ ಬಹುಪಾಲು ಲಾಭ ಇದರದ್ದೇ ಆಗಿದೆ. ಗೂಗಲ್ ಮಾತ್ರ ಅಲ್ಲ, ಯಾಹೂ ವನ್ನು ಇದು ಬೀಟ್ ಮಾಡಿದೆ. ನೇವರ್ ಅಲ್ಲದೆ ದಾವುಮ್ ಎಂಬ ಲೋಕಲ್ ಸರ್ಚ್ ಎಂಜಿನ್ ಕೂಡ ಇದೆ.
  4. ರಷ್ಯಾ
    ರಷ್ಯಾದಲ್ಲಿ ಇಂಟರ್ನೆಟ್‌ಗಾಗಿ “ಯಾಂಡೆಕ್ಸ್” ಅನ್ನು (Yandex) ಉಪಯೋಗಿಸಲಾಗುತ್ತದೆ. ಇದು ಆಲ್ ಇನ್ ಒನ್ ವೆಬ್ ಪೋರ್ಟಲ್ ಆಗಿದೆ. ಇದರಲ್ಲಿ ಮ್ಯಾಪ್, ನೇವಿಗೇಶನ್, ಇಮೇಲ್, ಆನ್ಲೈನ್ ಪೇಮೆಂಟ್ ಸೌಲಭ್ಯ ಲಭ್ಯವಿವೆ. 55% ಮಾರ್ಕೆಟ್ ಶೇರ್ ಹೊಂದಿದೆ. ಇದು ಪಕ್ಕದ ಉಕ್ರೇನ್, ಬೆಲರಿನ್, ಕಜಾಕಿಸ್ತಾನ್‌ನಲ್ಲೂ ಬಳಸಬಹುದು. ಗೂಗಲ್ ಟಫ್ ಕಂಪಿಟಿಷನ್ ನೀಡಲು ಯಾಂಡೆಕ್ಸ್ ಇದೀಗ ಬ್ಯುಸಿನೆಸ್ ಕೂಡ ಸ್ಟಾರ್ಟ್ ಮಾಡಿದೆ. ಇದು ರೈಡಿಂಗ್, ಫುಡ್ ಡೆಲಿವರಿಯನ್ನೂ ಪ್ರಾರಂಭಿಸಿದೆ. 2020ರ ಪ್ಯಾಂಡೆಮಿಕ್ ನಂತರ ಇ-ಕಾಮರ್ಸ್ ಅನ್ನು ಶುರು ಮಾಡಿದೆ.

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

(Google Does not Dominate in these 4 Countries Google Search Engine, Alternative to Google )

Comments are closed.