ಸೋಮವಾರ, ಏಪ್ರಿಲ್ 28, 2025
HomeBreakingAllu arjhun: ಮತ್ತೆ ಸದ್ದು ಮಾಡಿದ ಕಾಸ್ಟಿಂಗ್ ಕೌಚ್…! ನಟನ ಪ್ರೊಡಕ್ಷನ್ ಹೌಸ್ ಮುಂದೇ...

Allu arjhun: ಮತ್ತೆ ಸದ್ದು ಮಾಡಿದ ಕಾಸ್ಟಿಂಗ್ ಕೌಚ್…! ನಟನ ಪ್ರೊಡಕ್ಷನ್ ಹೌಸ್ ಮುಂದೇ ನಟಿ ಆತ್ಮಹತ್ಯೆ ಯತ್ನ…!!

- Advertisement -

ದೇಶದ ಚಿತ್ರರಂಗದಲ್ಲಿ ಆಗಾಗ ಕೇಳಿಬರುವ ಕಾಸ್ಟಿಂಗ್ ಕೌಚ್ ಆರೋಪ ತೆಲುಗು ಚಿತ್ರರಂಗದಲ್ಲಿ ಮತ್ತೊಮ್ಮೆ ಜೋರಾಗಿ ಸದ್ದು ಮಾಡಿದ್ದು, ಕಾಸ್ಟಿಗ್ ಕೌಚ್ ಆರೋಪ ಮಾಡಿದ್ದ ನಟಿ  ನಟ ಅಲ್ಲು ಅರ್ಜುನ್ ಗೆ ಸೇರಿದ ಪ್ರೊಡಕ್ಷನ್ ಹೌಸ್ ಮುಂದೇ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ.

ತೆಲುಗು ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರ ಪ್ರೊಡಕ್ಷನ್ ಹೌಸ್ ಗೀತಾ ಆರ್ಟ್ಸ್ ಎದುರು ನಟಿ ಸುನೀತಾ ಬೊಯಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ನಟಿ ಸುನೀತಾ ಬೋಯಾರನ್ನು ಬಂಧಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಟಿ ಸುನೀತಾ ಬೋಯಾ ಹಲವು ವರ್ಷಗಳಿಂದ ಅಲ್ಲು ಅರವಿಂದ್ ಪ್ರೊಡಕ್ಷನ್ ಹೌಸ್ ನಿರ್ಮಾಪಕ ಬನ್ನಿ ವಾಸು ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪ ಮಾಡುತ್ತ ಬಂದಿದ್ದಾರೆ. ಬನ್ನಿ ವಾಸು ನನ್ನನ್ನು ಅವಕಾಶ ಕೊಡುವ ನೆಪದಲ್ಲಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಿಂದೆಯೂ ಗೀತಾ ಆರ್ಟ್ಸ ಎದುರು ಗಲಾಟೆ, ಜಗಳ ಮಾಡಿದ್ದ ಸುನೀತಾರನ್ನು ಬಂಧಿಸಲಾಗಿತ್ತು. ಅಲ್ಲದೇ ಆಕೆಗೆ ಮಾನಸಿಕ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಆದರೂ ಕೂಡ ಸುನೀತಾ ಮತ್ತೆ ತಮ್ಮ ಹೋರಾಟ ಮುಂದುವರೆಸಿದ್ದು, ಬನ್ನಿ ವಾಸು ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೋ ಬಿಡುಗಡೆ ಮಾಡಿದ್ದರು.

ಈಗ ಮತ್ತೆ ಅಲ್ಲು ಅರ್ಜುನ್ ಗೆ ಸೇರಿದ ಪ್ರೊಡಕ್ಷನ್ ಹೌಸ್ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆರಂಭದಿಂದಲೂ ಸುನೀತಾ ಆರೋಪವನ್ನು ಬನ್ನಿ ವಾಸು ತಳ್ಳಿ ಹಾಕುತ್ತಲೇ ಬಂದಿದ್ದಾರೆ.

RELATED ARTICLES

Most Popular