(Cauliflower Health Tips)ಚಳಿಗಾಲದಲ್ಲಿ ಬಹಳಷ್ಟು ತರಕಾರಿಗಳು ಲಭ್ಯವಿರುತ್ತದೆ ಅದರಲ್ಲಿ ಹೂಕೋಸು ಕೂಡ ಒಂದು ಇದರಿಂದ ತಯಾರಿಸಿದ ಪಾಕವಿಧಾನ ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹೂಕೋಸಿನಲ್ಲಿರುವ ವಿಟಮಿನ್-ಸಿ, ಪ್ರೊಟೀನ್, ಪೊಟ್ಯಾಶಿಯಂ, ಮ್ಯಾಂಗನೀಸ್, ಫೈಬರ್ ಅಂಶ ಯಥೇಚ್ಛವಾಗಿ ಇರುವುದರಿಂದ ದೇಹಕ್ಕೆ ಹಲವು ಆರೋಗ್ಯದ ಪ್ರಯೋಜನವನ್ನು ನೀಡುತ್ತದೆ. ಇದರ ಮಾಹಿತಿಯ ಕುರಿತು ತಿಳಿದುಕೊಳ್ಳಿ.
(Cauliflower Health Tips)ಜೀರ್ಣಾಂಗ ವ್ಯವಸ್ಥೆಗೆ ಸಹಾಯ
ಹೂಕೋಸುಗಳಲ್ಲಿ ಫೈಬರ್ ಹೇರಳವಾಗಿ ಇರುವುದರಿಂದ ದೇಹದಲ್ಲಿರುವ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಎಲೆಕೋಸಿನಲ್ಲಿರುವ ಗ್ಲುಕೋರಾಫಾನಿನ್ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯ
ಹೂಕೋಸು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇದರಲ್ಲಿರುವ ಗ್ಲುಕೋರಾಫಾನಿನ್ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೂಕೋಸು ನಿಯಮೀತವಾಗಿ ತಿನ್ನುವುದರಿಂದ ಹೃದಯದ ಆರೋಗ್ಯ ಕಾಪಾಡುತ್ತದೆ.
ಮೂಳೆಗಳಿಗೆ ಪ್ರಯೋಜನ
ಹೂಕೋಸು ವಿಟಮಿನ್-ಕೆ ಅನ್ನು ಹೊಂದಿರುವುದರಿಂದ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕೀಲು ನೋವಿಗೆ ಪರಿಹಾರ ನೀಡುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಆಗಲು ಸಹಾಯ
ಹೂಕೋಸು ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ತೂಕ ಕಡಿಮೆ ಮಾಡಲು ಸಹಾಯ
ಹೂಕೋಸು ಕಡಿಮೆ ಕ್ಯಾಲೋರಿ ಹೊಂದಿರುವುದರಿಂದ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ. ತೂಕ ಇಳಿಸಿಕೊಳ್ಳಲು ಡಯೆಟ್ ಮಾಡುತ್ತಿರುವವರು ಹೂಕೋಸು ತಿನ್ನುವುದರಿಂದ ತೂಕ ಕಡಿಮೆ ಆಗುತ್ತದೆ.
ಗರ್ಭಾವಸ್ಥೆಯಲ್ಲಿ ಪ್ರಯೋಜನಕಾರಿ
ಗರ್ಭಾವಸ್ಥೆಯಲ್ಲಿ ಎಲೆಕೋಸು ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಫೋಲೇಟ್ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಗರ್ಭಿಣಿಯರು ಆಹಾರ ಸೇವನೆಯಲ್ಲಿ ಹೂಕೋಸು ತಿಂದರೆ ಉತ್ತಮ.
ಇದನ್ನೂ ಓದಿ:Beetroot Health Benefits:ಬಿಟ್ರೋಟ್ ಸೇವನೆ ಮಾಡಿ ಆರೋಗ್ಯದ ಪ್ರಯೋಜನ ಪಡೆಯಿರಿ
ಇದನ್ನೂ ಓದಿ:Benefits Of Sunlight:ದೇಹದಲ್ಲಿ ವಿಟಮಿನ್ ಡಿ ಹೆಚ್ಚಿಸುವ ಸೂರ್ಯನ ಕಿರಣದಿಂದ ಹಲವು ಪ್ರಯೋಜನ
ಡಯಾಬಿಟೀಸ್, ಪಾರ್ಶ್ವವಾಯು, ಮೆದುಳಿಗೆ ಸಂಬಂಧಪಟ್ಟ ಕಾಯಿಲೆಗಳನ್ನು ಹೂಕೋಸು ನಿವಾರಣೆ ಮಾಡುತ್ತದೆ. ಆರೋಗ್ಯಕರವಾಗಿ ದೇಹದ ತೂಕವನ್ನು ಏರಿಸಲು ಸಹಾಯ ಮಾಡುತ್ತದೆ. ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಇರುವವರು ಹೂಕೋಸು ಸೇವನೆ ಮಾಡಬೇಡಿ.
ಇದನ್ನೂ ಓದಿ:Medical oxygen : ವೈದ್ಯಕೀಯ ಆಕ್ಸಿಜನ್ ಲಭ್ಯತೆ ಬಗ್ಗೆ ಗಮನವಿಡಿ : ರಾಜ್ಯಗಳಿಗೆ ಕೇಂದ್ರದ ಸೂಚನೆ
Cauliflower Health Tips Eat cauliflower in winter and get these six benefits