ಶಿವರಾಜ್‌ ಕುಮಾರ್ 125ನೇ ಸಿನಿಮಾ “ವೇದ”ಗೆ ಭರ್ಜರಿ ರೆಸ್ಪಾನ್ಸ್‌ : ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ ?

ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅಭಿನಯದ 125ನೇ ಸಿನಿಮಾ (Shivraj Kumar’s 125th movie) “ವೇದ” ಡಿಸೆಂಬರ್‌ ೨೩ರಂದು ತೆರೆ ಕಂಡಿದ್ದು, ಭರ್ಜರಿ ರೆಸ್ಪಾನ್ಸ್‌ ಪಡೆದುಕೊಂಡಿದೆ. ನಿರ್ದೇಶಕ ಎ. ಹರ್ಷ ಅವರ ಬಹು ನಿರೀಕ್ಷಿತ “ವೇದ” ಸಿನಿಮಾ ಗ್ರ್ಯಾಂಡ್‌ ಆಗಿ ಬಿಡುಗಡೆಗೊಂಡಿದ್ದು, ಅಭಿಮಾನಿಗಳಿಂದ ಉತ್ತಮ ಪ್ರಶಂಸೆಯನ್ನು ಪಡೆದುಕೊಂಡಿದೆ.

ಈ ಸಿನಿಮಾ 1960ರ ಕಾಲಘಟ್ಟದಲ್ಲಿ ನಡೆದ ಕಥೆಯನ್ನು ಒಳಗೊಂಡಿದ್ದು, 60 ವರ್ಷ ಹಿಂದಿನ ಕಥೆಯಾಗಿದೆ. ಹಾಗಾಗಿ ಇದೊಂದು ವಿಶಿಷ್ಟ ಸಿನಿಮಾವಾಗಿ ತೆರೆ ಕಂಡಿದೆ. 125ನೇ ಸಿನಿಮಾ “ವೇದ” ದಲ್ಲಿ ಶಿವರಾಜ್‌ ಕುಮಾರ್‌ ಜೊತೆ ಗಾನವಿ ಲಕ್ಷ್ಮಣ್‌, ಉಮಾಶ್ರೀ, ಅದಿತಿ ಸಾಗರ್‌, ಶ್ವೇತ ಚಂಗಪ್ಪ, ಚೆಲುವರಾಜು, ರಾಘು ಶಿವಮೊಗ್ಗ, ಕುರಿ ಪ್ರತಾಪ್‌, ಲಾಸ್ಯ ನಾಗರಾಜ್‌ ಸೇರಿದಂತೆ ಬಹು ತಾರಾಗಣವನ್ನು ಒಳಗೊಂಡಿದೆ. ಈ ಸಿನಮಾದಲ್ಲಿ ಶಿವಣ್ಣನ ಜೊತೆ ಕಾಣಿಸಿಕೊಂಡ ಮಹಿಳಾ ಪಾತ್ರಧಾರಿಗಳಿಗೆ ಸಿನಿಪ್ರೇಕ್ಷಕರು ಮನಸೋತಿದ್ದಾರೆ.

ಈ ಸಿನಿಮಾಕ್ಕೆ ಅರ್ಜುನ್‌ ಜನ್ಯ ಸಂಗೀತ, ಸ್ವಾಮಿ ಜೆ ಗೌಡ ಛಾಯಗ್ರಹಣ, ದೀಪು ಎಸ್‌ ಕುಮಾರ್‌ ಎಡಿಟಿಂಗ್‌ ಪ್ಲಸ್‌ ಪಾಯಿಂಟ್‌ ಆಗಿದೆ. ಇನ್ನೂ ರವಿವರ್ಮ, ವಿಕ್ರಮ್‌ ಮೋರ್‌, ಚೇತನ್‌ ಡಿಸೋಜ, ಅರ್ಜುನ್‌ ರಾಜ್‌ ನಿರ್ದೇಶಿಸಿರೋ ಆಕ್ಷನ್‌ ಸೀನ್‌ಗಳಿಗೆ ಸಿನಿಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾಕ್ಕೆ ರಘು ನಿಡುವಳ್ಳಿ ಸಂಭಾಷಣೆ ಅದ್ಭುತವಾಗಿ ಮೂಡಿ ಬಂದಿದೆ. ಮೊದಲ ದಿನವೇ ಉತ್ತಮ ರೆಸ್ಪಾನ್ಸ್‌ನ್ನು ಪಡೆದುಕೊಂಡಿರುವ ಸಿನಿಮಾ ಕಲೆಕ್ಷನ್‌ ಬಗ್ಗೆ ಚಿತ್ರ ವಿಮರ್ಶಕರು ಈಗಾಗಲೇ ಒಂದು ಲೆಕ್ಕಚಾರ ಹಾಕಿದ್ದಾರೆ.

ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ “ವೇದ” ಸಿನಿಮಾ ಬಿಡುಗಡೆಗೂ ಮುನ್ನವೇ, ಸಿನಿಮಾದ ಟ್ರೈಲರ್‌ ಹಾಗೂ ಹಾಡುಗಳಿಗೆ ಸಿನಿಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಹಾಗಾಗಿ ಸಿನಿಮಾದ ಮೊದಲ ದಿನ ಕಲೆಕ್ಷನ್‌ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಇನ್ನೊಂದೆಡೆ 2022ರಲ್ಲಿ ಬಿಡುಗಡೆ ಆಗುತ್ತಿರುವ ಕೊನೆಯ ಬಿಗ್‌ ಬಜೆಟ್‌ ಸಿನಿಮಾ ಕೂಡ ಹೌದು. ಸಿನಿಮಾ ಮೊದಲ ದಿನದ ಕಲೆಕ್ಷನ್‌ ನಿರೀಕ್ಷೆಯಷ್ಟೇ ಗಳಿಕೆ ಕಂಡಿರುವುದು ಸಿನಿತಂಡಕ್ಕೆ ಸಂತಸ ತಂದಿದೆ.

ಇದನ್ನೂ ಓದಿ : Unlock Raghava : ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ‘ಅನ್ ಲಾಕ್ ರಾಘವ’ ಸಿನಿತಂಡ

ಇದನ್ನೂ ಓದಿ : Dharani Mandala Movie:25ನೇ ದಿನದತ್ತ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ

ಇದನ್ನೂ ಓದಿ : “ನವರಸ ನಟನ ಸಾರ್ವಭೌಮ” ಕೈಕಾಲ ಸತ್ಯನಾರಾಯಣ ವಿಧಿವಶ

ಈ ಸಿನಿಮಾದ ಮೊದಲ ದಿನದ ಕಲೆಕ್ಷನ್‌ ಬಗ್ಗೆ ಟ್ರೇಡ್‌ ಅನಲಿಸ್ಟ್‌ 3 ರಿಂದ 4 ಕೋಟಿ ರೂ. ಕಲೆಕ್ಷನ್‌ ಆಗಬಹುದು ಎಂದು ಲೆಕ್ಕಚಾರ ಹಾಕಿದ್ದರು. ಅದರಂತೆ ಕರ್ನಾಟಕ ವಿತರಕರ ಪ್ರಕಾರ, “ವೇದ” ಮೊದಲ ದಿನವೇ 3.7 ಕೋಟಿ ಕಲೆಕ್ಷನ್‌ ಮಾಡಿದೆ ಎನ್ನಲಾಗಿದೆ. ಆದರೆ ಈ ಕುರಿತು ಅಧಿಕೃತವಾಗಿ ಸಿನಿತಂಡ ಇನ್ನೂ ಮಾಹಿತಿ ನೀಡಿರುವುದಿಲ್ಲ. ಸಿನಿಪ್ರೇಕ್ಷಕರಿಗೆ ಶಿವರಾಜ್‌ ಕುಮಾರ್‌ ಹಾಗೂ ಎ.ಹರ್ಷ ಕಾಂಬಿನೇಷನ್‌ ಮೇಲೆ ಒಂದು ನಿರೀಕ್ಷೆ ಇತ್ತು. ಈ ಜೋಡಿ ಒಟ್ಟಿಗೆ ಮಾಡುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಈ ಸಿನಿಮಾ ಕೂಡ ಮೊದಲ ದಿನದ ಪ್ರದರ್ಶನದಲ್ಲಿ ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡಿದೆ.

Huge response to Shivraj Kumar’s 125th movie “Veda”: Do you know how much the first day’s earnings are?

Comments are closed.