ಬೆಂಗಳೂರು : ಎಸ್ ಟಿ ಸಮುದಾಯದ ಹೆಣ್ಣು ಮಗಳನ್ನು ಇಟ್ಟುಕೊಂಡು ಹೊಲಸು ರಾಜಕಾರಣ ಮಾಡಬೇಡಿ. ಡಿ.ಕೆ.ಶಿವಕುಮಾರ್ ನನ್ನ ಅಕ್ಕನನ್ನು ಹಣಕೊಟ್ಟು ಗೋವಾಕ್ಕೆ ಕಳುಹಿಸಿದ್ದಾರೆ ಎಂದು ಸಂತ್ರಸ್ತ ಯುವತಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ, ಯುವತಿಯ ಪೋಷಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ನಮ್ಮಕ್ಕಳನ್ನು ಇಟ್ಟುಕೊಂಡು ರಾಜಕಾರಣ ಮಾಡೋದಲ್ಲ. ಡಿಕೆಶಿ ಹಣ ಕೊಟ್ಟಿರುವ ಕುರಿತು ಅಕ್ಕ ಹೇಳಿದ್ದಾಳೆ. ಡಿಕೆಶಿ ಅವರೇ ಎಲ್ಲವನ್ನೂ ಮಾಡಿಸಿದ್ದಾರೆ. ಅಕ್ಕನನ್ನು ಇಟ್ಟುಕೊಂಡು ವಿಡಿಯೋ ಮಾಡಿದ್ದಾರೆ ಎಂದು ಯುವತಿಯ ಸಹೋದರ ಡಿಕೆಶಿ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ಗೌಡ ಕೂಡ ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ. ನಾವು ಇಂದು ನಮ್ಮ ಊರನ್ನು ಬಿಟ್ಟು ಇಂದು ಸಂಬಂಧಿಕರ ಮನೆಯಲ್ಲಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದೇವೆ ಎಂದಿದ್ದಾರೆ.