ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಿಕೆಯಾದ ಲಾಕ್ ಡೌನ್ ಅವಧಿಯಲ್ಲಿ ಸಾಲದ ಮೇಲಿನ ಇಎಂಐ ಅನ್ನು 6 ತಿಂಗಳ ಕಾಲ ಮುಂದೂಡಿಕೆ ಮಾಡಿತ್ತು. ಆದರೆ ಬ್ಯಾಂಕುಗಳು ಇಎಂಐ ಪಾವತಿಯನ್ನು ಮುಂದೂಡಿಕೆ ಮಾಡಿದ್ದರು ಕೂಡ ಈ ಅವಧಿಯಲ್ಲಿ ಬಡ್ಡಿಯನ್ನು ಪಾವತಿ ಮಾಡುವಂತೆ ಹೇಳಿವೆ. ಆದ್ರೀಗ ಮುಂದೂಡಿಕೆಯಾದ ಅವಧಿಯ ಬಡ್ಡಿ ಮನ್ನಾ ಮಾಡುವ ವಿಚಾರದಲ್ಲಿ ಕೇಂದ್ರ ಸರಕಾರ ಗುಡ್ ನ್ಯೂಸ್ ನೀಡಲು ಮುಂದಾಗಿದೆ.

ಇಎಂಐ ಮುಂದೂಡಿಕೆ ಮಾಡಲು ಅವಕಾಶ ನೀಡಿರುವ ಬ್ಯಾಂಕುಗಳು ಮುಂದೂಡಿಕೆ ಮಾಡಲ್ಪಟ್ಟ ಸಾಲದ ಕಂತಿಗೂ ಬಡ್ಡಿ ವಿಧಿಸುತ್ತಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನಡೆಸುತ್ತಿರುವ ಸುಪ್ರೀಂ ಕೋರ್ಟ್ ಇಎಂಐ ಪಾವತಿಯ ಅವಧಿಗೆ ಮತ್ತೆ ಒಂದು ತಿಂಗಳ ಕಾಲ ವಿನಾಯಿತಿಯನ್ನು ನೀಡಿತ್ತು. ಅಲ್ಲದೇ ಬಡ್ಡಿ ವಿಧಿಸುವುದನ್ನು ಮರುಪರಿಶೀಲಿಸಲು ಕೇಂದ್ರ ಸರಕಾರಕ್ಕೆ ಸೂಚನೆಯನ್ನು ನೀಡಿತ್ತು.
ಇದೀಗ ಕೇಂದ್ರ ಸರಕಾರ ಸಾಲ ಇಎಂಐ ಮುಂದೂಡಿಕೆ ಅವಧಿಯ ಬಡ್ಡಿ ಮನ್ನಾ ಕುರಿತು ಕೇಂದ್ರ ಸರಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಸಾಲಗಾರರಿಗೆ ಗುಡ್ ನ್ಯೂಸ್ ನೀಡುವ ಸಾಧ್ಯತೆಯಿದೆ. ಈಗಾಗಲೇ ಕೇಂದ್ರ ಸರಕಾರ ಇಎಂಐ ಅವಧಿಯನ್ನು 2 ತಿಂಗಳವರೆಗೆ ವಿಸ್ತರಣೆ ಮಾಡಬಹುದಾಗಿದ್ದು, ಮರು ಪಾವತಿ ಅವಧಿಯಲ್ಲಿ ಬಡ್ಡಿ ಮನ್ನಾ ಮಾಡುವ ವಿಚಾರದ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿಯೂ ಕೇಂದ್ರ ಸರಕಾರ ತಿಳಿಸಿತ್ತು. ಇದೀಗ ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್ ಠಾಕೂರ್ ಅವರು ಲೋಕಸಭೆಗೆ ಮಾಹಿತಿ ನೀಡಿದ್ದು, ಇನ್ನು ಸಾಲದ ಕಂತುಗಳ ಮೇಲಿನ ಬಡ್ಡಿ ಮನ್ನಾ ಮಾಡುವ ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ ಎಂದಿದ್ದಾರೆ. ಹೀಗಾಗಿ ಸಾಲಗಾರರಿಗೆ ಇಎಂಐ ಬಡ್ಡಿ ಮನ್ನಾ ನಿರೀಕ್ಷೆ ಭರವಸೆ ಮೂಡಿಸಿದೆ