ಎಸ್ ಬಿಐ ಗ್ರಾಹಕರಿಗೆ ಮಹತ್ವದ ಸೂಚನೆ : ಸೆಪ್ಟೆಂಬರ್ 18ರಿಂದ ವಿತ್ ಡ್ರಾ ಗೆ ಹೊಸ ನಿಯಮ

0

ನವದೆಹಲಿ : ದೇಶದ ಅತೀ ದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ನಗದು ಹಿಂಪಡೆಯಲು ಒಟಿಪಿ ಆಧಾರದಲ್ಲಿ ಹೊಸ ಪದ್ದತಿ, ನಿಯಮವನ್ನು ಜಾರಿಗೆ ತರಲಿದ್ದು, ಹೊಸ ನಿಯಮ ಸಪ್ಟೆಂಬರ್ 18 ರಿಂದ ಜಾರಿಗೆ ಬರಲಿದೆ.

ಗ್ರಾಹಕರಿಗೆ ಈಗಾಗಲೇ ಅತ್ಯುನ್ನತ ಸೇವೆಗಳನ್ನು ಒದಗಿಸುತ್ತಿರುವ ಎಸ್ ಬಿಐ ಇದೀಗ ಗ್ರಾಹಕರ ಸುರಕ್ಷತೆಗಾಗಿ ಇನ್ನಷ್ಟು ಮಹತ್ವದ ಹೆಜ್ಜೆಗಳನ್ನು ಇರಿಸಲು ಮುಂದಾಗಿದೆ. 10 ಸಾವಿರ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಇದನ್ನು ವಿಸ್ತರಿಸಲಾಗುತ್ತಿದೆ ಎಸ್ ಬಿಐ ಡೆಬಿಟ್ ಕಾರ್ಡ್ ಹೊಂದಿರುವವರು 10,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಹಣ ಹಿಂಪಡೆಯಲು ಡೆಬಿಟ್ ಕಾರ್ಡ್ ಪಿನ್ ಜೊತೆಗೆ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಒಟಿಪಿಯನ್ನ ಇನ್ನು ಮುಂದೆ ಪ್ರತಿ ಬಾರಿ ನಮೂದಿಸಬೇಕಾಗುತ್ತದೆ.


ಒಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ಪರಿಚಯಿಸುವುದರೊಂದಿಗೆ, ಎಸ್ ಬಿಐ ಎಟಿಎಂ ನಗದು ಹಿಂಪಡೆಯುವಿಕೆಯಲ್ಲಿ ಭದ್ರತಾ, ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಿದೆ. ದಿನವಿಡೀ ಈ ಸೌಲಭ್ಯವನ್ನು ಜಾರಿಗೊಳಿಸುವುದರಿಂದ ಎಸ್ ಬಿಐ ಡೆಬಿಟ್ ಕಾರ್ಡ್ ದಾರರು ವಂಚಕರಿಗೆ ಬಲಿಯಾಗುವ ಅಪಾಯ ತಪ್ಪಿಸಬಹುದಾಗಿದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಹಣಕಾಸು ಸ್ವಿಚ್ (ಎನ್ಎಫ್ಎಸ್) ಎಸ್ಬಿಐ ಅಲ್ಲದ ಎಟಿಎಂಗಳಲ್ಲಿ ಈ ಕಾರ್ಯವನ್ನು ಅಭಿವೃದ್ಧಿಪಡಿಸಿಲ್ಲ. ಹಾಗಾಗಿ ಒಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ಸೌಲಭ್ಯವು ಎಸ್ ಬಿಐ ಎಟಿಎಂಗಳಲ್ಲಿ ಮಾತ್ರ ಲಭ್ಯವಿರಲಿದೆ.

Leave A Reply

Your email address will not be published.