ಚಂಡೀಗಢ : ಡೆಡ್ಲಿ ಕೊರೊನಾ ಮಹಾಮಾರಿ ದಿನೇ ದಿನೇ ಆತಂಕವನ್ನು ಮೂಡಿಸುತ್ತಿದೆ. ಇಲ್ಲೊಂದು ಗ್ರಾಮದಲ್ಲಿ 38 ಮಂದಿ ಕೊರೊನಾಗೆ ತುತ್ತಾಗಿದ್ದಾರೆ. ಅದ್ರಲ್ಲೂ 2 ಕುಟುಂಬದ 28 ಮಂದಿಗೆ ಕೊರೊನಾ ಪಾಸಿಟಿವ್ ಆಗಿರೋದು ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ.

ಅಷ್ಟಕ್ಕೂ ಈ ಗ್ರಾಮವಿರೋದು ಪಂಜಾಬ್ ರಾಜ್ಯದ ಮೊಹಾಲಿ ಜಿಲ್ಲೆಯಲ್ಲಿ. ಮೊಹಾಲಿ ಜಿಲಲ್ಎಯ ವಜಾಹರ್ಪುರ್ ಗ್ರಾಮದಲ್ಲಿ ಇದುವರೆ 38 ಮಂದಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ.

ಅದ್ರಲ್ಲೂ ಗ್ರಾಮದ ಮಹಿಳಾ ಸರ್ಪಂಚ್ ಹಾಗೂ ಪಂಚ್ ಅವರ ವಿಸ್ತ್ರತ ಸಂಬಂಧಿಕರ 2 ಕುಟುಂಬಗಳ ಬರೋಬ್ಬರಿ 28 ಮಂದಿಗೆ ಕೋವಿಡ್ -19 ಸೋಂಕು ಇರುವುದು ದೃಢಪಟ್ಟಿದೆ. ಮೋಹಾಲಿ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ಇದೀಗ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ.

ಗ್ರಾಮದ ಯಾರೊಬ್ಬರೂ ಕೂಡ ವಿದೇಶಿ ಪ್ರಯಾಣ ಮಾಡಿಲ್ಲ. ಅಲ್ಲದೇ ಹೊರ ರಾಜ್ಯಗಳಿಗೆ ಪ್ರಯಾಣಿಸಿದ ಇತಿಹಾಸವೂ ಇಲ್ಲಾ. ಆದ್ರೆ ಗ್ರಾಮದಲ್ಲಿ ಕೆಲವು ತಬ್ಲಿಘಿ ಜಮಾತ್ ಸದಸ್ಯರು ಉಳಿದುಕೊಂಡಿದ್ದರಿಂದಲೇ ಸೋಂಕು ಹರಡಿದೆ ಅನ್ನೋ ಮಾಹಿತಿಯಿದೆ. ಇದೀಗ ಜಿಲ್ಲಾಡಳಿತ ಇಡೀ ಗ್ರಾಮವನ್ನೇ ಕ್ವಾರಂಟೈನ್ ಗೆ ಒಳಪಡಿಸಿದ್ದು, ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸೋ ಆತಂಕ ಎದುರಾಗಿದೆ.