ನಿತ್ಯಭವಿಷ್ಯ : 15-04-2020

0

ಮೇಷರಾಶಿ
ಅನಗತ್ಯ ಯೋಚನೆ ಮಾಡುವಿರಿ, ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವ ತಾಕತ್ತು ನಿಮಗಿದ್ದು ಮುನ್ನಡೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಫ‌ಲವಿರುತ್ತದೆ. ಗೃಹ ನಿರ್ಮಾಣ ಕಾರ್ಯಗಳಿಗೆ ಆರ್ಥಿಕ ಅಡಚಣೆ ಇರುತ್ತದೆ. ಆರೋಗ್ಯದಲ್ಲಿ ಏರುಪೇರು, ರಿಯಲ್ ಎಸ್ಟೇಟ್‍ನವರಿಗೆ ಅನುಕೂಲ ಸಾಧ್ಯತೆ, ಉದ್ಯಮಿಗಳಿಗೆ ಸುದಿನ.

ವೃಷಭರಾಶಿ
ಸಮಸ್ಯೆಗಳನ್ನು ನೀವು ವೈಯಕ್ತಿಕವಾಗಿ ಪರಿಹರಿಸಿಕೊಳ್ಳುವುದು ಒಳ್ಳೆಯದು. ಹೆಚ್ಚಿನ ಶುಭ ಫ‌ಲಗಳೇ ಅನುಭವಕ್ಕೆ ಬರಲಿವೆ. ಆಗಾಗ ನಾನಾ ರೀತಿಯಲ್ಲಿ ಖರ್ಚು ವೆಚ್ಚಗಳು ಕಿರಿಕಿರಿ ತರಲಿವೆ. ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ, ಬೆಲೆ ಬಾಳುವ ವಸ್ತುಗಳ ಖರೀದಿ, ಸಹೋದರರಿಂದ ಸಹಾಯ, ಮಾನಸಿಕ ನೆಮ್ಮದಿ.

ಮಿಥುನರಾಶಿ
ಅಲ್ಪ ಆದಾಯ, ಅಧಿಕವಾದ ಖರ್ಚು, ಅರ್ಥಪೂರ್ಣವಾದ ಮಾತು ಶತ್ರುಗಳಲ್ಲೂ, ಮಿತ್ರರಲ್ಲೂ , ಸಹಮತ ಮೂಡಿ ಮುನ್ನಡೆಗೆ ಸಾಧಕ ಮಾಡಲಿದೆ. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇದ್ದರೂ ಹೆಚ್ಚಿನ ಜಾಗ್ರತೆ ಮಾಡಬೇಕು. ದಿನಾಂತ್ಯ ಶುಭವಿದೆ. ನೆಮ್ಮದಿಗೆ ಭಂಗ, ಮನಸ್ಸಿನಲ್ಲಿ ಗೊಂದಲ, ಆರೋಗ್ಯದಲ್ಲಿ ಅಲ್ಪ ಚೇತರಿಕೆ.

ಕಟಕರಾಶಿ
ಉದ್ಯೋಗದಲ್ಲಿ ಬಡ್ತಿ, ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಮುನ್ನಡೆ ತೋರಿಬಂದು ಸಂತಸ. ನಿಮ್ಮಿಂದ ಉಪಕೃತರಾದವರೇ ನಿಮಗೆ ಸಹಕಾರ ನೀಡಲಿದ್ದಾರೆ. ಆರ್ಥಿಕವಾಗಿ ಸಂಕಷ್ಟಗಳು ದೂರವಾಗಲಿವೆ. ಖರ್ಚಿನಲ್ಲಿ ಮಿತಿ ಇರಲಿ. ಅಧಿಕ ತಿರುಗಾಟ, ನಂಬಿದ ಜನರಿಂದ ತೊಂದರೆ, ಕೌಟುಂಬಿಕ ಜೀವನದಲ್ಲಿ ಆಂತರಿಕ ಸಮಸ್ಯೆ.

ಸಿಂಹರಾಶಿ
ಸರಕಾರಿ ಕೆಲಸಗಳಲ್ಲಿ ನಿಮ್ಮ ಕಾರ್ಯಸಾಧನೆ ಯಾಗಲಿದೆ. ಕೆಲಸ ಕಾರ್ಯಗಳು ಹಂತ ಹಂತವಾಗಿ ಜರಗಿ ಸಂತಸ ತಂದಾವು. ಯತ್ನ ಕಾರ್ಯಗಳಲ್ಲಿ ವಿಳಂಬ, ಬಂಧುಗಳಲ್ಲಿ ಕಲಹ, ಶತ್ರುಗಳ ಬಾಧೆ, ಆರೋಗ್ಯದಲ್ಲಿ ತೊಂದರೆ, ಪರರಿಂದ ಸಹಾಯ.

ಕನ್ಯಾರಾಶಿ
ಗೃಹ ನಿರ್ಮಾಣ ಹಾಗೂ ಭೂ ಖರೀದಿಗೆ ಅಡಚಣೆ ತೋರಿಬರಲಿದೆ. ಆರ್ಥಿಕವಾಗಿ ತುಸು ಚೇತರಿಕೆಯು ಅನುಕೂಲವಾಗಲಿದೆ. ಶಿಸ್ತು ಹಾಗೂ ಸಂಯಮದಿಂದ ಇದ್ದಲ್ಲಿ ಎಲ್ಲವನ್ನೂ ಎದುರಿಸಬಹುದಾಗಿದೆ ಜಾಗ್ರತೆ. ಸ್ತ್ರೀಯರಿಗೆ ಲಾಭ, ಇಲ್ಲ ಸಲ್ಲದ ಅಪವಾದ, ಬುದ್ಧಿ ಕ್ಲೇಷ, ಭೂಮಿ ಖರೀದಿಯೋಗ, ಸಾಲ ಬಾಧೆ.

ತುಲಾರಾಶಿ
ಹಿತ ಶತ್ರುಗಳಿಂದ ತೊಂದರೆ, ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ವಿಶ್ವಾಸ ಸಲ್ಲದು. ದಾನಧರ್ಮಾದಿಗಳಿಗೆ ಧನ ವ್ಯಯವಾದರೂ ಸಂತೃಪ್ತಿ ದೊರಕಲಿದೆ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗವನ್ನು ಪಡೆಯಲಿದ್ದಾರೆ. ಸಂಚಾರದಲ್ಲಿ ಜಾಗ್ರತೆ. ಕೃಷಿಯಲ್ಲಿ ಲಾಭ, ಮಿತ್ರರಿಂದ ಸಹಾಯ, ಪ್ರಿಯ ಜನರ ಭೇಟಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ವೃಶ್ಚಿಕರಾಶಿ
ಅನಿರೀಕ್ಷಿತವಾಗಿ ಶುಭ ಸುದ್ದಿಯಿಂದ ಸಂತಸ ತರುವುದು. ವ್ಯಾಪಾರ, ವ್ಯವಹಾರಗಳಲ್ಲಿ ತುಸು ಚೇತರಿಕೆ ತೋರಿಬಂದು ಮುನ್ನಡೆ ತರುವುದು. ಯೋಗ್ಯ ವಯಸ್ಕರಿಗೆ ಕಂಕಣಬಲದ ಯೋಗವು ಇರುವುದು. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲ ಬಾಧೆ, ವಾಹನ ರಿಪೇರಿ, ಚಂಚಲ ಮನಸ್ಸು, ಅಕಾಲ ಭೋಜನ.

ಧನಸ್ಸುರಾಶಿ
ನಾನಾ ರೀತಿಯ ಸಂಪಾದನೆ, ಕುಟುಂಬ ಸೌಖ್ಯ, ಕೋರ್ಟು ಕಚೇರಿಯ ಕೆಲಸ ಕಾರ್ಯಗಳಲ್ಲಿ ಹಂತ ಹಂತವಾಗಿ ಮುನ್ನಡೆ ಇರುತ್ತದೆ. ವೃತ್ತಿಯ ಸಹಕಾರದಿಂದ ಶಾಂತಿ ಸಮಾಧಾನ ಸಿಗಲಿದೆ. ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವಿರಿ. ಸುಖ ಭೋಜನ, ತೀರ್ಥಯಾತ್ರೆ ದರ್ಶನ, ಸ್ಥಳ ಬದಲಾವಣೆ.

ಮಕರರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ಚೇತರಿಕೆ ಸಮಾಧಾನ ತರಲಿದೆ. ಧನಾಗಮನ ಚೇತರಿಕೆಯನ್ನು ಪಡೆಯಲಿದೆ. ಮನಸ್ಸನ್ನು ಏಕಾಗ್ರಗೊಳಿಸುವುದರಿಂದ ಸಮಸ್ಯೆ ಪರಿಹಾರವಾಗಲಿದೆ. ಸ್ನೇಹಿತರಿಂದ ನಿಂದನೆ, ಪರರಿಗೆ ವಂಚನೆ, ಮನಃಸ್ತಾಪ, ಸ್ವಜನರ ವಿರೋಧ, ನೀಚ ಜನರಿಂದ ದೂರವಿರಿ.

ಕುಂಭರಾಶಿ
ಕೆಲಸ ಕಾರ್ಯಗಳಲ್ಲಿ ಜಯ, ಶ್ರಮಜೀವಿಗಳಿಗೆ ಕಾರ್ಯಸಾಧನೆಗೆ ಸಮಯ ಸಿಗಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ಹಿತಶುತ್ರಗಳಿಗೆ ನೀವು ಪಾಠ ಕಲಿಸಲಿದ್ದೀರಿ. ದಿನಾಂತ್ಯ ಶುಭ. ಮನೆಗೆ ಹಿರಿಯರ ಆಗಮನ, ಶುಭ ಸುದ್ದಿ ಕೇಳುವಿರಿ, ಈ ದಿನ ಶುಭ ಫಲ.

ಮೀನರಾಶಿ
ಮಾಡುವ ಕೆಲಸದಲ್ಲಿ ಶ್ರದ್ಧೆ, ಶ್ರೀದೇವರ ರಕ್ಷೆ ಇರುತ್ತದೆ. ಇದು ಭವಿಷ್ಯಕ್ಕೆ ಪೂರಕವಾಗಲಿದೆ. ಮುಖ್ಯವಾಗಿ ಅನಾವಶ್ಯಕವಾಗಿ ಚಿಂತೆಗೆ ಕಾರಣರಾಗದಿರಿ. ಯೋಗ್ಯ ವಯಸ್ಕರಿಗೆ ಶುಭವಾರ್ತೆ ಇರುತ್ತದೆ. ಉತ್ತಮ ಬುದ್ಧಿಶಕ್ತಿ, ಸ್ತ್ರೀಯರಿಗೆ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ.

Leave A Reply

Your email address will not be published.