ಸದಾ ಸಾಹಸಮಯ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದ ಆಕೆಯನ್ನು ತಂದೆ ಏರ್ ಶೋ ಗೆ ಕರೆದೊಯ್ದಿದ್ದರು. ಆಕಾಶದಲ್ಲಿ ಹಕ್ಕಿಯಂತೆ ಹಾರೋ ವಿಮಾನಗಳನ್ನು ಕಂಡ ಆಕೆ ಮತ್ತೆ ಕನಸಿನಲ್ಲೂ ಕನವರಿಸಿದ್ದು, ವಿಮಾನವನ್ನೇ, ಫಲವಾಗಿ ಭಾರತೀಯ ವಾಯುಪಡೆಯ ಮೊಟ್ಟಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಎಂಜಿನೀಯರ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದು ಯಾವುದೋ ಸಿನಿಮಾ ಸ್ಟೋರಿಯಲ್ಲ. ಬದಲಾಗಿ ಅತ್ಯಂತ ಹಿಂದುಳಿದ ಜಿಲ್ಲೆಯ ಎಂಬ ಪಟ್ಟಪಡೆದ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹೆಮ್ಮೆಯ ಹೆಣ್ಣುಮಗಳು ಆಶ್ರಿತಾ ವಿ.ಒಲೇಟಿಯ ಸಾಹಸಗಾಥೆ.

ವೃತ್ತಿಯಲ್ಲಿ ಏರೋಸ್ಪೇಸ್ ಇಂಜೀನಿಯರ್ ಆಗಿರುವ ಆಶ್ರಿತಾ, ಯಾವುದೇ ಸೈನ್ಯಾಧಿಕಾರಿ ಅಥವಾ ಸೈನಿಕ ಮನೆತನದಿಂದ ಬಂದ ಹುಡುಗಿಯಲ್ಲ. ಆಕೆಯ ತಂದೆ ಚಿನ್ನದಂಗಡಿಯ ಮಾಲೀಕರು. ಆದರೆ ಸದಾ ಸಾಹಸದ ಬಗ್ಗೆ ಮಾತನಾಡುತ್ತಿದ್ದ ಆಶ್ರಿತಾರನ್ನು ಚಿಕ್ಕಂದಿನಲ್ಲಿ ಏರ್ ಶೋಗೆ ಕರೆದೊಯ್ದಿದ್ದರಂತೆ. ಫಲವಾಗಿ ಆಕೆಯ ತನ್ನ ಕನಸನ್ನು ನಿರ್ಧರಿಸಿಕೊಂಡು ಸಾಧಿಸಿ ಮಾದರಿಯಾಗಿದ್ದಾರೆ.

ವಾಯುಪಡೆಯಲ್ಲಿ ಅತ್ಯಂತ ಕಠಿಣ ಕೋರ್ಸ್ ಎಂದು ಕರೆಯಲಾಗುವ ಫ್ಲೈಟ್ ಟೆಸ್ಟ್ ಕೋರ್ಸ್ ಮುಗಿಸಿ, ಫ್ಲೈಟ್ ಟೆಸ್ಟ್ ಇಂಜೀನಿಯರ್ ಆಗಿ ಆಯ್ಕೆಯಾಗಿದ್ದಾರೆ. ಅಲ್ಲದೇ ಏರ್ ಕ್ರ್ಯಾಫ್ಟ್ ಆಂಡ್ ಸಿಸ್ಟಮ್ಸ್ ಟೆಸ್ಟಿಂಗ್ ಎಸ್ಟ್ಯಾಬ್ಲಿಶ್ಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ವಿಶ್ವದ ಐದು ಪ್ರತಿಷ್ಠಿತ ಸ್ಕೂಲ್ ಗಳಲ್ಲಿ ಒಂದಾಗಿರುವ ಬೆಂಗಳೂರಿನ ಎಚ್ಎಎಲ್ ನ ಏರ್ ಪೋಸ್ಟ್ ಟೆಸ್ಟ್ ಫೈಲಟ್ಸ್ ಸ್ಕೂಲ್ ನಲ್ಲಿ ತರಬೇತಿ ಪಡೆದು, ಫ್ಲೈಟ್ ಟೆಸ್ಟ್ ಪರೀಕ್ಷೆ ಪೂರ್ತಿಗೊಳಿಸಿ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

45 ವರ್ಷಗಳ ಹಿಂದೆ ಸ್ಥಾಪನೆಯಾದ ಈ ಟೆಸ್ಟ್ ಸ್ಕೂಲ್ ನಲ್ಲಿ ಇದುವರೆಗೂ 175 ಫ್ಲೈಟ್ ಟೆಸ್ಟ್ ಇಂಜೀನಿಯರ್ ಗಳು ಹಾಗೂ 297 ಫ್ಲೈಟ್ ಟೆಸ್ಟ್ ಫೈಲಟ್ ಗಳು ಕೋರ್ಸ್ ಪೂರ್ಣಗೊಳಿಸಿದ್ದಾರೆ.

29 ವರ್ಷದ ಆಶ್ರಿತಾ ಕಠಿಣ ಪರಿಶ್ರಮದ ಬಳಿಕ ಕರ್ನಾಟಕವೇ ಹೆಮ್ಮೆಪಡುವಂತ ಸಾಧನೆ ಮಾಡಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ವಾಯುಪಡೆಯಲ್ಲಿ ಪೈಲಟ್ ಆಗಿರುವ ಐಸಾಕ್ ರಾಬಿನ್ಸ್ ಅವರನ್ನು ಆಶ್ರಿತಾ ವರಿಸಿದ್ದಾರೆ.ಆಶ್ರಿತಾ ತಂದೆ ಒ.ವಿ.ವೆಂಕಟೇಶ್ ಕೊಳ್ಳೆಗಾಲದಲ್ಲಿ ಜ್ಯುವೆಲ್ಲರಿ ಶಾಪ್ ಹೊಂದಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಆಶ್ರಿತಾ ಸಹೋದರ ಆಶಿಕ್ ಕೂಡ ಅಸ್ಟ್ರೋಫಿಸಿಕ್ಸ್ ನಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ.