ಕರ್ನಾಟಕದಲ್ಲೂ ಮಹಾಮಾರಿಗೆ ಪೂಜೆ…! ಕೊರೋನಾ ಮಾರಮ್ಮನ ಆರಾಧನೆಗೆ ಮುಂದಾದ ಜನರು…!

ಕೊರೋನಾ ಮಹಾಮಾರಿ ನಮ್ಮ ಬದುಕಿನ  ಅಸ್ತಿತ್ವವನ್ನೆ ಅಲುಗಾಡಿಸಿ ಬಿಟ್ಟಿದೆ. ಅಷ್ಟೇ ಅಲ್ಲ ಕಣ್ಣಿಗೆ ಕಾಣದ ವೈರಸ್ ಕಣ್ಣಿಗೆ ಕಾಣುವ ಲೋಕವನ್ನು ಕಂಟ್ರೋಲ್ ಮಾಡುತ್ತಿರುವ ಬೆನ್ನಲ್ಲೇ ಮತ್ತೆ ಮನುಷ್ಯ ಕಣ್ಣಿಗೆ ಕಾಣದ ದೇವರ ಮೊರೆ ಹೋಗುತ್ತಿದ್ದಾನೆ. ಹಿಂದಿನ ಕಾಲದ ನಂಬಿಕೆಯಂತೆ ಈ ಸಾಂಕ್ರಾಮಿಕ ಪಿಡುಗಿನ ನಿವಾರಣೆಗೆ ಮಾರಮ್ಮನ ಮಾದರಿಯಲ್ಲಿ ಕರೋನಾಮ್ಮ ಪೂಜೆಗೆ ಜನರು ಮುಂದಾಗಿದ್ದು, ತಮಿಳುನಾಡಿನ ಬಳಿಕ ಕರ್ನಾಟಕದಲ್ಲೂ ಕೊರೋನಾಕ್ಕೆ ಪೂಜೆ ಆರಂಭವಾಗಿದೆ.

https://kannada.newsnext.live/corona-medicine-parijata-flower-vinaya-guruji-kashaya/

ಈ ಹಿಂದೆ ಅಜ್ಜಿ-ತಾತನ ಕಾಲದಲ್ಲಿಕಾಣಿಸಿಕೊಂಡಿದ್ದ, ಪ್ಲೇಗ್ ನಂತಹ ಮಹಾಮಾರಿಗಳ ನಿರ್ಮೂಲನೆಗೆ ಜನರು ಗ್ರಾಮದೇವತೆ, ಮಾರಮ್ಮ,ಅಣ್ಣಮ್ಮ ದೇವಿ ಸ್ಥಾಪಿಸಿ ಪೂಜೆ ಸಲ್ಲಿಸುತ್ತಿದ್ದರು. ಈಗಲೂ ಮತ್ತೊಮ್ಮೆ ಅದೇ ನಂಬಿಕೆಗೆ ಮೊರೆ ಹೋಗಲಾಗಿದ್ದು, ಕೊರೋನಾ ದೇವಿ ಸ್ಥಾಪನೆ ಹಾಗೂ ಪೂಜೆಗೆ ಜನರು ಮುಂದಾಗಿದ್ದಾರೆ.

https://kannada.newsnext.live/increased-corona-virus-infection-from-marriage-and-mehndi-udupi-dc-jagadessh/

ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಕೊರೋನಾ ದೇವಿ ಸ್ಥಾಪನೆ ಹಾಗೂ ಪೂಜೆ ಬೆನ್ನಲ್ಲೇ ಚಾಮರಾಜನಗರದಲ್ಲೂ ಕೊರೋನಾ ದೇವಿಯನ್ನು ಸ್ಥಾಪಿಸಲಾಗಿದೆ. ಇಲ್ಲಿನ ಕೊಳ್ಳೆಗಾಲ ತಾಲೂಕಿನ ಮಧುವನಹಳ್ಳಿ ಬಳಿಯ ಬೋಳುಗುಡ್ಡೆ ಚಾಮುಂಡಿ ದೇವಾಲಯದಲ್ಲಿ ಕೊರೋನಾ ದೇವಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಮಧುವನಹಳ್ಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ  ಯಶೋಧಮ್ಮ ಇಂತಹದೊಂದು ಪುಣ್ಯ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಮೂಲತಃ ಚಾಮುಂಡಿ ಆರಾಧಕಿಯಾಗಿರುವ ಯಶೋಧಮ್ಮನಿಗೆ ಕನಸಿನಲ್ಲಿ ಚಾಮುಂಡೇಶ್ವರಿ ದೇವಿ ಕೊರೋನಾಕ್ಕೆ ಮನುಷ್ಯನ ದುರಾಸೆ, ಗಿಡಮರಗಳ ನಾಶವೇ ಕಾರಣ ಎಂದು ಹೇಳಿದ್ದು, ಪರಿಹಾರವಾಗಿ  ಕೊರೋನಾ ಮಾರಮ್ಮನನ್ನು ಸ್ಥಾಪಿಸಿ ಪೂಜೆ ಮಾಡುವಂತೆ ಸೂಚಿಸಿದ್ದಾರಂತೆ.

ಕನಸ್ಸಿನಲ್ಲಿ ಕಂಡಿದ್ದರೂ ಈ ಸೂಚನೆಯಲ್ಲಿ ದೇವಿಯ ಪ್ರೇರಣೆ ಇದೆ ಎಂದು ನಂಬಿರುವ ಯಶೋಧಮ್ಮ ಕೊರೋನಾ ಮಾರಮ್ಮನ ವಿಗ್ರಹ ಸ್ಥಾಪಿಸಿ ಅದಕ್ಕೆ ಉಡಿತುಂಬಿ ಪೂಜೆ ಸಲ್ಲಿಸಿ ಹೋಮಹವನ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲ  ಈ ಕೊರೋನಾ ಮಾರಮ್ಮನ ಅನುಗ್ರಹದಿಂದ ಇನ್ನೆರಡು ತಿಂಗಳಿನಿಂದ ಕೊರೋನಾ ಮನುಷ್ಯಲೋಕದಿಂದ ಮರೆಯಾಗಿ ಮತ್ತೆ ಜನಜೀವನ ಸಹಜ ಸ್ಥಿತಿಗೆ ಮರಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.