ಹೆಣ್ಮಕ್ಕಳಿಗೆ ಚಿನ್ನಾಭರಣ ಅಂದ್ರೇ ಅಚ್ಚುಮೆಚ್ಚು. ಅಷ್ಟೇ ಪ್ರಿಯವಾದ ವಸ್ತು ಪಾನಿಪೂರಿ, ಗೋಲ್ ಗಪ್ಪಾ ಚಾರ್ಟ್ಸ್. ಅಂತಹ ಪಾನಿಪೂರಿ ಪ್ರಿಯೆ ವಧುವೊಬ್ಬಳು ಮದುವೆಗೇ ಗೋಲ್ ಗಪ್ಪಾ ಆಭರಣ ಧರಿಸಿ ಗಮನ ಸೆಳೆದಿದ್ದಾಳೆ.

ಚೈನೈನ ಅಕ್ಷಯಾ ಎಂಬ ಯುವತಿಯ ಮದುವೆ ಇತ್ತೀಚಿಗೆ ನಡೆದಿದ್ದು, ಆಕೆ ಚಿನ್ನಾಭರಣದ ಬದಲಾಗಿ ಗೋಲ್ ಗಪ್ಪಾದಿಂದ ಮಾಡಿದ ಕಿರೀಟ,ಹಾರ ಧರಿಸಿ ಗಮನ ಸೆಳೆದಿದ್ದಾಳೆ. ಅಕ್ಷಯಾಗೆ ಪಾನಿಪೂರಿ, ಗೋಲ್ ಗಪ್ಪಾ ಎಂದ್ರೇ ಪ್ರಾಣವಂತೆ.

ಹೀಗಾಗಿ ಕುಟುಂಬಸ್ಥರು ಅವಳ ಮದುವೆಗೆ ಗೋಲ್ ಗಪ್ಪಾದಿಂದಲೇ ಆಭರಣ ಮಾಡಿಸಿ ತೊಡಿಸಿ ಸಂಭ್ರಮಿಸಿದ್ದಾರೆ. ಆಕೆಯ ಮೇಕಪ್ ಗೆ ತೆರಳಿದ್ದ ಆರತಿ ಬಾಲಾಜಿ ಈ ದೃಶ್ಯವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ಟ್ವೀಟ್ ಹಾಗೂ ವಿಡಿಯೋವನ್ನು 45 ಲಕ್ಷ ಜನ ವೀಕ್ಷಿಸಿದ್ದು, 1. 27 ಲಕ್ಷ ಜನರು ಕಮೆಂಟ್ ಮಾಡಿದ್ದಾರೆ. ಇದಲ್ಲದೇ ಹಪ್ಪಳವನ್ನು ಇಷ್ಟಪಡುವ ಈಕೆಯ ತಲೆ ಮೇಲೆ ಹಪ್ಪಳ ಒಡೆದು ಸಂಭ್ರಮಿಸಿದ್ದಾರೆ.

ಈಕೆಯ ಗೋಲ್ ಗಪ್ಪಾ ಹಾರ ಧರಿಸಿದ ಪೋಟೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಇವಳಪ್ಪ ನಿಜವಾದ ಗೋಲ್ ಗಪ್ಪಾ ಪ್ರಿಯೆ ಅಂತ ಕಮೆಂಟ್ ಮಾಡ್ತಿದ್ದಾರೆ.