SBI Bank Alert : ಎರಡು ದಿನಗಳ ಕಾಲ ಬಂದ್‌ ಆಗಿದೆ ಆನ್‌ಲೈನ್‌ ಸೇವೆ…!!! ತುರ್ತು ವರ್ಗಾವಣೆ ಇದ್ರೆ ಇಂದೇ ಮಾಡಿಕೊಳ್ಳಿ

ನವದೆಹಲಿ : ಸ್ಟೇಟ್‌ ಬ್ಯಾಂಕ್‌ ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಜುಲೈ 10 ಮತ್ತು 11 ರಂದು ಎಸ್‌ಬಿಐನ ಕೆಲವೊಂದು ಸೇವೆಗಳು ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದೆ.

ಜುಲೈ 10ರ ರಾತ್ರಿ 10.45ರಿಂದ ಜುಲೈ 11ರ ಬೆಳಗ್ಗೆ 12.15ರ ವರೆಗೆ ಬ್ಯಾಂಕಿಂಗ್‌ ನ ಅನೇಕ ಸೇವೆಗಳಲ್ಲಿ ವ್ಯತ್ಯಯವಾಗಿದೆ. ಬ್ಯಾಂಕಿಂಗ್‌ ನ ಹಲವು ಸೇವೆಗಳನ್ನು ನಿರ್ವಹಣೆ ಚಟುವಟಿಕೆ ಮಾಡುವ ಹಿನ್ನೆಲೆಯಲ್ಲಿ ಅನೇಕ ಸೇವೆಗಳು ಗ್ರಾಹಕರಿಗೆ ಲಭ್ಯವಾಗುವುದಿಲ್ಲ ಎಂದು ಎಸ್‌ಬಿಐ ತನ್ನ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿದೆ.

ಎಸ್‌ಬಿಐ ತಿಳಿಸಿರುವಂತೆ ಪ್ರಮುಖವಾಗಿ ಗ್ರಾಹಕರು ಆನ್‌ಲೈನ್‌ ಸೇವೆಗಾಗಿ ಬಳಕೆ ಮಾಡುವ ಯೋನೋ, ಯುಪಿಐ ಮತ್ತು ಯೋನೊ ಲೈಟ್‌ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಹೀಗಾಗಿ ತುರ್ತು ಕಾರ್ಯಗಳಿದ್ದರೆ ಗ್ರಾಹಕರು ಇಂದು ರಾತ್ರಿಯೊಳಗೆ ಮಾಡಿಕೊಳ್ಳುವುದು ಒಳಿತು.

ಭಾರತ ಸರಕಾರಿ ಸ್ವಾಮ್ಯದ ಅಗ್ರಮಾನ್ಯ ಬ್ಯಾಂಕ್‌ ಆಗಿರುವ ಎಸ್‌ಬಿಐ ಹೆಸರಲ್ಲಿ ಹಲವು ಹ್ಯಾಕರ್ಸ್‌ ಗಳು ಗ್ರಾಹಕರನ್ನು ವಂಚಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ ತನ್ನ ಗ್ರಾಹಕರಿಗೆ ಆಗಾಗ ಪಾಸ್‌ ವರ್ಡ್‌ ಬದಲಾಯಿಸುವಂತೆಯೂ ಸೂಚಿಸುತ್ತಿದೆ. ಇದೀಗ ಹೆಚ್ಚಿನ ಭದ್ರತೆಯ ಜೊತೆಗೆ ನಿರ್ವಹಣಾ ಕಾರ್ಯವನ್ನು ನಡೆಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಎರಡು ದಿನಗಳ ಕಾಲ ಕೆಲವೊಂದು ಸೇವೆಗಳು ಲಭ್ಯವಾಗೋದಿಲ್ಲ.

Comments are closed.