ಚೈನೈ: ಆ ದಂಪತಿ ಬರಿ ಮಾತಿನಲ್ಲೇ ಕೋಟ್ಯಾಂತರ ರೂಪಾಯಿ ಹಣ ಗಳಿಸಿದ್ದರು. ಕೆಲಸವಿಲ್ಲದೇ ಕಾಸು ಗಳಿಸಿದ ದಂಪತಿಗಳ ರಹಸ್ಯ ಹುಡುಕಿದ ಪೊಲೀಸರಿಗೆ ಶಾಕ್ ಕಾದಿತ್ತು. ಮಹಿಳೆಯರೊಂದಿಗೆ ಪಬ್ ಜೀ ಆಡುತ್ತ ಅಶ್ಲೀಲ್ ವಾಗಿ ಮಾತನಾಡುತ್ತಿದ್ದ ಪತಿ ಅದನ್ನು ಯೂ ಟ್ಯೂಬ್ ನಲ್ಲಿ ಹರಿಬಿಟ್ಟು ಆದಾಯ ಗಳಿಸುತ್ತಿದ್ದ, ಇದಕ್ಕೆ ಪತ್ನಿಯೂ ಸಾಥ್ ನೀಡುತ್ತಿದ್ದರು.

ಚೈನೈನಲ್ಲಿ ಇಂತಹ ವಿಕೃತ ಕಾಮಿಯೊಬ್ಬನನ್ನುಪೊಲೀಸರ ಬಂಧಿಸಿದ್ದಾರೆ. ಯೂಟ್ಯೂಬ್ ಗಳಲ್ಲಿ ಅಶ್ಲೀಲ ಸಂಭಾಷಣೆ ಹರಿಬಿಡುತ್ತಿದ್ದ ಈತ ಇದರಿಂದಲೇ ಕೆಲವೇ ಕೆಲವು ವರ್ಷದಲ್ಲಿ ಕೋಟ್ಯಾಧೀಶ್ವರನಾಗಿದ್ದ.

ಮದನ್ ಹಾಗೂ ಕೃತಿಕಾ ಎಂಬ ಈ ದಂಪತಿ ಪೋರ್ನೋಗ್ರಫಿಕ್ ಆಡಿಯೋ ಮೂಲಕವೇ ಮೂರು ವರ್ಷದಲ್ಲಿ 75 ಕೋಟಿ ರೂಪಾಯಿ ಸಂಪಾದಿಸಿದ್ದಾರೆ ಎನ್ನಲಾಗಿದೆ.

ಮಹಿಳೆಯರನ್ನು ಅಶ್ಲೀಲವಾಗಿ ಮಾತನಾಡಲು ಪ್ರೇರೇಪಿಸುತ್ತಿದ್ದ ಮದನ್ ಹೀಗೆ ಮಾತನಾಡುವ ಮಹಿಳೆಯರಿಗೆ 5 ಲಕ್ಷ ರೂಪಾಯಿಯವರೆಗೆ ಪೇಮೆಂಟ್ ನೀಡುತ್ತಿದ್ದ ಎನ್ನಲಾಗಿದೆ.

ಪಬ್ ಜೀ ಆಡುವಾಗಲೇ ಅಶ್ಲೀಲವಾಗಿ ಮಾತನಾಡುವ ಮದನ್ ಆಡಿಯೋಗಳನ್ನು ರೆಕಾರ್ಡ್ ಮಾಡಿ ಯೂಟ್ಯೂಬ್ ಗೆ ಬಿಡುತ್ತಿದ್ದ. ಇದಕ್ಕೆ ಪತ್ನಿ ಕೃತಿಕಾ ಕೂಡ ಸಾಥ್ ನೀಡುತ್ತಿದ್ದಳು ಎನ್ನಲಾಗಿದೆ. ಇಬ್ಬರನ್ನು ಬಂಧಿಸಿರುವ ಪೊಲೀಸರು ಕೃತಿಕಾ ಅಕೌಂಟ್ ನಲ್ಲಿದ್ದ 4 ಕೋಟಿ ರೂಪಾಯಿ ವಶಕ್ಕೆ ಪಡೆದಿದ್ದಾರೆ.

ಮದನ್ ಜೊತೆ ಅಶ್ಲೀಲವಾಗಿ ಮಾತನಾಡಿ ಪೆಮೇಂಟ್ ಪಡೆಯುತ್ತಿದ್ದ ಮಹಿಳೆಯರನ್ನು ಬಂಧಿಸಿ ಜೈಲಿಗಟ್ಟಲು ಪೊಲೀಸರು ಸಿದ್ಧತೆ ನಡೆಸಿದ್ದು, ಮಹಿಳೆಯರಿಗಾಗಿ ಹುಡುಕಾಟ ನಡೆದಿದೆ.