ಭಾನುವಾರ, ಏಪ್ರಿಲ್ 27, 2025
HomeBreakingಕಾಫಿನಾಡಲ್ಲಿ ದರ್ಶನ್ ಸಫಾರಿ…! ಸ್ನೇಹಿತರ ಜೊತೆ ಜಾಲಿ ರೈಡ್ ಹೋದ ದಚ್ಚು…!!

ಕಾಫಿನಾಡಲ್ಲಿ ದರ್ಶನ್ ಸಫಾರಿ…! ಸ್ನೇಹಿತರ ಜೊತೆ ಜಾಲಿ ರೈಡ್ ಹೋದ ದಚ್ಚು…!!

- Advertisement -

ಚಿಕ್ಕಮಗಳೂರು: ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿ, ಪ್ರಾಣಿಪ್ರಿಯ ಹಾಗೂ ಪರಿಸರ ಪ್ರೇಮಿ ದರ್ಶನ್ ಶೂಟಿಂಗ್ ನಡುವಿನ ವಿರಾಮದಲ್ಲಿ ಕಾಫಿನಾಡಿನತ್ತ ವಿಹಾರ ನಡೆಸಿದ್ದಾರೆ. ಸ್ನೇಹಿತರ ಜೊತೆ ಕಾಫಿನಾಡಿಗೆ ಲಗ್ಗೆ ಇಟ್ಟ ದರ್ಶನ್ ಮುತ್ತೋಡಿ ಅರಣ್ಯದಲ್ಲಿ ಸಫಾರಿ ನಡೆಸಿದ್ದಾರೆ.

ಚಿಕ್ಕಮಗಳೂರಿನ ಸಿಗೇಖಾನ್ ಅರಣ್ಯ ಧಾಮಕ್ಕೆ ಬಂದ ದರ್ಶನ್,  ಹೂಡಿ,ಮತ್ತೋಡಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಸೌಂದರ್ಯ ಸವಿದಿದ್ದಾರೆ. ಮುತ್ತೋಡಿ ಅರಣ್ಯದಲ್ಲಿ ಅರಣ್ಯಾಧಿಕಾರಿಗಳ ಜೊತೆ ಸಫಾರಿ ಮಾಡಿದ್ದಾರೆ.

ಅಂದಾಜು 25 ಸಾವಿರ ಹೆಕ್ಟೆರ್ ಅಧಿಕ  ವಿಸ್ತಾರದ ಮುತ್ತೋಡಿ ಅರಣ್ಯದಲ್ಲಿ ನಿಸರ್ಗದತ್ತವಾಗಿ ಬೆಳೆದ  300 ಕ್ಕೂ ಅಧಿಕ ವಯಸ್ಸಿನ  ಸಾಗುವಾನಿ ಮರ ಸೇರಿದಂತೆ ಅಪಾರ ಸಸ್ಯ ಸಂಪತ್ತು ಇದೆ. ಜೊತೆಗೆ ಪ್ರಾಣಿ-ಪಕ್ಷಿ ವೀಕ್ಷಣೆಯಲ್ಲೂ ಸಮಯ ಕಳೆದಿದ್ದಾರೆ.

ಕೃಷಿ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಗೆ  ಅರಣ್ಯ ಇಲಾಖೆಯ ಅಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿದ್ದು, ದರ್ಶನ್ ಗೆ ಅರಣ್ಯದ ಇಂಚಿಂಚೂ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದ್ದಾರೆ ಎನ್ನಲಾಗಿದೆ. ದರ್ಶನ್ ಜೊತೆ ಸ್ನೇಹಿತರು ಅರಣ್ಯದಲ್ಲಿ ಸುತ್ತಾಡಿ ಎಂಜಾಯ್ ಮಾಡಿದ್ದಾರೆ.

ಇನ್ನು ಕಾಫಿನಾಡಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದ ಸಂಗತಿ ತಿಳಿದ ಅಭಿಮಾನಿಗಳು ಸೆಲ್ಪಿಗಾಗಿ ಮುಗಿಬಿದ್ದಿದ್ದು, ನೆಚ್ಚಿನ ನಟ ಜೊತೆ ಪೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ.

RELATED ARTICLES

Most Popular