ಕಡೂರು : ಅದೆಷ್ಟೋ ಮಂದಿ ಹೆಣ್ಣು ಮಗು ಹುಟ್ಟಿದ್ರೆ ಸಾಕು ಅಂತಾ ಕಾಯುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬಳು ಪಾಪಿ ತಾಯಿ ಹೆಣ್ಣು ಮಗು ಹುಟ್ಟಿದೆ ಅನ್ನೋ ಕಾರಣಕ್ಕೆ ಅಮಾನವೀಯವಾಗಿ ವರ್ತಿಸಿದ್ದಾರೆ. 23 ದಿನದ ಹೆಣ್ಣು ಮಗುವನ್ನು ಬೆಂಕಿ ಉರಿಯುತ್ತಿರುವ ಒಲೆಗೆ ಹಾಕಿ ಕೊಂದು ಹಾಕಿದ್ದಾಳೆ.

ಇಂತಹ ಅಮಾನವೀಯ ಘಟನೆ ನಡೆದಿರೋದು ಚಿಕ್ಕಮಳೂರು ಜಿಲ್ಲೆಯ ಕಡೂರು ತಾಲೂಕಿನ ನಾಯಕನಹಟ್ಟಿಯಲ್ಲಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿ ಸಂಗೀತಾ, ರಮೇಶ್ ಚಂದ್ರಮ್ಮ, ಬಾಬು ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕಡೂಠು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.