ಜನಾಧನ್ ಖಾತೆದಾರರಿಗೆ ತಿಂಗಳಿಗೆ 3,000 ರೂ. ! ಇಎಂಐ, ಎಲ್ಲಾ ಸಾಲ ಮರುವಾವತಿಗೂ ವಿನಾಯಿತಿ ?

0

ನವದೆಹಲಿ : ಕೊರೊನಾ ಭೀತಿಯಿಂದ ಕೇಂದ್ರ ಸರಕಾರ ಹೊರಡಿಸಿರೋ ಲಾಕ್ ಡೌನ್ ಆದೇಶದಿಂದ ದೇಶದ ಆರ್ಥಿಕತೆ ನೆಲಕಚ್ಚಿದೆ. ಜನರು ಮನೆಯಿಂದ ಹೊರಬರಲಾಗದೆ ಉದ್ಯೋಗ, ವ್ಯವಹಾರವಿಲ್ಲದೇ ತತ್ತರಿಸಿ ಹೋಗಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಜನರಿಗೆ ಗುಡ್ ನ್ಯೂಸ್ ನೀಡೋದಕ್ಕೆ ಮುಂದಾಗಿದೆ. ಜನಧನ್ ಖಾತೆದಾರರಿಗೆ ತಿಂಗಳಿಗೆ 3,000ರೂ. ಹಾಗೂ ಎಲ್ಲಾ ರೀತಿಯ ಸಾಲದ ಇಎಂಐ ಪಾವತಿಯಲ್ಲಿ 3 ತಿಂಗಳ ಕಾಲ ವಿನಾಯಿತಿ ನೀಡಲು ಚಿಂತನೆ ನಡೆಸಿದೆ.

ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ 14ರ ವರೆಗೆ ದೇಶದಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಜನರೆಲ್ಲಾ ಮನೆಯೊಳಗೆ ಬಂಧಿಯಾಗಿದ್ದಾರೆ. ಉದ್ಯೋಗವಿಲ್ಲ, ವ್ಯವಹಾರವಿಲ್ಲದೇ ತತ್ತರಿಸಿರೋ ಜನರಿಗೆ ಸಾಲಮರುಪಾವತಿ ಮಾಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹೀಗಾಗಿಯೇ ಕೇಂದ್ರ ಸರಕಾರ ದೇಶದ ಜನರ ಅನುಕೂಲತೆಗಾಗಿ ಭರ್ಜರಿ ಪ್ಯಾಕೇಜ್ ನೀಡಲು ಮುಂದಾಗಿದೆ. ಅದಕ್ಕೂ ಮೊದಲು ಜನಧನ್ ಖಾತೆಯನ್ನು ಹೊಂದಿರುವವರ ಖಾತೆಗೆ ತಿಂಗಳಿಗೆ 3,000 ರೂಪಾಯಿ ಹಾಗೂ ಇಎಂಐ ಪಾವತಿಗೂ ಕನಿಷ್ಠ ಮೂರು ತಿಂಗಳ ಕಾಲ ವಿನಾಯಿತಿ ನೀಡೋ ಸಾಧ್ಯತೆಯಿದೆ. ವೈಯಕ್ತಿಕ ಸಾಲ, ವ್ಯವಹಾರ, ಗೃಹ, ವಾಹನ, ಉದ್ಯಮ ಸಾಲ ಸೇರಿದಂತೆ ಎಲ್ಲಾ ರೀತಿಯ ಸಾಲಗಳ ಮರುಪಾವತಿಗೆ ಒಂದಿಷ್ಟು ತಿಂಗಳ ಕಾಲ ವಿನಾಯಿತಿ ನೀಡಲು ಮುಂದಾಗಿದೆ.

ಕೇಂದ್ರ ವಿತ್ತ ಸಚಿವಾಲಯ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಮನವಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆರ್ ಬಿಐ ಶೀಘ್ರದಲ್ಲಿಯೇ ಬ್ಯಾಂಕುಗಳಿಗೆ ನಿರ್ದೇಶನ ನೀಡುವ ಸಾಧ್ಯತೆಯಿದೆ.

Leave A Reply

Your email address will not be published.