ದಿ. ಚಿರಂಜೀವಿ ಸರ್ಜಾ… ಮನೆಯಿಂದ ಮಗ ದೈಹಿಕವಾಗಿ ದೂರವಾಗಿದ್ದರೂ ಸರ್ಜಾ ಕುಟುಂಬದ ಪ್ರತಿ ಉಸಿರಿನಲ್ಲೂ ಚಿರು ಮಗುವಾಗಿ, ಮಗನಾಗಿ ಬೆರೆತು ಹೋಗಿದ್ದಾನೆ. ಚಿರಂಜೀವಿ ಸರ್ಜಾ ಹುಟ್ಟುಹಬ್ಬವನ್ನು ಒಂದು ದಿನ ಮುಂಚಿತವಾಗಿ ಆಚರಿಸಿದ ಸರ್ಜಾ ಕುಟುಂಬ ಅಪ್ಪನ ಬರ್ತಡೇಯಲ್ಲಿ ಮಗುವಿಗೆ ಸ್ವಾಗತ ಕೋರಿದೆ.

ಚಿರು ಹುಟ್ಟುಹಬ್ಬದ ಅಂಗವಾಗಿ ಮೇಘನಾ ಚಿರು ಪೋಟೋದ ಎದುರು ಸ್ಪೆಶಲ್ ವಿಡಿಯೋದ ಜೊತೆ ಕೇಕ್ ಕತ್ತರಿಸಿದ್ದು, ಹ್ಯಾಪಿ ಬರ್ತಡೇ ಚಿರು ಎಂದು ಹಾಡುವ ಬದಲು, ಸರ್ಜಾ ಕುಟುಂಬ ವೆಲ್ ಕಮ್ ಟೂ ಜ್ಯೂನಿಯರ್ ಚಿರು ಎಂದು ಹಾಡಿ ಹುಟ್ಟುವ ಮಗುವನ್ನು ಸ್ವಾಗತಿಸಿದೆ.
ಮೂಲಗಳ ಮಾಹಿತಿ ಪ್ರಕಾರ ನಾಳೆ ಮೇಘನಾ ಡಿಲೇವರಿ ನಿಗದಿಯಾಗಿದ್ದು, ಇದೇ ಕಾರಣಕ್ಕೆ ಇಂದು ಚಿರು ಬರ್ತಡೇ ಆಚರಿಸಲಾಗುತ್ತಿದೆ ಎನ್ನಲಾಗಿದೆ.

ಚಿರು ಬರ್ತಡೇ ಆಚರಣೆ ಬಗ್ಗೆ ಬಹುಭಾಷಾ ನಟ ಅರ್ಜುನ್ ಸರ್ಜಾ ಮಾತನಾಡಿದ್ದು, ನಮ್ಮ ಕುಟುಂಬ ಇದುವರೆಗೂ ಅನುಭವಿಸಿದ ನೋವು,ಕಷ್ಟ ಎಲ್ಲ ದೂರವಾಗಬೇಕು. ನಕಾರಾತ್ಮಕ ವಿಚಾರಗಳೆಲ್ಲ ಮರೆಯಾಗಬೇಕು. ಹೊಸ ಖುಷಿ,ನಗು,ನಲಿವಿನೊಂದಿಗೆ ಜ್ಯೂನಿಯರ್ ಚಿರು ನಮ್ಮ ಕುಟುಂಬ ಸೇರಬೇಕು. ಇದು ನಮ್ಮ ನೀರಿಕ್ಷೆ ಎಂದಿದ್ದಾರೆ.

ಚಿರು ಸಹೋದರರು, ಸ್ನೇಹಿತರು,ಆಪ್ತರು ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಚಿರು ಕಟೌಟ್ ಗಳ ನಡುವೆ ನಡೆದ ಸಮಾರಂಭದಲ್ಲಿ ಚಿರು ನೆನೆದು ಕಣ್ಣೀರಿಟ್ಟಿದ್ದಾರೆ.
MUST READ : ಅಕ್ಟೋಬರ್ 17ರಂದು ತ್ರಿಬಲ್ ಖುಷಿಯಲ್ಲಿ ಸರ್ಜಾ ಕುಟುಂಬ : ಮೇಘನಾ ಸರ್ಜಾ ಮುಖದಲ್ಲಿ ಅರಳಿದ ನಗು

MUST READ : ಫಿನಿಕ್ಸ್ ನಂತೆ ಮತ್ತೆ ಬರುವ ಭರವಸೆ ಕೊಟ್ಟಿದ್ದಾರೆ ಚಿರು ..! ಮೇಘನಾ ಮನದಾಳದ ಮಾತು
ಈ ಹುಟ್ಟುಹಬ್ಬವನ್ನು ಚಿರು ಸಹೋದರ ಧ್ರುವ ಸರ್ಜಾ ಆಯೋಜಿಸಿದ್ದು, ಈ ವಿಡಿಯೋವನ್ನು ಧ್ರುವ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಧ್ರುವ ಸರ್ಜಾ ಹಂಚಿಕೊಂಡ ವಿಡಿಯೋಗೆ ಈಗಾಗಲೇ 4 ಲಕ್ಷ ಕ್ಕೂ ಅಧಿಕ ಜನರು ಲೈಕ್ ಮಾಡಿದ್ದರೇ, 50 ಸಾವಿರ ಜನರು ಶೇರ್ ಮಾಡಿಕೊಂಡಿದ್ದಾರೆ.