ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪ್ರತೀ ಭಾನುವಾರದಂದು ಕರ್ಪ್ಯೂ ಮಾದರಿಯಲ್ಲಿ ಲಾಕ್ ಡೌನ್ ನಡೆಸುವುದಾಗಿ ಘೋಷಣೆ ಮಾಡಿತ್ತು. ಆದ್ರೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಂಪ್ಲೀಟ್ ಲಾಕ್ ಡೌನ್ ಆದೇಶವನ್ನು ಹಿಂಪಡೆದಿದ್ದಾರೆ.

ನಾಳೆ ಎರಡನೇ ಬಾರಿಗೆ ಕರ್ಪ್ಯೂ ಮಾದರಿಯಲ್ಲಿ ಲಾಕ್ ಡೌನ್ ಆಚರಣೆ ಮಾಡಬೇಕಾಗಿತ್ತು. ಆದ್ರೀಗ ರಾಜ್ಯ ಸರಕಾರ ಕಂಪ್ಲೀಟ್ ಲಾಕ್ ಡೌನ್ ಆದೇಶ ಕೈಬಿಟ್ಟಿರುವುದರಿಂದಾಗಿ ರಾಜ್ಯದಲ್ಲಿ ಭಾನುವಾರ ಎಲ್ಲಾ ಸೇವೆಗಳು ಎಂದಿನಂತೆಯೇ ಕಾರ್ಯನಿರ್ವಹಿಸಲಿವೆ.

ಬಸ್ ಸಂಚಾರ, ಟ್ಯಾಕ್ಸಿ, ಆಟೋ ರಿಕ್ಷಾ ಸೇರಿದಂತೆ ಸಾರಿಗೆ ಸಂಚಾರ ಸಹಜ ರೀತಿಯಲ್ಲಿಯೇ ಇರಲಿವೆ, ಅಲ್ಲದೇ ಜನರಿಗೆ ಅಗತ್ಯವಸ್ತುಗಳು ಕೂಡ ಲಭ್ಯವಾಗಲಿದೆ.