ಬಿಸಿಸಿಐ ಮಾಸ್ಟರ್ ಪ್ಲ್ಯಾನ್ : ಕನ್ನಡಿಗನಿಗೆ ಒಲಿಯುತ್ತಾ ಟೀಂ ಇಂಡಿಯಾ ನಾಯಕತ್ವ

0

ಕೊರೊನಾ ವೈರಸ್ ಸೋಂಕಿನಿಂದಾಗಿ ಕ್ರೀಡಾ ಚಟುವಟಿಕೆಗಳೇ ಸ್ಥಬ್ದವಾಗಿವೆ. ವರ್ಷಾಂತ್ಯಕ್ಕೆ ಕ್ರಿಕೆಟ್ ಅಂಗಳದಲ್ಲಿ ಮತ್ತೆ ಗತವೈಭವ ಸಾರಲಿದೆ. ಇದೇ ಹೊತ್ತಲೇ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ಕುರಿತು ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳು ಟೆಸ್ಟ್ ಸರಣಿ ನಡೆಸೋದಕ್ಕೆ ಸಿದ್ದತೆ ನಡೆಸುತ್ತಿವೆ.

ಆದರೆ ಕೊರೊನಾ ಲಾಕ್ ಡೌನ್ ನಿಂದಾಗಿ ಬಹುತೇಕ ಪಂದ್ಯಾವಳಿಗಳ ವೇಳಾಪಟ್ಟಿಯಲ್ಲಿ ಭಾರೀ ಬದಲಾವಣೆಗಳಾಗಿವೆ. ಹೀಗಾಗಿ ಇಂಡಿಯಾ – ಆಸ್ಟ್ರೇಲಿಯಾ ಸರಣಿಯ ಹೊತ್ತಲ್ಲೇ ಭಾರತ – ಇಂಗ್ಲೆಂಡ್ ಏಕದಿನ ಸರಣಿ ಕೂಡ ಇದೇ ಹೊತ್ತಲ್ಲೇ ನಡೆಯೋ ಸಾಧ್ಯತೆಯಿದೆ.

ಇದು ಬಿಸಿಸಿಐಗೆ ತಲೆನೋವು ತರಿಸಿದೆ. ಹೀಗಾಗಿಯೇ ಬಿಸಿಸಿಐ ಮಾಸ್ಟರ್ ಪ್ಲ್ಯಾನ್ ವೊಂದನ್ನು ಸಿದ್ದಪಡಿಸಿಕೊಂಡಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಗೆ ಎರಡು ತಂಡಗಳನ್ನು ಕಳುಹಿಸಲು ಮುಂದಾಗಿದೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ನಾಯಕತ್ವದ ತಂಡವನ್ನು ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಕಳುಹಿಸಿಕೊಟ್ರೆ, ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದಲ್ಲಿನ ತಂಡವನ್ನು ಇಂಗ್ಲೆಂಡ್ ಗೆ ಏಕದಿನ ಸರಣಿಗೆ ಕಳುಹಿಸಿಕೊಡಲಿದೆ.

ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ಮಾಯಂಕ್ ಅಗರ್ ವಾಲ್ ಸೇರಿದಂತೆ ಹಲವರು ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಶಿಖರ್ ಧವನ್, ಪ್ರಥ್ವಿ ಶಾ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ ಚಹಲ್ ಸೇರಿದಂತೆ ಹಲವರು ಕೆ.ಎಲ್.ರಾಹುಲ್ ನಾಯಕತ್ವದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Leave A Reply

Your email address will not be published.