ಸೋಮವಾರ, ಜೂನ್ 16, 2025
HomeBreakingತಮಿಳಿನಲ್ಲಿ ಕರಾವಳಿ ಅಲೆ….! ಅವಕಾಶಗಳ ಸುರಿಮಳೆಯಲ್ಲಿ ಮಿಂದೆದ್ದ ಕೃತಿ ಶೆಟ್ಟಿ…!!

ತಮಿಳಿನಲ್ಲಿ ಕರಾವಳಿ ಅಲೆ….! ಅವಕಾಶಗಳ ಸುರಿಮಳೆಯಲ್ಲಿ ಮಿಂದೆದ್ದ ಕೃತಿ ಶೆಟ್ಟಿ…!!

- Advertisement -

ಸ್ಯಾಂಡಲ್ ವುಡ್ ನಿಂದ ಬಾಲಿವುಡ್, ಟಾಲಿವುಡ್, ಕಾಲಿವುಡ್ ಗೆ ವಲಸೆ ಹೊಸದಲ್ಲ. ಈ ಸಾಲಿನಲ್ಲಿ ಒಂದೇ ಸಿನಿಮಾದ ಮೂಲಕ ಸದ್ದು ಮಾಡ್ತಿರೋ ಬೆಡಗಿ ಕರಾವಳಿ ಸುಂದರಿ ಕೃತಿ ಶೆಟ್ಟಿ.

ತಮಿಳಿನ ಉಪ್ಪೆನ ಸಿನಿಮಾದಲ್ಲಿ ನಟಿಸಿದ ಕೃತಿ ಶೆಟ್ಟಿ ಒಂದು ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ. ಅಷ್ಟೇ ಅಲ್ಲ ಒಂದು ಸಿನಿಮಾದ ನಟನೆಯಲ್ಲೇ ಮೋಡಿ ಮಾಡಿ ಅವಕಾಶಗಳ ಸುರಿಮಳೆಯನ್ನೇ ಗಿಟ್ಟಿಸಿಕೊಂಡಿದ್ದಾರೆ.

ಮಂಗಳೂರು ಮೂಲದ ಕೃತಿ ಶೆಟ್ಟಿ, ಬೆಳೆದಿದ್ದು ಮುಂಬೈನಲ್ಲಿ. ಮಾಡೆಲಿಂಗ್ ನಲ್ಲಿ ಗುರುತಿಸಿಕೊಂಡಿದ್ದ ಕೃತಿ ಶೆಟ್ಟಿಗೆ ಅಕಸ್ಮಾತಾಗಿ ತಮಿಳಿನ ಉಪ್ಪನ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು.

ಸಿಕ್ಕಿದ ಅವಕಾಶದಲ್ಲಿ ಸಖತ್ ಮಿಂಚಿದ ಕೃತಿ ಪ್ರತಿಭಾಪ್ರದರ್ಶನದ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಮೈತ್ರಿ ಮೂವಿಸ್ ನ ಮೂಲಕ ತಮ್ಮ ಸಿನಿಕೆರಿಯರ್ ಆರಂಭಿಸಿದ ಕನ್ನಡತಿ ಕೃತಿ, ಮೆಗಾಸ್ಟಾರ್ ಕುಟುಂಬದ ಕುಡಿ ವೈಷ್ಣವ್ ತೇಜ್ ಗೆ ಜೊತೆಯಾಗಿದ್ದಾರೆ.

12 ವರ್ಷದ ಕೃತಿ ಈ ಸಿನಿಮಾದ ಬಳಿಕ ಶ್ಯಾಮ್ ಸಿಂಗ್ ರಾಯ್ ಅಭಿನಯದ ಸಿನಿಮಾಗೆ ಆಯ್ಕೆಯಾಗಿದ್ದು ಬಳಿಕ ಸುಧೀರ್ ಬಾಬು ನಾಯಕರಾಗಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾದಲ್ಲಿ ಅವಕಾಶ ಸಿಗುತ್ತಿದ್ದಂತೆ ಸಂಭಾವನೆ ಏರಿಸಿಕೊಂಡ ಕೃತಿ ಶೆಟ್ಟಿ ಈಗ ಒಂದು ಸಿನಿಮಾಕ್ಕೆ 85 ಲಕ್ಷ ಸಂಭಾವನೆ ಕೇಳ್ತಿದ್ದಾರಂತೆ.

ಈಗಾಗಲೇ ತೆಲುಗಿನ ಉಪ್ಪನ ಸಿನಿಮಾ ಚಿತ್ರಮಂದಿರಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದಿದ್ದು ಏಪ್ರಿಲ್ ನಲ್ಲಿ ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಆಗಲಿದೆ. ಒಟ್ಟಿನಲ್ಲಿ ಮತ್ತೊಂದು ಕರಾವಳಿ ಬೆಡಗಿ ಸಿನಿ ರಂಗದಲ್ಲಿ ಸದ್ದು ಮಾಡಲಾರಂಭಿಸಿದ್ದು ಸಧ್ಯದಲ್ಲೇ ಕೃತಿ ಸ್ಯಾಂಡಲವುಡ್ ಗೂ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

RELATED ARTICLES

Most Popular