ಮತ್ತೆ ಬ್ಲ್ಯಾಸ್ಟ್ ಆಯ್ತು ಸಿಲೆಂಡರ್ ದರ…! 25 ರೂಪಾಯಿ ಏರಿಕೆ ಕಂಡ ಎಲ್ ಪಿಜಿ….!!

ಗ್ಯಾಸ್ ಒಲೆ ಬದಲು ಸಿಲೆಂಡರ್ರೇ ಮಧ್ಯಮವರ್ಗದ ಜನರ ಕೈಸುಡುವ ಲಕ್ಷಣ ದಟ್ಟವಾಗಿದ್ದು ಬರೋಬ್ಬರಿ 20 ರೂಪಾಯಿ ದರ ಏರಿಕೆ ಕಾಣುವ ಮೂಲಕ ಎಲ್ ಪಿಜಿ ಸಿಲಿಂಡರ್ 800 ರೂಪಾಯಿ ಸನಿಹ ತಲುಪಿದೆ.

ಫೆ.20 ರ ವೇಳೆಗೆ ದರ ಏರಿಕೆ ಕಂಡಿದ್ದ ಎಲ್ಪಿಜಿ ಸಿಲೆಂಡರ್ ಮತ್ತೆ ದರ ಏರಿಕೆ ಕಂಡಿದ್ದು 20 ರೂಪಾಯಿ ರೇಟ್ ಹೆಚ್ಚಿಸಿಕೊಂಡಿದ್ದು ಸಿಲೆಂಡರ್ ಬೆಲೆ ಈಗ 794 ರೂಪಾಯಿಗೆ ತಲುಪಿದೆ. ಸದ್ಯ ಕರ್ನಾಟಕದಲ್ಲಿ ಎಲ್ ಪಿಜಿ ದರ 775 ರ ಗಡಿಯಲ್ಲಿದ್ದು ದೆಹಲಿಯಲ್ಲಿ 20 ರೂಪಾಯಿ ಹೆಚ್ಚಳವಾಗಿ ದರ 800 ಕ್ಕೆ ತಲುಪಿದೆ.

2020 ರ ಡಿಸೆಂಬರ್ ನಿಂದ ಇಲ್ಲಿಯವರೆಗೆ ಒಟ್ಟು 6 ಕ್ಕೂ ಹೆಚ್ಚು ಸಲ ಸಿಲೆಂಡರ್ ದರ ಏರಿಕೆಯಾಗಿದ್ದು ಒಟ್ಟು 200 ರೂಪಾಯಿ ಪ್ರೈಸ್ ಹೈಕ್ ಆದಂತಾಗಿದೆ. ಫೆ.4 ರಂದು 25 ರೂಪಾಯಿ ಹಾಗೂ ಫೆ.15 ರಂದು ಸಿಲೆಂಡರ್ ಬೆಲೆ 50 ರೂಪಾಯಿ ದರ ಏರಿತ್ತು. ಇದೀಗ ಮತ್ತೆ ದೆಹಲಿಯಲ್ಲಿ 20 ರೂಪಾಯಿ ಏರಿರೋದು ಕರ್ನಾಟಕದಲ್ಲೂ ಏರಿಕೆಯಾಗೋದು ಖಚಿತ ಎನ್ನಲಾಗುತ್ತಿದೆ.

ಸತತವಾಗಿ ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆಯಾಗಿದ್ದು ಈಗ ಸಿಲೆಂಡರ್ ದರ ಕೂಡ ಹೆಚ್ಚಾಗಿದ್ದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಎಲ್ ಪಿಜಿ ಸಿಲೆಂಡರ್ ಗೆ ನೀಡಲಾಗುತ್ತಿದ್ದ ಸಬ್ಸಿಡಿ ಕೂಡ ರದ್ದುಗೊಳಿಸಲಾಗಿದ್ದು ದರ ಏರಿಕೆ ಜನಸಾಮಾನ್ಯರ ಕೈಸುಡುವ ನಿರ್ಧಾರ ಅಂತ ಜನರು ಪ್ರತಿಕ್ರಿಯಿಸುತ್ತಿದ್ದಾರೆ.

Comments are closed.