ಸೋಮವಾರ, ಏಪ್ರಿಲ್ 28, 2025
HomeBreakingBiggboss-8:ಬುಧವಾರದಿಂದ ಮತ್ತೆ ಶುರು ಬಿಗ್ ಬಾಸ್ ಆಟ….!ಹಳಬರಿಗೆ ಜೊತೆ ಕಣಕ್ಕಿಳಿತಾರಾ ಹೊಸಬರು…?!

Biggboss-8:ಬುಧವಾರದಿಂದ ಮತ್ತೆ ಶುರು ಬಿಗ್ ಬಾಸ್ ಆಟ….!ಹಳಬರಿಗೆ ಜೊತೆ ಕಣಕ್ಕಿಳಿತಾರಾ ಹೊಸಬರು…?!

- Advertisement -

ಕೊರೋನಾ ಎರಡನೇ ಅಲೆ ಕಾರಣಕ್ಕೆ ಬಿಗ್ ಬಾಸ್ ಸೀಸನ್ 8 ಅರ್ಧದಲ್ಲೇ ಮೊಟಕುಗೊಂಡು ಒಂಟಿ ಮನೆ ಆಟ ನೋಡೋ ಪ್ರೇಕ್ಷಕರಿಗೆ ನಿರಾಸೆ ಎದುರಾಗಿತ್ತು. ಆದರೆ ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದ್ದಂತೆ ಮತ್ತೆ ದೊಡ್ಮನೆಯಲ್ಲಿ ರಂಗಿನಾಟ ಆರಂಭವಾಗಿದ್ದು, ಬುಧವಾರದಿಂದ ಮತ್ತೆ ರಾಜ್ಯದ ಪ್ರೇಕ್ಷಕರಿಗೆ ಬಿಗ್ ಬಾಸ್ ನೋಡೋ ಭಾಗ್ಯ ಸಿಗಲಿದೆ.  

ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಥಗಿತಗೊಂಡಾಗ ಮನೆಯೊಳಗೆ 12 ಸ್ಪರ್ಧಿಗಳಿದ್ದರು. ಮತ್ತೆ ಪುನರಾರಂಭವಾಗಲಿರೋ  ಸೀಸನ್ ನಲ್ಲಿ ಈ ಸ್ಪರ್ಧಿಗಳು ಆಟ ಮುಂದುವರೆಸಲಿದ್ದು, ಇವರೊಂದಿಗೆ ಇನ್ನಷ್ಟು ಹೊಸ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

ಮಂಜುಪಾವಗಡ್, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಪ್ರಿಯಾಂಕಾ ತಿಮ್ಮೇಶ್, ದಿವ್ಯಾ ಸುರೇಶ್, ಶುಭಾ ಪೂಂಜಾ, ಅರವಿಂದ್ ಕೆಪಿ, ದಿವ್ಯಾ ಉರುಡಗ, ನಿಧಿ ಸುಬ್ಬಯ್ಯ, ರಘು ಗೌಡ,ಶಮಂತ್ ಗೌಡ ವೈಷ್ಣವಿ ಗೌಡ ಸೀಸನ್ ಸ್ಥಗಿತಗೊಳ್ಳುವಾಗ ಸ್ಪರ್ಧಿಗಳಾಗಿ ಉಳಿದುಕೊಂಡಿದ್ದರು.

ಈ ಎಲ್ಲ ಸ್ಪರ್ಧಿಗಳಿಗೆ ಈಗಾಗಲೇ ಒಂದು ಡೋಸ್ ಲಸಿಕೆ ಕೊಡಿಸಿ ಹೊಟೇಲ್ ಗಳಲ್ಲಿ ಕ್ವಾರಂಟೈನ್ ಮಾಡಲಾಗಿದ್ದು ಇವರೊಂದಿಗೆ ವೈಲ್ಡ್ ಕಾಲ್ಡ್ ಎಂಠ್ರಿ ಮೂಲಕ ಮತ್ತಷ್ಟು ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ.

ಬಿಗ್ ಬಾಸ್ ಸೀಸನ್ ಸೆಕೆಂಡ್ ಇನ್ನಿಂಗ್ಸ್ ಬುಧವಾರದಿಂದ ಆರಂಭ ಎಂದಿರುವ ಕಲರ್ಸ್ ಕನ್ನಡ ವಾಹಿನಿ ಈ ಬಗ್ಗೆ ಪ್ರೋಮೋ ಕೂಡ ರಿಲೀಸ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಶೇರ್ ಮಾಡಿದೆ.

RELATED ARTICLES

Most Popular