India Corona Report : 91 ದಿನಗಳ ನಂತರ ಕನಿಷ್ಠ ಮಟ್ಟಕ್ಕೆ ಇಳಿದ ಕೊರೊನಾ ಸೋಂಕಿನ ಪ್ರಮಾಣ

ನವದೆಹಲಿ : ಭಾರತದಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿನ ಅಬ್ಬರ ಇಳಿಕೆಯಾಗುತ್ತಿದೆ. ದೇಶದಲ್ಲಿ ಹೊಸದಾಗಿ‌ 42,640 ಪ್ರಕರಣ ದಾಖಲಾಗಿದ್ದು, 1,167 ಮಂದಿ ಸಾವನ್ನಪ್ಪಿದ್ದಾರೆ.

ಕಳೆದ 91 ದಿನಗಳ ನಂತರ‌ ಕೊರೊನಾ ವೈರಸ್ ಸೋಂಕು ಕನಿಷ್ಟ ಮಟ್ಟಕ್ಕೆ ಇಳಿದಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 2,99,77,861 ದಾಖಲಾಗಿದ್ದು, ಸಾವಿನ ಸಂಖ್ಯೆ 3,89,302ಕ್ಕೆ ಏರಿಕೆ ಯಾಗಿದೆ. ದೇಶದಲ್ಲಿ ಸದ್ಯ 6,62,521 ಸಕ್ರೀಯ ಪ್ರಕರಣಗಳಿವೆ.

ದೇಶದಲ್ಲಿ ನಿನ್ನೆ ದಾಖಲೆಯ ಸಂಖ್ಯೆಯಲ್ಲಿ ಕೊರೊನಾ ಲಸಿಕೆಯನ್ನು ನೀಡಲಾಗಿತ್ತು. ಇದುವರೆಗೆ ಒಟ್ಟು 28,87,66,201 ಮಂದಿ ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

Comments are closed.