ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್ ಸೋಂಕು ನಾಲ್ವರಿಗೆ ತಗಲಿರುವುದು ದೃಢಪಟ್ಟಿದೆ. ನಿನ್ನೆ ಓರ್ವ ಟೆಕ್ಕಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ಆದ್ರೀಗ ಮತ್ತೆ ಮೂವರಿಗೆ ಸೋಂಕು ತಗಲಿರುವುದನ್ನು ಆರೋಗ್ಯ ಸಚಿವ ಶ್ರೀರಾಮಲು ದೃಢಪಡಿಸಿದ್ದಾರೆ.

ಅಮೇರಿಕಾದಿಂದ ವಾಪಾಸಾಗಿದ್ದ ಟೆಕ್ಕಿಗೆ ಕೊರೊನಾ ಇರೋದು ದೃಢಪಟ್ಟಿತ್ತು. ಅಲ್ಲದೇ ಇದೀಗ ಟೆಕ್ಕಿ ಪತ್ನಿ,ಪುತ್ರಿ ಹಾಗು ಟೆಕ್ಕಿಯ ಸಹೋದ್ಯೋಗಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಈಗಾಗಲೇ ಉಳಿದ ಮೂವರನ್ನ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಕುರಿತು ಟ್ವಿಟ್ ಮಾಡಿರೋ ಆರೋಗ್ಯ ಸಚಿವ ಶ್ರೀರಾಮುಲು, ಕೊರೊನಾ ವೈರಸ್‌ನಿಂದ ಕರ್ನಾಟಕದ ನಾಲ್ವರಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ. ಕೊರೊನಾ ಸೋಂಕಿತರ ಕುಟುಂಬಗಳ ಮೇಲೆ ನಿಗಾವಹಿಸಲಾಗಿದೆ. ನಾಗರೀಕರು ಮುಂಜಾಗ್ರತಾ ಕ್ರಮವಹಿಸಿ ಸೋಂಕು ಹರಡದಂತೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.