ಬೆಂಗಳೂರು: ಮನೆಯಲ್ಲಿ ಸೂಕ್ತವಾದ ವ್ಯವಸ್ಥೆಗಳು ಇಲ್ಲದಿದ್ದಲ್ಲಿ ಕೊರೋನಾ ಸೋಂಕಿನ ಸೌಮ್ಯ ಲಕ್ಷಣಗಳಿದ್ದವರೂ ಕೊವೀಡ್ ಕೇರ್ ಸೆಂಟರ್ ಗೆ ದಾಖಲಾಗುವುದು ಕಡ್ಡಾಯ ಎಂದು ಬಿಬಿಎಂಪಿ ಆದೇಶಿಸಿದೆ.

ಕೊರೋನಾ ಸೋಂಕಿತರ ನಿರ್ವಹಣೆ ಕುರಿತು ಪರಿಷ್ಕೃತ ಆದೇಶ ಹೊರಡಿಸಿರುವ ಬಿಬಿಎಂಪಿ, ಪ್ರತ್ಯೇಕ ಕೊಠಡಿ, ಪ್ರತ್ಯೇಕ ಶೌಚಾಲಯ,ಗಾಳಿ,ಬೆಳಕು ಸೂಕ್ತವಾಗಿಲ್ಲದ ಮನೆಗಳಲ್ಲಿ ಕೊರೋನಾ ಸೋಂಕಿನ ಸೌಮ್ಯ ಲಕ್ಷಣ ಹೊಂದಿದವರು ವಾಸ್ತವ್ಯ ಮಾಡುವಂತಿಲ್ಲ ಎಂದಿದೆ.

ಒಂದೊಮ್ಮೆ ಮನೆಯಲ್ಲಿ ಬೇರೆ ಕಾಯಿಲೆಯಿಂದ ಬಳಲುತ್ತಿರುವವರು ಇದ್ದಲ್ಲಿ ಅಂತ ಸಂದರ್ಭದಲ್ಲೂ ಸೋಂಕಿತರು ಕೊವೀಡ್ ಕೇರ್ ಸೆಂಟರ್ ಗೆ ದಾಖಲಾಗಿ ಚಿಕಿತ್ಸೆ ಪಡೆಯುವುದು ಕಡ್ಡಾಯ ಎಂದಿದೆ.

ಆರೋಗ್ಯ ಕಾರ್ಯಕರ್ತರು ಅಥವಾ ಸಂಬಂಧಿಸಿದ ಅಧಿಕಾರಿಗಳು ಈ ಎಲ್ಲ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಇವುಗಳಲ್ಲಿ ಯಾವುದೇ ಒಂದು ನಿರ್ದಿಷ್ಟ ವ್ಯವಸ್ಥೆ ಇಲ್ಲದಿದ್ದರೂ ಕೊವೀಡ್ ಕೇರ್ ಸೆಂಟರ್ ದಾಖಲಾಗುವುದು ಅನಿವಾರ್ಯ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮೇ ತಿಂಗಳೊಂದರಲ್ಲೇ ಅಂದಾಜು 778 ಮನೆ ಆರೈಕೆಯಲ್ಲಿದ್ದ ಕೊರೋನಾ ರೋಗಿಗಳು ಸಾವನ್ನಪ್ಪಿದ ಪ್ರಕರಣಗಳು ವರದಿಯಾಗಿದ್ದವು. ಹೀಗಾಗಿ ಬಿಬಿಎಂಪಿ ಮನೆಯಲ್ಲಿ ಚಿಕಿತ್ಸೆ ಪಡೆಯಲು ಸೂಚಿಸುವ ವಿಧಾನವನ್ನು ಪರಿಷ್ಕರಿಸಿದೆ.
