ಕೊರೋನಾ ಎರಡನೇ ಅಲೆ ವಿಶ್ವವನ್ನೇ ತಲ್ಲಣಿಸುವಂತೆ ಮಾಡಿದೆ. ಎಲ್ಲಾ ರಾಷ್ಟ್ರಗಳು ಲಸಿಕೆಯ ಹಿಂದೆ ಬಿದ್ದಿವೆಯಾದರೂ ನೀರಿಕ್ಷಿತ ಪ್ರಮಾಣದಲ್ಲಿ ಸೋಂಕು ನಿಯಂತ್ರಣ ಸಾಧ್ಯವಾಗಿಲ್ಲ. ಈ ಮಧ್ಯೆ ಕೊರೋನಾ ಲಸಿಕೆ ಪಡೆಯಲು ಆಸ್ಪತ್ರೆಗೆ ಹೋಗಬೇಕಾಗಿರೋದರಿಂದ ಲಸಿಕೆ ವಿತರಣೆ ನೀರಿಕ್ಷಿತ ಯಶಸ್ಸು ಪಡೆದಿಲ್ಲ. ಈ ಮಧ್ಯೆ ಅಮೇರಿಕಾದ ಫೈಜರ್ ಸಂಸ್ಥೆ ಕೊರೋನಾ ನಿಯಂತ್ರಕ ಟ್ಯಾಬ್ಲೆಟ್ ಕಂಡುಹಿಡಿಯುತ್ತಿರುವುದಾಗಿ ಘೋಷಿಸಿದ್ದು ಸೋಂಕಿತರ ಪಾಲಿಗೆ ಆಶಾದಾಯಕ ಸುದ್ದಿ ನೀಡಿದೆ.

ಮಾರಣಾಂತಿಕವಾಗಿ ಮಾನವ ಕುಲವನ್ನೇ ವಿನಾಶದ ಅಂಚಿಗೆ ಕೊಂಡ್ಯುತ್ತಿರುವ ಕೊರೋನಾ ಔಷಧಿ ಸಿದ್ಧಪಡಿಸುತ್ತಿರುವುದಾಗಿ ಅಮೇರಿಕಾ ಮೂಲದ ಫೈಜರ್ ಕಂಪನಿ ಹೇಳಿಕೊಂಡಿದೆ. ಫೈಜರ್ ಈಗಾಗಲೇ ಕೊರೋನಾಗೆ ಲಸಿಕೆ ಕಂಡುಹಿಡಿದಿದೆ. ಆದರೆ ಕೊರೋನಾ ಲಸಿಕೆ ಪಡೆಯಬೇಕೆಂದರೇ ಜನರು ಆಸ್ಪತ್ರೆಗೆ ಬರಬೇಕು. ಆದರೆ ಮಾತ್ರೆಗಳ ರೂಪದಲ್ಲಿ ಔಷಧಿ ಸಿದ್ಧಗೊಂಡರೇ ಇನ್ನಷ್ಟು ಪರಿಣಾಮಕಾರಿಯಾಗಿ ಜನರನ್ನು ತಲುಪಬಹುದು.

ಇದೇ ಕಾರಣಕ್ಕೆ ಫೈಜರ್ ಸಂಸ್ಥೆ ಮಾತ್ರೆಗಳ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಿದ್ದು, ಟ್ಯಾಬ್ಲೆಟ್ ಉತ್ಪಾದನೆಯಲ್ಲಿ ತೊಡಗಿದೆ ಎಂದು ಫೈಜರ್ ಸಂಸ್ಥೆಯ ಸಿಇಓ ಆಲ್ಬರ್ಟ್ ಬೌರ್ಲಾ ಹೇಳಿದ್ದಾರೆ. ಮಾತ್ರೆ ಸಿದ್ಧವಾದರೇ ಸೋಂಕಿತರಿಗೆ ಮನೆಯಲ್ಲೇ ಕೂಡ ಚಿಕಿತ್ಸೆ ನೀಡಬಹುದು. ಇದರಿಂದ ಆಸ್ಪತ್ರೆಗಳಲ್ಲಿ ಹೆಚ್ಚಿನ ಆರೋಗ್ಯ ಸೌಲಭ್ಯ ಅಗತ್ಯ ಇರುವವರಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ. ಹೀಗಾಗಿ ಮಾತ್ರೆಗಳ ಉತ್ಪಾದನೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಫೈಜರ್ ಕಂಪನಿ.

ಫೈಜರ್ ಕಂಪನಿ ಈಗಾಗಲೇ ಕೊರೋನಾ ತಡೆಯುವ ನಿಟ್ಟಿನಲ್ಲಿ ಮಾತ್ರೆಗಳನ್ನು ಉತ್ಪಾದಿಸಿದ್ದು, ಅಮೇರಿಕಾ ಹಾಗೂ ಬೆಲ್ಜಿಯಂನಲ್ಲಿ ಸ್ವಯಂ ಸೇವಕರ ಮೇಲೆ ಈ ಮಾತ್ರೆಗಳ ಪ್ರಯೋಗ ನಡೆದಿದೆ. 18 ರಿಂದ 60 ವಯಸ್ಸಿನ ಒಟ್ಟು 60 ಜನರನ್ನು ಪ್ರಯೋಗಕ್ಕೆ ಒಳಪಡಿಸಲಾಗಿದ್ದು, ಪ್ರಯೋಗ ಯಶಸ್ವಿಯಾದಲ್ಲಿ ಕೊರೋನಾಗೆ ಔಷಧಿ ಕಂಡುಹಿಡಿದ ಖ್ಯಾತಿಗೆ ಫೈಜರ್ ಭಾಜನವಾಗೋದು ಮಾತ್ರವಲ್ಲದೇ, ಜನರ ಸಂಕಷ್ಟವನ್ನು ಕಡಿಮೆ ಮಾಡಲಿದೆ.

ಫೈಜರ್ ಸಂಸ್ಥೆ ಕೊರೋನಾ ತಡೆಗೆ ಟ್ಯಾಬ್ಲೆಟ್ ಉತ್ಪಾದನೆಯ ಹಂತದಲ್ಲಿದೆ ಎಂಬ ಮಾಹಿತಿ ವಿಶ್ವದ ಪಾಲಿಗೆ ಆಶಾದಾಯಕ ಸಂಗತಿಯಾಗಿದ್ದು, ಜನರು ಕಾತುರರಾಗಿ ಫೈಜರ್ ಸಂಸ್ಥೆಯ ಪ್ರಯೋಗದ ಫಲಿತಾಂಶ ಕಾದು ನೋಡುತ್ತಿದ್ದಾರೆ. ಈ ಪ್ರಯೋಗ ಯಶಸ್ವಿಯಾಗಿ ಮನುಕುಲಕ್ಕೆ ಕೊರೋನಾದಿಂದ ಬಿಡುಗಡೆ ಸಿಗಲಿ ಎಂದು ನಾವು ಆಶಿಸೋಣ.
