ವಿಶ್ವಕ್ಕೆಲ್ಲ ಕೊರೋನಾ ಕಾಟ….! ಚೀನಾದಲ್ಲಿ ಕಾಂಡೋಮ್ ದಾಖಲೆಯ ಮಾರಾಟ….!!

ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಕರೋನಾ ಕಾಟದಿಂದ ಕಂಗೆಟ್ಟಿದ್ದು, ಎರಡನೇ ಅಲೆಗೂ ಲಾಕ್ ಡೌನ್ ಮೂಲಕ ಜೀವ ರಕ್ಷಣೆಗೆ ಮುಂದಾಗಿದೆ. ಆದರೆ ಕೊರೋನಾದ ಉಗಮ ಸ್ಥಾನ ಎಂದೇ ಬಿಂಬಿತವಾದ ಚೀನಾ ಮಾತ್ರ ಕೊರೋನಾ ಸಂಕಷ್ಟವನ್ನೇ ಮರೆತಿದ್ದು, ರೋಗಮುಕ್ತವಾದ ಚೀನಾದಲ್ಲಿ ಕಾಂಡೋಮ್  ಮಾರಾಟವೇ ದಾಖಲೆ ಬರೆದು ವಿಶ್ವದ ಗಮನ ಸೆಳೆದಿದೆ.

ಚೀನಾದ ವುಹಾನ್ ನಲ್ಲಿ ಉಗಮಗೊಂಡಿತು ಎನ್ನಲಾದ ಕೊರೋನಾ ವೈರಸ್ ವಿಶ್ವವನ್ನೇ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದು, ಜನರು ಜೀವಭಯದಲ್ಲಿ ಬದುಕುವಂತಾಗಿದೆ. ಮೊದಲನೆ ಅಲೆಯ ನಷ್ಟವೇ ಸರಿತೂಗಿಸಿಕೊಳ್ಳಲಾರದೇ ಮನುಕುಲ ಕಂಗೆಟ್ಟಿರುವಾಗಲೇ ಎರಡನೇ ಅಲೆಯ ಮರಣ ಮೃದಂಗ ಆರಂಭವಾಗಿದೆ. ಆದರೆ ಚೀನಾದಲ್ಲಿ ಮಾತ್ರ ಈಗ ಜನಜೀವನ ಸಹಜಗೊಂಡಿದ್ದು, ಕಾಂಡೋಮ್ಮಾರಾಟದಲ್ಲಿ ದಾಖಲೆ ಬರೆಯುತ್ತಿದೆ ಆ ದೇಶ.

ಕರೋನಾ ನಿಯಂತ್ರಣಕ್ಕೆ ಅಳವಡಿಸಲಾಗಿದ್ದ ಕಠಿಣ ನಿಯಮಗಳನ್ನು ಕರೋನಾದಲ್ಲಿ ಕೈಬಿಡಲಾಗಿದೆ. ಅಷ್ಟೇ ಅಲ್ಲ ಲಾಕ್ ಡೌನ್ ಕೂಡ ಸಡಿಲಿಕೆಯಾಗಿದ್ದು, ಸೆಕ್ಸ್ ಉದ್ಯಮದ ಮೇಲೆ ಹೇರಲಾಗಿದ್ದ ನಿರ್ಬಂಧವೂ ತೆರವಾಗಿದೆ. ಹೀಗಾಗಿ ಜನರು ಮುಗಿಬಿದ್ದು ಕಾಂಡೋಮ್ಖ ರೀದಿಸುತ್ತಿದ್ದು, ದಾಖಲೆಯ ಸಂಖ್ಯೆಯಲ್ಲಿ ಜನನ ನಿಯಂತ್ರಕ ಬಿಕರಿಯಾಗುತ್ತಿದೆ.

ಚೀನಾದಲ್ಲಿ ಕಾಂಡೋಮ್ ಮಾರಾಟ ದಾಖಲೆಯ ಹಂತದಲ್ಲಿರೋದನ್ನು ಕಾಂಡೋಮ್ ಉತ್ಪಾದನೆಯ ಪ್ರಮುಖ ಕಂಪನಿ ಡುರೆಕ್ಸ್ ಖಚಿತಪಡಿಸಿದೆ. ಕೇವಲ ಡುರೆಕ್ಸ್ ಮಾತ್ರವಲ್ಲ ಕಾಂಡೋಮ್ ಮಾರಾಟದ  ದೈತ್ಯ ಕಂಪನಿ ರೆಕ್ಕಿಟ್ ಬೆನ್ ಕಿಸರ್ ಕೂಡ  ಸಂಗತಿಯನ್ನು ಖಚಿತಪಡಿಸಿದೆ. ಅಷ್ಟೇ ಅಲ್ಲ  ಚೀನಾ ಮಾತ್ರವಲ್ಲ ಇತರ ರಾಷ್ಟ್ರಗಳಲ್ಲೂ ಕರೋನಾ ನಿಯಮ ಸಡಿಲಗೊಂಡರೇ ಕಾಂಡೋಮ್ ಮಾರಾಟದ ಪ್ರಮಾಣ ಹೆಚ್ಚುವ ವಿಶ್ವಾಸವಿದೆ  ಎಂದಿದೆ.

ಕಳೆದ ವರ್ಷ ಕರೋನಾ ಕಾರಣದಿಂದಾಗಿ ಕಠಿಣವಾದ ನಿಯಮಗಳು ಜಾರಿಯಾಗಿದ್ದವು. ಹೀಗಾಗಿ ಸಾಮಾಜಿಕ ಅಂತರ ಸೇರಿದಂತೆ ಹಲವು ಕಾರಣಕ್ಕೆ ಕಾಂಡೋಮ್  ಕಂಪನಿಗಳು ನಷ್ಟದ ಹಾದಿಯಲ್ಲಿದ್ದವು. ಆದರೆ ಈ ಭಾರಿ ಚೀನಾವೇ ಖರೀದಿಯಲ್ಲಿ ದಾಖಲೆ ಬರೆದಿದ್ದು, ಕೊರೋನಾ ಸಂಕಷ್ಟ ಕುಗ್ಗಿದರೇ ಕಂಪನಿಗಳು ಚೇತರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿವೆ.

ಕೇವಲ ಕಾಂಡೋಮ್ ಮಾತ್ರವಲ್ಲದೇ ಲೈಂಗಿಕ ಸ್ವಾಸ್ಥ್ಯದ ಉತ್ಪನ್ನಗಳ ಮಾರಾಟದಲ್ಲೂ ಚೀನಾ, ಯುಎಸ್ಎ ಹಾಗೂ  ಯುರೋಪಿನ ರಾಷ್ಟ್ರಗಳಲ್ಲಿ ಏರಿಕೆ ಕಂಡಿದೆಯಂತೆ. ಏನೇ ಇರಲಿ, ಸೋಂಕು ಉತ್ಪಾದಿಸಿ ಇತರ ರಾಷ್ಟ್ರಗಳ ನೆಮ್ಮದಿ ಕಸಿದ  ಚೀನಾದ ಮಾತ್ರ ಸಹಜ ಸ್ಥಿತಿಗೆ ಮರಳಿದ್ದು ವಿಶ್ವದ ಬೇರೆ ರಾಷ್ಟ್ರಗಳ ಪರದಾಡುತ್ತಲೇ ಇದೆ.

Comments are closed.