ನವದೆಹಲಿ : ಮಾರಕ ಕೊರೊನಾ ವೈರಸ್ ಸೋಂಕು ದೇಶದಲ್ಲಿ ತಲ್ಲಣ ಮೂಡಿಸುತ್ತಿದೆ. ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಬಲಿ ಪಡೆದುಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 69 ವೃದ್ಧೆ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.

ಕರ್ನಾಟಕ ಕಲಬುರಗಿಯಲ್ಲಿ 75ರ ವೃದ್ದನೋರ್ವ ಸಾವನ್ನಪ್ಪಿದ ಬೆನ್ನಲ್ಲೇ ದೇಹಲಿಯಲ್ಲಿ 65 ವರ್ಷದ ವೃದ್ದ ಮಹಿಳೆ ಇದೀಗ ಕೊರೊನಾ ಬಲಿಪಡೆದಿದೆ.ಮೃತಪಟ್ಟ ಮಹಿಳೆ ಪಶ್ಚಿಮ ದೆಹಲಿಯವರಾಗಿದ್ದು, ಕೊರೋನಾ ಸೋಂಕಿತ ಮಗನ ತಾಯಿ ಎಂದು ಗುರುತಿಸಲಾಗಿದೆ.

ವೃದ್ಧೆಯ ಮಗ ಕಳೆದ ಫೆಬ್ರವರಿ 5ರಂದು ಸ್ವಿಟ್ಜರ್ಲೆಂಡ್ ಮತ್ತು ಇಟಲಿಗೆ ತೆರಳಿದ್ದರು. ಮಾರ್ಚ್ 23ರಂದು ಭಾರತಕ್ಕೆ ವಾಪಸ್ಸಾಗಿದ್ದರು. ಬಳಿಕ ಜ್ವರ ಮತ್ತು ಕೆಮ್ಮಿನಿಂದ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ರಕ್ತವನ್ನು ಪರೀಕ್ಷೆ ಮಾಡಿದಾಗ ಅವರಿಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಇವರೊಂದಿಗೆ ಇವರ ತಾಯಿಗೂ ಮಾರಕ ಸೋಂಕು ಹರಡಿರುವುದು ಪರೀಕ್ಷೆಯಿಂದ ಸಾಬೀತಾಗಿದ್ದು, ಆನಂತರ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು. ಇದೀಗ ತಾಯಿ ಅಸುನೀಗಿದ್ದಾರೆ.

ದೆಹಲಿಯಲ್ಲಿ ಕೊರೋನಾ ವೈರಸ್ ತುತ್ತಾದ ಆರು ಮಂದಿಯಲ್ಲಿ ಮೃತ ವೃದ್ಧ ಮಹಿಳೆ ಒಬ್ಬರಾಗಿದ್ದರು. ಅಧಿಕ ರಕ್ತದೊತ್ತಡ ಮತ್ತು ಡಯಾಬಿಟಿಸ್ ಕಾಯಿಲೆಯನ್ನು ಹೊಂದಿದ್ದ ಮಹಿಳೆಗೆ ದೆಹಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ.