ವಡ್ಡರ್ಸೆಯಲ್ಲಿ ಮಹಾಲಿಂಗೇಶ್ವರನ ಜಾತ್ರಾ ಸಂಭ್ರಮ : ಸಾಂಸ್ಕೃತಿಕ ವೈಭವ

0

ಕೋಟ : ವಡ್ಡರ್ಸೆಯ ಮಹತೋಬಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. ಮಾರ್ಚ್ 13 ರಂದು ಆರಂಭಗೊಂಡಿರುವ ಜಾತ್ರೆ ಮಹೋತ್ಸವವು ಮಾರ್ಚ್ 18ರ ವರೆಗೆ ನಡೆಯಲಿದೆ. ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ರಥಬೀದಿ ಫ್ರೆಂಡ್ಸ್ ವತಿಯಿಂದ 6ನೇ ವರ್ಷದ ಸಾಂಸ್ಕೃತಿಕ ವೈಭವವನ್ನು ಆಯೋಜಿಸಲಾಗಿದೆ. ಮಾರ್ಚ್ 16 ರಂದು ಮಿತ್ರವೃಂದ ವಡ್ಡರ್ಸೆ ಸಾದರ ಪಡಿಸುವ ಪಿ.ಕಾಳಿಂಗ ರಾವ್ ಶೃತಿ ಮೆಲೊಡಿಯಸ್ ಬಾರ್ಕೂರು ಅವರಿಂದ ಭಕ್ತಿ ಲಹರಿ ಕಾರ್ಯಕ್ರಮ.ರಾತ್ರಿ 9.30ಕ್ಕೆ ಸಾಲಿಗ್ರಾಮ ಮೇಳದವರಿಂದ ಚಂದ್ರಮುಖಿ ಸೂರ್ಯಸಖಿ ಯಕ್ಷಗಾನ, ಮಾರ್ಚ್ 17ರಂದು ಬೆಳಗ್ಗೆ 8.30ಕ್ಕೆ ಮನೋರಂಜನಾ ಕ್ರೀಡೋತ್ಸವ ಆಯೋಜಿಸಲಾಗಿದೆ. ಮಾರ್ಚ್ 18 ರಂದು ಸಂಜೆ 7 ಗಂಟೆಗೆ ಅಮೃತೇಶ್ವರಿ ಮೇಳದವರಿಂದ ಅಮೃತೇಶ್ವರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. 19 ರಂದು ಸಂಜೆ 7 ಗಂಟೆಗೆ ವಡ್ಡರ್ಸೆ ಅಂಗನವಾಡಿ ಪುಟಾಣಿಗಳಿಂದ ಮತ್ತು ವಡ್ಡರ್ಸೆ ಪ್ರಾಥಮಿಕ ಶಾಲಾ ಮಕ್ಕಳಿಂದ ಹಾಗೂ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 9.30ಕ್ಕೆ ಸ್ಥಳೀಯ ಹಾಗೂ ಅತಿಥಿ ಕಲಾವಿದರಿಂದ ಕೊಂದವರು ಯಾರು ? ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

Leave A Reply

Your email address will not be published.