ಬೆಂಗಳೂರು : ಕೊರೊನಾ ಮಹಾಮಾರಿ ಸೃಷ್ಟಿಸುತ್ತಿರೋ ಅವಾಂತರ ಅಷ್ಟು ಇಷ್ಟಲ್ಲ. ಸರಕಾರಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ರಾಜ್ಯದಲ್ಲಿ ಒಂದು ವಾರಗಳ ಕಾಲ ಆರೋಗ್ಯ ತುರ್ತು ಪರಿಸ್ಥಿತಿ ಜಾರಿ ಮಾಡಿದ್ರೆ, ಐಟಿ ದಿಗ್ಗಜ ಇನ್ಪೋಸಿಸ್ ಸಂಸ್ಥೆ ತನ್ನ ಉದ್ಯೋಗಿಯೊಬ್ಬರಿಗೆ ಕೊರೋನಾ ವೈರಾಣು ಸೋಂಕು ತಗುಲಿರುವ ಶಂಕೆಯ ಹಿನ್ನೆಲೆಯಲ್ಲಿ ತನ್ನ ಕಚೇರಿಯನ್ನೇ ಸ್ಥಳಾಂತರ ಮಾಡಿದೆ.

ಇನ್ಪೋಸಿಸ್ ಸಂಸ್ಥೆಯ ಉದ್ಯೋಗಿಯೊಬ್ಬರಿಗೆ ಕೋವಿದ್ -19 (ಕೊರೊನಾ) ಸೋಂಕು ತಗಲಿರೋ ಶಂಕೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಐಐಪಿಎಂ ಕಟ್ಟಡದಲ್ಲಿನ ಕಚೇರಿಯನ್ನು ಸ್ಥಳಾಂತರ ಮಾಡಿದೆ. 1990ರಿಂದ ಇನ್ಫೋಸಿಸ್ ಬೆಂಗಳೂರಿನಲ್ಲಿ ವಿಸ್ತಾರವಾದ ಕ್ಯಾಂಪಸ್ ನ್ನು ಹೊಂದಿದ್ದು 12ಕ್ಕೂ ಹೆಚ್ಚು ಕಟ್ಟಡಗಳನ್ನು ಹೊಂದಿದೆ. ಇದರಲ್ಲಿ ಇನ್ಫೋಸಿಸ್ ನ ಅಭಿವೃದ್ಧಿ ಕೇಂದ್ರ ಮತ್ತು ಕಾರ್ಪೋರೇಟ್ ಕಚೇರಿಗಳಿವೆ. ಆದರೆ ಇದೀಗ ನಮ್ಮ ಉದ್ಯೋಗಿಗಳ ರಕ್ಷಣೆಗೆ ನಾವು ತೆಗೆದುಕೊಳ್ಳುತ್ತಿರುವ ಕ್ರಮವಾಗಿದ್ದು ನಮ್ಮ ಸುರಕ್ಷತೆಗೆ ನಾವು ಕೆಲಸ ಮಾಡುವ ಸ್ಥಳಗಳನ್ನು ಸೂಕ್ಷ್ಮವಾಗಿ ನೋಡಿಕೊಳ್ಳುತ್ತಿದ್ದೇವೆ ಇನ್ಫೋಸಿಸ್ ನ ಬೆಂಗಳೂರು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಗುರುರಾಜ್ ದೇಶಪಾಂಡೆ ಇ-ಮೇಲ್ ಮೂಲಕ ತಿಳಿಸಿದ್ದಾರೆ.

ರಾಜ್ಯ ಸರಕಾರ ಐಟಿವಲಯದಲ್ಲಿಯೇ ಹೆಚ್ಚಾಗಿ ಕೊರೊನಾ ಸೋಂಕು ಹರಡುತ್ತಿರೋ ಬೆನ್ನಲ್ಲೇ ಸಿಬ್ಬಂಧಿಗಳು ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚನೆಯನ್ನು ನೀಡಿತ್ತು. ಅಲ್ಲದೇ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದೆ. ಅಲ್ಲದೇ ಮಾಲ್, ಚಿತ್ರ ಮಂದಿರಗಳನ್ನೂ ಬಂದ್ ಮಾಡಿ ಆದೇಶಿಸಿದೆ. ಸರಕಾರ ಕ್ರಮದ ಬೆನ್ನಲ್ಲೇ ಇನ್ಪೋಸಿಸ್ ಸಂಸ್ಥೆ ದಿಟ್ಟ ಕ್ರಮವನ್ನು ಕೈಗೊಂಡಿದೆ.