ರಾಷ್ಟ್ರಧ್ವಜ ಇಳಿಸಿ, ಕೆಂಪುಧ್ವಜ ಹಾರಿಸಿದ ಇರಾನ್ : ಯುದ್ದದ ಮುನ್ಸೂಚನೆಯೋ, ಕೊರೊನಾ ಭೀತಿಯೋ ?

0

ಇರಾನ್ : ಕೊರೊನಾ ವೈರಸ್ ಭೀತಿಗೆ ವಿಶ್ವವೇ ತತ್ತರಿಸಿ ಹೋಗಿದೆ. ಇರಾನ್ ದೇಶ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಆದ್ರೀಗ ಇರಾನ್ ದೇಶದ ತನ್ನ ರಾಷ್ಟ್ರಧ್ವಜವನ್ನ ಕೆಳಗಿಸಿ ಕೆಂಪುಧ್ವಜ ಹಾರಿಸಿರೋದು ಆತಂಕ ಮೂಡಿಸಿದೆ.

ಇರಾನ್ ಯುದ್ದದ ಸಂದರ್ಭದಲ್ಲಿ ಮಾತ್ರವೇ ಕಂಪು ಧ್ವಜವನ್ನು ಹಾರಿಸುತ್ತೆ. ಹೀಗಾಗಿ ಒಂದೆಡೆ ಕೊರೊನಾ ಸೋಂಕು ಹರಡುತ್ತಿರೋ ಬೆನ್ನಲ್ಲೇ ಇರಾನ್ ರಾಷ್ಟ್ರಧ್ವಜ ಇಳಿಸಿ ಕೆಂಪುಧ್ವಜ ಹಾರಿಸಿದೆ. ಹೀಗಾಗಿ ಇರಾನ್ ಯುದ್ದ ಘೋಷಣೆ ಮಾಡುತ್ತಾ ಅನ್ನೋ ಅನುಮಾನ ವ್ಯಕ್ತವಾಗುತ್ತದೆ.

ಇರಾನ್‌ ತಮ್ಮ ದೇಶದ ಅಧಿಕೃತ ಧ್ವಜವನ್ನು ಕೆಳಗಿಳಿಸಿ ಕೆಂಪು ಧ್ವಜವನ್ನು ದೇಶದಲ್ಲಿ ಹಾರಿಸುವುದು ಇದೇ ಮೊದಲು ಎಂದು ವರದಿಗಳು ಹೇಳುತ್ತಿವೆ. ಈ ಧ್ವಜವು ಶಿಯಾ ಇಸ್ಲಾಮಿಕ್ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದ ಧಾರ್ಮಿಕ ಸಂಕೇತಗಳ ಪ್ರಕಾರ ಈ ಧ್ವಜವನ್ನು ಎತ್ತುವ ಮೂಲಕ ಇಮಾಮ್ ಮಹ್ದಿಯ ಬರುವಿಕೆ ಮತ್ತು ಇಮಾಮ್ ಮಹ್ದಿಯ ಕೊನೆಯ ಯುದ್ಧದ ಭೀತಿ ಹರಡುತ್ತಿದೆ.

ಈ ಕೆಂಪು ಧ್ವಜವು ಶೋಕ ಅಥವಾ ನೆನಪಿನ ಬಗ್ಗೆ ಅಲ್ಲ.ಈ ಧ್ವಜವನ್ನು ಎತ್ತುವುದು ಇರಾನ್ ತನ್ನ ಜನರನ್ನು ಹಿಂದೆಂದೂ ನೋಡಿರದ ಸಂಘರ್ಷಕ್ಕೆ ಒಗ್ಗೂಡಿಸುತ್ತಿದೆ ಎಂದು ಸೂಚಿಸುತ್ತದೆ. ಇರಾನ್ – ಇರಾಕ್ ಯುದ್ಧದ ಸಮಯದಲ್ಲಿಯೂ ಧ್ವಜವನ್ನು ಎತ್ತಲಾಗಿಲ್ಲ ಎಂಬುದು ಕುತೂಹಲಕಾರಿಯಾಗಿದೆ.

Leave A Reply

Your email address will not be published.