ಹಾಸನ : ಕೊರೊನಾ ವೈರಸ್ ಮಹಾಮಾರಿ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಕೊರೊನಾ ವೈರಸ್ ಸೋಂಕಿಗೆ ಔಷಧ ಕಂಡು ಹಿಡಿಯಲು ಹರಸಾಹಸ ಪಡುತ್ತಿವೆ. ವೈದ್ಯರು, ಸಂಶೋಧಕರ ಪಾಲಿಗೆ ಕೊರೊನಾ ಸವಾಲನ್ನ ತಂದೊಡ್ಡುತ್ತಿದೆ. ಇಂತಹ ಸವಾಲಿನ ಸಾಹಸಕ್ಕೆ ಕನ್ನಡಗರೋರ್ವರು ಮುಂದಾಗಿದ್ದಾರೆ.

ಕೊರೊನಾ ವೈರಸ್ ಸೊಂಕಿಗೆ ಮದ್ದು ಕಂಡು ಹಿಡಿಯೋ ನಿಟ್ಟಿನಲ್ಲಿ ರಚನೆಯಾಗಿರೋ ಯುರೋಪಿಯನ್ ಟಾಸ್ಕ್ ಪೋರ್ಸ್ ನಲ್ಲಿ ಕನ್ನಡಿಗ ಮಹದೇವ್ ಪ್ರಸಾದ್ ಸ್ಥಾನ ಪಡೆದಿದ್ದಾರೆ. ಮಹದೇಶ್ ಪ್ರಸಾದ್ ಹಾಸನ ಜಿಲ್ಲೆಯ ಅರಕಲಗೋಡಿನವರು. ಸ್ಪೇಮ್ ಸೆಲ್ ಬಯಾಲಜಿ ಮತ್ತು ಟ್ಯೂಮರ್ ವೈರಾಲಜಿ ತಜ್ಞರಾಗಿರೋ ಮಹದೇಶ್ ಪ್ರಸಾದ್ ಸಂಶೋಧನೆಗಾಗಿ ಕಳೆದೊಂದು ವರ್ಷದಿಂದಲೂ ಬೆಲ್ಜಿಯಂನಲ್ಲಿ ನೆಲೆಸಿದ್ದಾರೆ.

ಕೊರೊನಾ ವೈರಸ್ ಸೋಂಕಿಗೆ ಸಂಶೋಧನೆ ನಡೆಸೋ ಸಲುವಾಗಿ ಯೂರೋಪಿಯನ್ ಟಾಸ್ಕ್ ಪೋರ್ಸ್ 10 ತಂಡಗಳನ್ನು ರಚಿಸಿದ್ದು, ಈ ಪೈಕಿ ಒಂದು ತಂಡದಲ್ಲಿ ಮಹದೇವ ಪ್ರಸಾದ್ ಸ್ಥಾನ ಪಡೆದಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಮಹದೇಶ್ ಪ್ರಸಾದ್ ಭಾರತಕ್ಕೆ ಮರಳಿದ್ದಾರೆ. ಕೊರೊನಾಗೆ ವ್ಯಾಕ್ಸಿನ್ ಕಂಡು ಹಿಡಿಯುವ ತಂಡದಲ್ಲಿ ಸ್ಥಾನ ಪಡೆದಿರೋ ಕನ್ನಡಿಗ ವಿಜ್ಞಾನ ಮತ್ತು ಸಂಶೋಧನಾ ಮಂಡಳಿಯಿಂದ 43 ಲಕ್ಷ ಸ್ಕಾಲರ್ ಶಿಪ್ ಪಡೆದಿದ್ದಾರೆ.