ವಾಷಿಂಗ್ಟನ್ : ಡೆಡ್ಲಿ ಕೊರೊನಾ ದೊಡ್ಡಣ್ಣ ಅಮೇರಿಕಾವನ್ನು ಬೆನ್ನುಬಿಡದೆ ಕಾಡುತ್ತಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 450 ಜನರು ಕೊರೊನಾಕ್ಕೆ ಸಾವನ್ನಪ್ಪಿದ್ರೆ, ಇದೀಗ ಮಹಾಮಾರಿ ಪುಟ್ಟ ಮಗುವನ್ನು ಬಲಿ ಪಡೆದಿದೆ.

ಚೀನಾದಲ್ಲಿ ಕಾಣಸಿಕೊಂಡಿದ್ದ ಕೊರೊನಾ ಅನ್ನೋ ಮಹಾಮಾರಿ ಇದೀಗ ವಿಶ್ವದ 190 ರಾಷ್ಟ್ರಗಳನ್ನು ಕಾಡಿದೆ. ಜನರು ಭಯದಲ್ಲಿಯೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಅಮೇರಿಕಾ ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗಿದೆ. ಅಮೇರಿಕಾದಲ್ಲಿ ಬರೋಬ್ಬರಿ 1.24 ಲಕ್ಷ ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಅಮೇರಿಕಾದಲ್ಲಿ ಸಾವನ್ನಪ್ಪುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಲೇ ಇದೆ. ಈಗಾಗಲೇ 2,227 ಮಂದಿ ಕೊರೊನಾ ಸೋಂಕಿನಿಂದ ಮೃಪಟ್ಟಿದ್ದಾರೆ. ಅದ್ರಲ್ಲೂ 1 ವರ್ಷದೊಳಗಿನ ಮಗು ಸಾವನ್ನಪ್ಪಿದ್ದು, ಮಗುವಿನ ಸಾವಿಗೆ ಕೊರೊನಾ ಕಾರಣ ಅನ್ನೋದಾಗಿ ಇಲಿನಾಯ್ಸ್ ರಾಜ್ಯದ ಗವರ್ನರ್ ಜೆಬಿ ಪ್ರಿಟ್‍ಜ್ಕೆರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.