ಮಂಗಳವಾರ, ಏಪ್ರಿಲ್ 29, 2025
HomeBreakingಕಾಲೇಜು ಆರಂಭ ಫಿಕ್ಸ್: ಯುಜಿಸಿಯಿಂದ ಮಾರ್ಗಸೂಚಿ ಪ್ರಕಟ

ಕಾಲೇಜು ಆರಂಭ ಫಿಕ್ಸ್: ಯುಜಿಸಿಯಿಂದ ಮಾರ್ಗಸೂಚಿ ಪ್ರಕಟ

- Advertisement -

ನವದೆಹಲಿ : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ದೇಶದಾದದ್ಯಂತ ಕಾಲೇಜುಗಳನ್ನು ತೆರೆಯಲು ಕೇಂದ್ರ ಸರಕಾರ ಅನುಮತಿ ಯನ್ನು ನೀಡಿದೆ. ಕಾಲೇಜು ತೆರೆಯುವ ಮುನ್ನ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕೆನ್ನುವ ಕುರಿತು ಮಾರ್ಗಸೂಚಿ ಯೊಂದನ್ನು ಪ್ರಕಟಿಸಿದೆ.

ಕೊರೋನಾ ನಿಯಂತ್ರಣ ಕ್ರಮಗಳಾದಂತ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಫೇಸ್ ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈರ್ಸ್ ಬಳಕೆಯನ್ನು ಕಡ್ಡಾಯಗೊಳಿಸಿದೆ. ಇದರ ಜೊತೆಗೆ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರರು ಸೇರಿದಂತೆ ವಿವಿಧ ವರ್ಗದವರ ಆರೋಗ್ಯದ ಹಿತದೃಷ್ಠಿಯಿಂದ ಕೊರೋನಾ ಮುಂಜಾಗೃತಾ ಈ ಕೆಳಗಿನ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದೆ.

ಕ್ಯಾಂಪಸ್ ಅನ್ನು ತೆರೆಯುವ ಮೊದಲು, ಕೇಂದ್ರ ಅಥವಾ ಸಂಬಂಧಪಟ್ಟ ರಾಜ್ಯ ಸರ್ಕಾರ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಪುನಃ ತೆರೆಯಲು ಪ್ರದೇಶವನ್ನು ಸುರಕ್ಷಿತವೆಂದು ಘೋಷಿಸಬೇಕು. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಹೊರಡಿಸುವ ನಿರ್ದೇಶನಗಳು, ಸೂಚನೆಗಳು, ಮಾರ್ಗಸೂಚಿಗಳು ಮತ್ತು ಆದೇಶಗಳು ಕೊರೊನಾ ಹಿನ್ನೆಲೆಯಲ್ಲಿ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸರ್ಕಾರ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣವಾಗಿ ಪಾಲಿಸಬೇಕು.

ವಿದ್ಯಾರ್ಥಿಗಳು, ಬೋಧಕರು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳುವುದು.ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ನಿಯಂತ್ರಣ ವಲಯದಿಂದ ಹೊರಗಿದ್ದರೆ ಮಾತ್ರ ತೆರೆಯಲು ಅವಕಾಶ ನೀಡಬೇಕು. ಅಲ್ಲದೆ, ನಿಯಂತ್ರಣ ವಲಯದಲ್ಲಿ ವಾಸಿಸುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮತ್ತು ಕಾಲೇಜುಗಳಿಗೆ ಹಾಜರಾಗಲು ಅವಕಾಶ ನೀಡಬೇಕು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಈ ಬಗ್ಗೆ ಸೂಚನೆ ನೀಡಲಾಗುವುದು.ಕಾಲೇಜಿನ ಬೋಧಕ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ‘ಆರೋಗ್ಯ ಸೇತು ಆಯಪ್’ ಡೌನ್ ಲೋಡ್ ಮಾಡಿಕೊಂಡು ಬಳಸಲು ಪ್ರೋತ್ಸಾಹಿಸಬೇಕು.

ಕ್ಯಾಂಪಸ್ ನಲ್ಲಿ ಬೋಧಕರು ಮತ್ತು ಸಿಬ್ಬಂಧಿಗಳು ಸೋಂಕು ನಿವಾರಕ ಕ್ರಮಗಳನ್ನು ಅನುಸರಿಸಬೇಕು. ವಿದ್ಯಾರ್ಥಿಗಳ ಆರೋಗ್ಯವನ್ನು ಪರೀಕ್ಷಿಸಬೇಕು. ಸೋಂಕು ಪತ್ತೆ ಹಚ್ಚುವ ಕ್ರಮವಹಿಸಿ, ಕೊರೋನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಕ್ಯಾಂಪಸ್ ನಲ್ಲಿ ಅಥವಾ ಕ್ಯಾಂಪಸ್ ಸುತ್ತಾ ಮುತ್ತಾ ಕೊರೋನಾ ಸೋಂಕಿನ ಪ್ರಕರಣ ಪತ್ತೆಯಾದರೇ, ಮತ್ತೆ ಕ್ಯಾಂಪಸ್ ಮುಚ್ಚವ ಅಗತ್ಯವಿದ್ದರೇ ಕ್ರಮ ವಹಿಸಬೇಕು.

ಇನ್ನು ಸಂಸ್ಥೆಯ ಮುಖ್ಯಸ್ಥರು ಕೂಡ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕೆಂದು ಹೇಳಿದೆ. ಮುಖ್ಯವಾಗಿ ನೈರ್ಮಲ್ಯ, ಸುರಕ್ಷತೆ ಮತ್ತು ಕ್ಯಾಂಪಸ್ ಅನ್ನು ಪುನಃ ತೆರೆಯುವ ಮುನ್ನ ಆರೋಗ್ಯ ಕ್ರಮಗಳನ್ನು ಸಿದ್ಧಪಡಿಸಬೇಕು ಮತ್ತು ಸಿದ್ಧವಾಗಿಡಬೇಕು.ಸಾಂಸ್ಥಿಕ ಯೋಜನೆಯ ಸಮರ್ಪಕ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ನಿಯಮಿತವಾಗಿ ಮತ್ತು ಬೋಧಕ ಮತ್ತು ಸಿಬ್ಬಂದಿಯ ಸಹಾಯದಿಂದ ಮೇಲ್ವಿಚಾರಣೆ ನಡೆಸಬೇಕು.

ಹತ್ತಿರದ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ಎನ್ ಜಿಒಗಳು, ಆರೋಗ್ಯ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿರಬೇಕು. ಕೊರೊನಾ ವಿರುದ್ಧ ಹೋರಾಡಲು ಸಹಾಯ ಮತ್ತು ಬೆಂಬಲ ನೀಡಬೇಕು. ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಒಂದು ಯೋಜನೆ, ಅಂದರೆ, ಶೈಕ್ಷಣಿಕ ಕ್ಯಾಲೆಂಡರ್, ಬೋಧನೆ-ಕಲಿಕೆ ವಿಧಾನಗಳು, ಪರೀಕ್ಷೆಗಳು, ಮೌಲ್ಯಮಾಪನ ಇತ್ಯಾದಿಗಳನ್ನು ಮುಂಚಿತವಾಗಿಯೇ ಸಿದ್ಧವಾಗಿಡಬೇಕು.

ಕೊರೊನಾ ನಿಯಂತ್ರಣಕ್ಕಾಗಿ ಟಾಸ್ಕ್ ಗ್ರೂಪ್ ನಲ್ಲಿ ಹಿರಿಯ ವ್ಯಕ್ತಿಗಳನ್ನು ಒಳಗೊಂಡಿರಬಹುದು ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು, ಸಮುದಾಯಗಳು, ಎನ್ ಜಿಒಗಳು, ಆರೋಗ್ಯ ಸಂಸ್ಥೆಗಳು ಮತ್ತು ಸರಕಾರಿ ಅಧಿಕಾರಿಗಳು ಒಳಗೊಂಡಿರಬೇಕು. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳು ಮತ್ತು ಚಟುವಟಿಕೆಗಳ ಬಗ್ಗೆ ಕ್ಯಾಂಪಸ್ ನಲ್ಲಿ ಅರಿವು ಮೂಡಿಸಬೇಕು.

ಪ್ರತಿಯೊಬ್ಬ ಶಿಕ್ಷಕರು ಬೋಧಿಸುವ ವಿಷಯಗಳ ಬಗ್ಗೆ ವಿವರವಾದ ಬೋಧನಾ ಯೋಜನೆಯನ್ನು ತಯಾರಿಸಬೇಕು. ಶಿಕ್ಷಕರು ಇತ್ತೀಚಿನ ಬೋಧನಾ ವಿಧಾನಗಳೊಂದಿಗೆ ತಮ್ಮನ್ನು ತಾವು ಅಪ್ ಡೇಟ್ ಮಾಡಿಕೊಳ್ಳಬೇಕು ಮತ್ತು ಇ-ಸಂಪನ್ಮೂಲಗಳ ಲಭ್ಯತೆ ಬಗ್ಗೆ ಗಮನ ವಹಿಸಬೇಕು. ಅಲ್ಲದೇ ಶಿಕ್ಷಕರು ತಮ್ಮ ಹಾಗೂ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಿಗಾ ವಹಿಸಬೇಕು
ಪೋಷಕರು ತಮ್ಮ ಮಕ್ಕಳು ಮನೆಯಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಪೋಷಕರು ತಮ್ಮ ಮಕ್ಕಳು ಆರೋಗ್ಯವಾಗಿರದಿದ್ದರೆ ಹೊರಗೆ ಹೋಗಲು ಬಿಡಬಾರದು. ‘ಆರೋಗ್ಯ ಸೇತು ಆಯಪ್’ ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಪೋಷಕರು ಸಲಹೆ ನೀಡಬಹುದು. ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಪೋಷಕರು ಅವರಿಗೆ ಅರಿವು ಮೂಡಿಸಬೇಕು. ಪೋಷಕರು ಮಕ್ಕಳಿಗೆ ವ್ಯಾಯಾಮ, ಯೋಗ, ಧ್ಯಾನ, ಉಸಿರಾಟದ ವ್ಯಾಯಾಮಗಳನ್ನು ರೂಢಿಸಿಕೊಳ್ಳುತ್ತಾ, ಅವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳಿಸಬೇಕು.

ವಿದ್ಯಾರ್ಥಿಗಳು ಮುಖಕವಚ/ ಮುಖವಾಡಗಳನ್ನು ಧರಿಸಬೇಕ, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.ಮೊಬೈಲ್ ನಲ್ಲಿ ‘ಆರೋಗ್ಯ ಸೇತು ಆಪ್’ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಯಾವುದೇ ದೈಹಿಕ ಮತ್ತು ಮಾನಸಿಕ ಸದೃಢತೆಯ ಬಗ್ಗೆ ಜಾಗ್ರತೆ ವಹಿಸಬೇಕು. ವಿದ್ಯಾರ್ಥಿಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಚಟುವಟಿಕೆಗಳನ್ನು ಬೆಳೆಸಿಕೊಳ್ಳಬೇಕು. ವ್ಯಾಯಾಮ, ಯೋಗ, ತಾಜಾ ಹಣ್ಣುಗಳನ್ನು ತಿನ್ನುವಮತ್ತು ಆರೋಗ್ಯಕರ ಆಹಾರವನ್ನು ಒಳಗೊಂಡಿರಬಹುದು. ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಬೇಕು. ವಿದ್ಯಾರ್ಥಿಗಳು ಈ ಮಾರ್ಗದರ್ಶಿ ಸೂತ್ರಗಳು, ಸಲಹೆಗಳು ಮತ್ತು ಸೂಚನೆಗಳನ್ನು ಅನುಸರಿಸಬೇಕು. ಹೆಚ್ಚಿನ ಮಾಹಿತಿಗೆ ಕೋವಿಡ್ ಟಾಸ್ಕ್ ಪೋರ್ಸ್ ನಿಂದ ಪಡೆಯಬಹುದು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular