ನವದೆಹಲಿ : ಕೊರೊನಾ ವೈರಸ್ ಸೋಂಕು ಇಡೀ ಗ್ರಾಮಸ್ಥರನ್ನೇ ಕಂಗೆಡಿಸಿದೆ. ಗ್ರಾಮದಲ್ಲಿನ ಪ್ರತಿಯೊಬ್ಬರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.

ಹೌದು, ಲಾಹೌಲ್ ಕಣಿವೆಯಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿದೆ. ಮನಾಲಿ – ಲೇಹ್ ಹೆದ್ದಾರಿಯಲ್ಲಿನ ಥೋರಂಗ್ ಗ್ರಾಮದಲ್ಲಿ ಕೇವಲ 42 ಮಂದಿ ನಿವಾಸಿಗಳಿದ್ದು, ಇದರಲ್ಲಿ 41 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ಲಾಹೌಲ್ನ ಸ್ಪಿಟಿ ಜಿಲ್ಲೆಯಲ್ಲಿನ ಸುಮಾರು 856 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೆ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದು ನಡೆದಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಮಸ್ಥರೆಲ್ಲ ಒಂದೇ ಕಡೆ ಜಮಾಯಿಸಿದ್ದರು. ಈ ವೇಳೆ ಸಾಮಾಜಿಕ ಅಂತರ ಕಾಪಾಡಲು ಗ್ರಾಮಸ್ಥರು ನಿರ್ಲಕ್ಷ್ಯ ತೋರಿದ ಕಾರಣ ಈ ರೀತಿ ಊರಿಗೆ ಊರೇ ಸೋಂಕಿಗೆ ಒಳಪಟ್ಟಿದೆ ಎನ್ನಲಾಗ್ತಿದೆ.

ಜಿಲ್ಲಾಡಳಿತ ಗ್ರಾಮದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.