ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರ ಮುಂದುವರಿಸಿದೆ. ರಾಜ್ಯದಲ್ಲಿಂದು ಒಂದೇ ದಿನ ಬರೋಬ್ಬರಿ 45 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕೊರೊನಾ ಪೀಡಿತರ ಸಂಖ್ಯೆ 750ಕ್ಕೆ ಏರಿಕೆಯಾಗಿದ್ದು, ಮಹಾಮಾರಿ ಆತಂಕವನ್ನು ಮೂಡಿಸಿದೆ.

ದಾವಣಗೆರೆ ಜಿಲ್ಲೆಯಲ್ಲಿ 14, ಭಟ್ಕಳ (ಉತ್ತರ ಕನ್ನಡ) 12, ಬೆಳಗಾವಿ 11, ಬೆಂಗಳೂರು 7, ಬಳ್ಳಾರಿ 1 ಪ್ರಕರಣ ಸೇರಿದಂತೆ ಒಟ್ಟು 45 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ 24 ಮಂದಿ ಮಹಿಳೆಯರಾಗಿದ್ದರೆ, 60 ವರ್ಷ ಮೇಲ್ಪಟ್ಟ 5 ಮಂದಿಗೆ ಕೊರೊನಾ ಸೋಂಕು ಬಾಧಿಸಿದೆ. ಇಷ್ಟೇ ಅಲ್ಲಾ ಭಟ್ಕಳದಲ್ಲಿ 5 ತಿಂಗಳ ಹಸುಗೂಸಿಗೆ ಹಾಗೂ 10 ವರ್ಷದೊಳಗಿನ 6 ಮಕ್ಕಳಿಗೂ ಸೋಂಕು ತಗುಲಿದೆ.

ಕೊರೊನಾ ಲಾಕ್ ಡೌನ್ ಸಡಿಲ ಮಾಡುತ್ತಿದ್ದಂತೆಯೇ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದು ತಲೆನೋವು ತರಿಸಿದೆ.