ಕೋಟ : ಕೊರೊನಾ ವೈರಸ್ ಸೋಂಕು ಕೋಟ ಹೋಬಳಿಯಲ್ಲಿ ಹೆಚ್ಚುತ್ತಲೇ ಇದೆ. ಕಳೆದರಡು ದಿನಗಳ ಅವಧಿಯಲ್ಲಿ ಕೋಟ ಹೋಬಳಿ ಯಾದ್ಯಂತ ಬರೋಬ್ಬರಿ 14 ಪ್ರಕರಣಗಳು ಪತ್ತೆಯಾಗಿದೆ. ಕಳೆದ ಮೂರು ದಿನಗಳ ಅವಧಿಯಲ್ಲಿ ಬರೋಬ್ಬರಿ 30 ಪ್ರಕರಣಗಳು ಪತ್ತೆ ಯಾಗಿರುವುದು ಆತಂಕ ಮೂಡಿಸಿದೆ.

ಪಾಂಡೇಶ್ವರದ ಮೂಡಹಡುವಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಇದೀಗ ಒಂದೇ ಕುಟುಂಬದ 6 ಮಂದಿಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಂಕಿತರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಗುಂಡ್ಮಿಯ ಮಹಿಳೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ಮಲ್ಪೆಯಲ್ಲಿ ಮೀನುಗಾರಿಕಾ ವೃತ್ತಿಯನ್ನು ಮಾಡುತ್ತಿದ್ದ ವಡ್ಡರ್ಸೆಯ ನಿವಾಸಿಯೋರ್ವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಿನಿಂದ ಆಗಮಿಸಿದ್ದ ಬಾಳ್ಕುದ್ರುವಿನ ನಿವಾಸಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ತೆಕ್ಕಟ್ಟೆಯ ಕಾರು ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದ ಕೋಟ ಮಣೂರಿನ ವ್ಯಕ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಸೋಂಕಿತರ ಮನೆಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳನ್ನು ಕೋಟ ಕಂದಾಯ ನೀರಿಕ್ಷಕ ರಾಜು ನೇತ್ರತ್ವದಲ್ಲಿಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ.