ಬೆಂಗಳೂರು : ಕೊರೊನಾ ಮಹಾಮಾರಿಯ ವಿರುದ್ದ ಹೋರಾಟಕ್ಕಿಳಿದಿರೋ ಪ್ರಧಾನಿ ನರೇಂದ್ರ ಮೋದಿ ಕರೆಗೆ ಇಡೀ ದೇಶವೇ ಒಂದಾಗಿದೆ.

ರಾತ್ರಿ 9 ಗಂಟೆಗೆ ಮನೆಯ ಲೈಟ್ ಆಪ್ ಮಾಡಿ ಮನೆಯ ಮುಂಭಾಗದಲ್ಲಿ ಹಣತೆ, ಮೇಣದ ಬತ್ತಿ, ಮೊಬೈಲ್ ಟಾರ್ಚ್, ದೀಪ ಬೆಳಗೋ ಮೂಲಕ ನಮೋ ಕರೆಗೆ ಇಡೀ ಭಾರತೀಯರು ಬೆಂಬಲ ಸೂಚಿಸಿದ್ದಾರೆ.

ಕೊರೊನಾ ಸೋಂಕು ದೇಶದಾದ್ಯಂತ ಹರಡುತ್ತಿರೋ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊರೊನಾ ವಿರುದ್ದ ಮನೆಯಲ್ಲಿಯೇ ದೀಪ ಬೆಳಗುವಂತೆ ಕರೆ ನೀಡಿದ್ದರು.

ಅದರಂತೆಯೇ ಇಡೀ ದೇಶದ ಜನತೆ ನಮೋ ಕರೆಗೆ ಬೆಂಬಲ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ದೀಪ ಬೆಳಗಿಸಿದ್ದಾರೆ.

ಅದ್ರಲ್ಲೂ ರಾಷ್ಟ್ರಪತಿ ರಾಮನಾಥ ಕೋವಿಂದ್ ತಮ್ಮ ಪತ್ನಿಯ ಜೊತೆಗೆ ದೀಪ ಬೆಳಗಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದವರೊಂದಿಗೆ ದೀಪ ಹಚ್ಚಿದ್ದಾರೆ.

ಮುಖ್ಯಮಂತ್ರಿ ಚಂದ್ರಶೇಖರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಚಿವ ಜಗದೀಶ್ ಶೆಟ್ಟರ್. ಚಿತ್ರರಂಗದ ತಾರೆಯರು, ಕ್ರಿಕೆಟ್ ಆಟಗಾರರು ಮನೆಯಲ್ಲಿಯೇ ದೀಪ ಬೆಳಗಿ ಬೆಂಬಲ ಸೂಚಿಸಿದ್ದಾರೆ.

ಗುರುಪುರದ ವಜ್ರದೇಹಿ ಮಠದ ಸ್ವಾಮೀಜಿ ಮಕ್ಕಳೊಂದಿಗೆ ದೀಪ ಬೆಳಗಿದ್ದಾರೆ.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೀಪ ಬೆಳಗಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತುಳಸಿ ಕಟ್ಟೆಯಲ್ಲಿ ದೀಪ ಬೆಳಗಿದ್ರು.

ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್ ಅವರು ಮನೆಯ ಮುಂಭಾಗದಲ್ಲಿ ದೀಪ ಬೆಳಗಿದ್ದಾರೆ.


ಕಡಬ ಪೊಲೀಸ್ ಠಾಣೆಯ ಮುಂಭಾಗದಲ್ಲಿ ದೀಪ ಬೆಳಗಲಾಯಿತು.

ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂಧಿಗಳು ದೀಪ ಬೆಳಗಿದ್ದಾರೆ.

ಪತ್ರಕರ್ತ ದಾಮೋದರ್ ದಂಡೋಲೆ ಪತ್ನಿಯೊಂದಿಗೆ ದೀಪ ಬೆಳಗಿದ್ದಾರೆ.




































